ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!

Published : Dec 10, 2025, 09:55 PM IST

ಕನ್ನಡ ಧಾರಾವಾಹಿಗಳು ಸ್ತ್ರೀಪ್ರಧಾನವಾಗಿದ್ದು, ನಾಯಕಿ ಮತ್ತು ವಿಲನ್ ನಡುವಿನ ಸಂಘರ್ಷವೇ ಮುಖ್ಯವಾಗಿರುತ್ತದೆ. ಬಹುತೇಕ ಸೀರಿಯಲ್‌ಗಳಲ್ಲಿ ಗಂಡ-ಹೆಂಡತಿಯ ಬೆಡ್‌ರೂಮ್ ಬಾಗಿಲು ತೆರೆದಿರುವುದೇಕೆ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

PREV
17
ಸೀರಿಯಲ್​ ಗೋಳು

ಸೀರಿಯಲ್​ಗಳು ಎಂದರೆ ಅದು ಕೇವಲ ಕಾಲ್ಪನಿಕ ಕಥೆ. ಅಲ್ಲಿ ಏನು ಬೇಕಾದ್ರೂ ಆಗ್ಬೋದು, ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಟರ್ನ್​ ತೆಗೆದುಕೊಳ್ಳಬಹುದು. ಕೇವಲ ಮನರಂಜನೆಯ ದೃಷ್ಟಿಯಿಂದ ಧಾರಾವಾಹಿ ನೋಡ್ಬೇಕು ಎಂದ್ರೆ ಎಷ್ಟು ಮಂದಿ ಕೇಳ್ತಾರೆ ಹೇಳಿ?

27
ಮೈಮೇಲೆ ಪಾತ್ರಗಳ ಆಹ್ವಾನ

ಸೀರಿಯಲ್​ಗಳಲ್ಲಿ ಮುಳುಗಿ ಹೋಗ್ತಾರೆ. ಆ ಸೀರಿಯಲ್​ಗಳ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು, ಆ ಪಾತ್ರವೇ ತಾನು ಎನ್ನುವಂತೆ ಎವಕ್ಕದೇ ಬೈಯುತ್ತಲೇ ಒಂದೂ ದಿನ ಮಿಸ್​ ಮಾಡದೇ ನೋಡುತ್ತಾರೆ. ಇಂಥವರಲ್ಲಿ ಮಹಿಳೆಯರೇ ಹೆಚ್ಚು ಎನ್ನೋದು ಏನೂ ಗುಟ್ಟಿನ ವಿಷ್ಯವಲ್ಲ ಬಿಡಿ.

37
ನಾಯಕ ಹೆಸರಿಗೆ ಮಾತ್ರ

ಅದಕ್ಕಾಗಿಯೇ ಸೀರಿಯಲ್​ಗಳು ಸ್ತ್ರೀಪ್ರಧಾನ. ನಾಯಕ ನಾಮ್​ ಕೇ ವಾಸ್ತೆ ಮಾತ್ರ. ಏನಿದ್ರೂ ನಾಯಕಿ ಮತ್ತು ಲೇಡಿ ವಿಲನ್​ಗಳದ್ದೇ ಕಾರುಬಾರು. ಅಲ್ಲೊಬ್ಬ ವಿಲನ್​ ಮಲತಾಯಿ ಇಲ್ಲವೇ ಅತ್ತಿಗೆ. ಆದರೆ ಆಕೆ ವಿಲನ್​ ಎನ್ನೋದು ಸೀರಿಯಲ್​ ಎಂಡ್ ಆಗೋ ದಿನ ನಾಯಕನಿಗೆ ತಿಳಿಯುವುದು ಮಾತ್ರ ಎಲ್ಲಾ ಸೀರಿಯಲ್​ಗಳ ಗೋಳು!

