Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?

Published : Dec 11, 2025, 10:00 PM IST

'ಕರ್ಣ' ಸೀರಿಯಲ್‌ನಲ್ಲಿ ನಿಧಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ, ಆಕೆಯ ಮೋಸದಿಂದ ರೆಡ್‌ಲೈಟ್ ಏರಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾಳೆ. ಈ ಸಂಚಿನ ಹಿಂದೆ ಸಂಜಯ್ ಕೈವಾಡವಿದೆ.

PREV
17
ಭಾರಿ ಟ್ವಿಸ್ಟ್​

ಕರ್ಣ ಸೀರಿಯಲ್​ (Karna Serial) ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ನಿಧಿಗೆ ಕರ್ಣ ಮತ್ತು ನಿತ್ಯಾಳ ಸತ್ಯ ಗೊತ್ತಾಯ್ತು. ಇನ್ನೇನು ಎಲ್ಲಾ ಸರಿ ಹೋಗತ್ತೆ ಎಂದುಕೊಂಡಾಗಲೇ ಇದೀಗ ನಿಧಿ ಇನ್ನೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಳೆ. ಕುರುಡಿಯೊಬ್ಬಳಿಗೆ ಡ್ರಾಪ್​ ಕೊಡಲು ಹೋಗಿ ಮಹಾ ವಂಚನೆಯಲ್ಲಿ ಬಿದ್ದಿದ್ದಾಳೆ.

27
ಕುರುಡಿ ವೇಷದಲ್ಲಿ ಮೋಸ

ಕುರುಡಿಯ ವೇಷದಲ್ಲಿ ಬಂದ ಹುಡುಗಿಯೊಬ್ಬಳು ನಿಧಿಯನ್ನು ಮೋಸದ ಸುಳಿಯಲ್ಲಿ ಸಿಲುಕಿಸಿದ್ದಾಳೆ. ತನಗೆ ಡ್ರಾಪ್​ಕೊಡುವಂತೆ ಹೇಳಿದಾಗ ನಿಧಿ ಡ್ರಾಪ್​ ಕೊಟ್ಟಿದ್ದಾಳೆ.

37
ಬ್ಯಾಗ್​ನಲ್ಲಿ ಹಾಕಿದ್ದೇನು?

ಆಗ ಗುಟ್ಟಾಗಿ ಆಕೆ ನಿಧಿಯ ಬ್ಯಾಗ್​ನಲ್ಲಿ ಏನೋ ಹಾಕಿದ್ದಳು. ಆದರೆ ಅದೇ ಇದೀಗ ನಿಧಿಯನ್ನು ಜೈಲಿಗೆ ತಳ್ಳಿದೆ. ಅಷ್ಟಕ್ಕೂ, ಆ ಕುರುಡಿಯನ್ನು ಡ್ರಾಪ್​ಮಾಡಿದ ಜಾಗ ನೋಡಿದ ನಿಧಿಗೆ ಈ ಜಾಗ ಸರಿಯಿಲ್ಲ ಎನ್ನಿಸಿದೆ. ಈ ಬಗ್ಗೆ ಕುರುಡಿಯನ್ನು ಕೇಳಿದ್ದಾಳೆ.

47
ಪೊಲೀಸರ ಎಂಟ್ರಿ

ಆದರೆ ಹಾರಿಕೆ ಉತ್ತರ ಕೊಟ್ಟ ಆಕೆ, ನನಗೆ ಒಳಗಡೆವರೆಗೆ ಕರೆದುಕೊಂಡು ಹೋಗು ಎಂದಿದ್ದಾಳೆ. ಭಯ ಪಡುತ್ತಲೇ ನಿಧಿ ಕರೆದುಕೊಂಡು ಹೋಗಿದ್ದಾಳೆ. ಅದು ರೆಡ್​ಲೈಟ್​ ಏರಿಯಾ. ಆಗಲೇ ಪೊಲೀಸರ ಎಂಟ್ರಿಯಾಗಿದೆ.

57
ಸಪ್ಲೈ ಮಾಡುವಾಕೆ

ಪೊಲೀಸರು ಬ್ಯಾಗ್​ ಚೆಕ್​ ಮಾಡಿದಾಗ, ನಿಧಿಯ ಬ್ಯಾಗ್​ನಲ್ಲಿ ಒಂದಿಷ್ಟು ಜಾಗಗಳ ಲಿಸ್ಟ್​ ಸಿಕ್ಕಿದೆ. ಅದರ ಪ್ರಕಾರ, ಆಕೆ ಹುಡುಗಿಯರನ್ನು ಇಂಥ ಏರಿಯಾಗಳಿಗೆ ಸಪ್ಲೈ ಮಾಡುವಾಕೆ. ಕೊನೆಗೆ ಮೋಸದ ಜಾಲಕ್ಕೆ ಸಿಲುಕಿಸಿದ್ದ ಯುವತಿ ಕೂಡ ನಿಧಿ ತನಗೆ ಮೋಸ ಮಾಡಿ ಇಲ್ಲಿ ಕರೆದುಕೊಂಡು ಬಂದಿರುವುದಾಗಿ ಹೇಳಿದ್ದಾಳೆ.

67
ಜೈಲಿನಲ್ಲಿ ನಿಧಿ

ಪೊಲೀಸರು ಜೈಲಿಗೆ ಹಾಕಿದ್ದಾರೆ. ಅಲ್ಲಿ, ಸಂಜಯ್​ ಎಂಟ್ರಿ ಕೊಟ್ಟಿದ್ದಾನೆ. ತನ್ನನ್ನು ಅವನು ಬಿಡಿಸಬಹುದು ಎಂದು ನಿಧಿ ಅಂದುಕೊಂಡಿದ್ದಾಳೆ.

77
ಮುಂದೇನು?

ಆದರೆ ಈ ಪ್ಲ್ಯಾನ್​ ಮಾಡಿದ್ದೇ ಅವನು. ಅವನು ಕೂಡ ನಿಧಿಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿ ಆಕೆಯನ್ನು ಇನ್​ಸಲ್ಟ್​ ಮಾಡಿ ಹೋಗಿದ್ದಾನೆ. ಮುಂದೇನಾಗತ್ತೆ? ಕರ್ಣ ಬಂದು ಕಾಪಾಡ್ತಾನಾ?

Read more Photos on
click me!

Recommended Stories