47
ಬೆಡ್​ರೂಮ್​ ಓಪನ್​

ಅದಿರಲಿ ಬಿಡಿ. ಆದರೆ ಸೀರಿಯಲ್​ ಪ್ರೇಮಿಗಳನ್ನು ಕಾಡ್ತಿರೋ ಇನ್ನೊಂದು ಪ್ರಶ್ನೆ ಎಂದರೆ, ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿಯೂ ಗಂಡ-ಹೆಂಡ್ತಿ ಬೆಡ್​ರೂಮ್​ ಓಪನ್ನೇ ಯಾಕಿರತ್ತೆ ಎನ್ನೋದು, ಅದೂ ಅವರಿಬ್ಬರೂ ಮಲಗಿದ್ದಾಗ!

57
ನಿತ್ಯಾಳ ತಾಳಿ

ಇದೀಗ ಕರ್ಣ ಸೀರಿಯಲ್​ನಲ್ಲಿ ನಿತ್ಯಾಳ ತಾಳಿಯನ್ನು ಬೆಡ್​ರೂಮ್​ಗೆ ನುಗ್ಗಿ ಕಟ್​ ಮಾಡಿದರೂ ಆಕೆಗೆ ಗೊತ್ತಾಗಲಿಲ್ಲ ಎನ್ನುವುದು ಎಷ್ಟು ವಿಚಿತ್ರವೋ ಅಷ್ಟೇ ವಿಚಿತ್ರ, ಎಲ್ಲಾ ಸೀರಿಯಲ್​ಗಳಲ್ಲಿಯೂ ಬೆಡ್​ರೂಮ್​ ತೆರೆದೇ ಇರುವುದು!

67
ದೂರ ದೂರ ಇರೋದೇ ಟ್ರೆಂಡ್​

ಇದಕ್ಕೆ ಕಾರಣವೂ ಇದ್ದೇ ಇದೆ. ಅದಕ್ಕೆ ಒಂದೇ ಕಾರಣ ಎಂದ್ರೆ ವಿಲನ್​ಗಳ ಎಂಟ್ರಿಯಾಗಬೇಕು ಎನ್ನೋದು ಅಷ್ಟೇ. ಬಹುತೇಕ ಸೀರಿಯಲ್​ಗಳಲ್ಲಿ ಮದುವೆಯಾದ್ರೂ ಗಂಡ-ಹೆಂಡ್ತಿ ದೈಹಿಕ ಸಂಬಂಧ ನಡೆದೇ ಇರುವುದಿಲ್ಲ ಎನ್ನುವುದು ಸೀರಿಯಲ್​ಗಳಲ್ಲಿ ಟ್ರೆಂಡ್​ ಆಗಿ ಬಹಳ ವರ್ಷಗಳೇ ಕಳೆದು ಬಿಟ್ಟಿವೆ.

77
ಗಾಢನಿದ್ದೆಯಲ್ಲಿ...

ಅವ್ರು ಒಟ್ಟಾಗಿ ಇರಲಿ, ಬಿಡಲಿ ಒಟ್ಟಿನಲ್ಲಿ ವಿಲನ್​ ಎಂಟ್ರಿಯಾಗಬೇಕು ಎಂದ್ರೆ ಬೆಡ್​ರೂಮ್​ ಓಪನ್​ ಇರ್ಬೇಕು. ಅಲ್ಲಿ ನಾಯಕನೋ, ನಾಯಕಿಯೋ ಎಷ್ಟು ಗಾಢನಿದ್ದೆಯಲ್ಲಿ ಇರಬೇಕು ಎಂದರೆ, ಅವರ ಕುತ್ತಿಗೆಯಿಂದ ಸರವನ್ನು ಕತ್ತರಿಸಿ ತೆಗೆದರೂ ಗೊತ್ತಾಗಬಾರದು, ಅವರ ಕೋಣೆಗೆ ಹೋಗಿ ಈ ವಿಲನ್​ಗಳು ಕನ್ನ ಹಾಕಿದ್ರೂ ತಿಳಿಯಬಾರದು. ಇದರ ಬಗ್ಗೆ ಇದೀಗ ಕರ್ಣ ಸೀರಿಯಲ್​ ಪ್ರೊಮೋದಲ್ಲಿ ತಮಾಷೆಯ ಕಮೆಂಟ್ಸ್ ಬರುತ್ತಿವೆ.

Read more Photos on
click me!

Recommended Stories