ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.
ಸದ್ಯ ಕರ್ಣ ಸೀರಿಯಲ್ (Karna Serial)ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಹೇಗಾದ್ರೂ ಮಾಡಿ ನಿಧಿ ಮತ್ತು ಅರ್ಜುನ್ ಮದುವೆಯನ್ನು ಮಾಡಿಯೇ ತೀರಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ ವಿಲನ್ ರಮೇಶ್. ಅದೇ ಇನ್ನೊಂದೆಡೆ, ತನ್ನ ಅಕ್ಕ ನಿತ್ಯಾ ಕರ್ಣನನ್ನು ಲವ್ ಮಾಡ್ತಿರೋ ವಿಷಯ ತಿಳಿದಿರುವ ನಿಧಿ, ಅಕ್ಕ ಮತ್ತು ಕರ್ಣ ಒಂದಾಗಿ ಇರಬೇಕು ಎಂದು ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಾಳೆ.
26
ನಿಧಿ ಮತ್ತು ಅರ್ಜುನ್ ಎಂಗೇಜ್ಮೆಂಟ್
ಇದರ ನಡುವೆಯೇ, ನಿಧಿ ಮತ್ತು ಅರ್ಜುನ್ ಎಂಗೇಜ್ಮೆಂಟ್ ಆಗುವ ಕಾಲ ಬಂದಿದೆ. ಮೊದಲಿಗೆ ನಿಧಿ ಏಕೆ ಹೀಗೆ ತನ್ನನ್ನು ಅವಾಯ್ಡ್ ಮಾಡುತ್ತಿದ್ದಾಳೆ ಎಂದು ಕರ್ಣನಿಗೆ ತಿಳಿದಿರಲಿಲ್ಲ. ಆದರೆ ಕೊನೆಗೆ ವಿಷಯ ತಿಳಿದಿದೆ. ಆದ್ದರಿಂದ ರಮೇಶ್ಗೆ ಅವನದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಮುಂದಾಗಿದ್ದಾನೆ.
36
ರಮೇಶ್ಗೆ ತಲೆ ತಿರುಗಿದೆ
ಎಂಗೇಜ್ಮೆಂಟ್ಗೆ ತಾನೇ ಖುದ್ದು ನಿಂತು ಎಲ್ಲಾ ಕಾರ್ಯ ಮಾಡುತ್ತಿರುವುದನ್ನು ನೋಡಿ ರಮೇಶ್ಗೆ ತಲೆ ತಿರುಗಿದೆ. ಏನೋ ಎಡವಟ್ಟು ಆಗ್ತಿದೆ ಎಂದು ಎನ್ನಿಸಿದೆ. ಆದರೂ ಕರ್ಣ ಯಾಕೆ ನಿಧಿ ಮತ್ತು ಅರ್ಜುನನ ಎಂಗೇಜ್ಮೆಂಟ್ಗೆ ಇಷ್ಟು ಉತ್ಸುಕನಾಗಿದ್ದಾನೆ ಎನ್ನೋದು ಅವನಿಗೆ ಗೊತ್ತಾಗ್ತಿಲ್ಲ.
ಇದೀಗ ಎಂಗೇಜ್ಮೆಂಟ್ ನಡೆಯುತ್ತಿದೆ. ಇಲ್ಲೇ ಇರೋದು ವಿಶೇಷ. ಅರ್ಜುನ್ನನ್ನು ಮಹಡಿ ಮೇಲೆ ಕಳಿಸಿರುವ ಕರ್ಣ, ಅಲ್ಲಿಂದ ಒಂದು ದಾರ ಬಿಟ್ಟಿದ್ದಾನೆ. ಆ ದಾರವನ್ನು ನಿಧಿಯ ಬೆರಳಿಗೆ ಸುತ್ತಿದ್ದಾನೆ. ಅರ್ಜುನ್ ಅಲ್ಲಿಂದ ಉಂಗುರ ಹಾಕಿದರೆ ಅದು ನಿಧಿಯ ಬೆರಳಿಗೆ ಬರುತ್ತದೆ ಎನ್ನುವುದು ಲಾಜಿಕ್!
56
ನಿಧಿ-ಕರ್ಣನ ಎಂಗೇಜ್ಮೆಂಟ್
ಕೊನೆಗೆ ದಾರ ಕೆಳಗೆ ಬರುವ ಸಮಯದಲ್ಲಿಯೇ ಲೈಟ್ ಆಫ್ ಮಾಡಲಾಗಿದೆ. ಬೆರಳಿನ ಹತ್ತಿರ ಉಂಗುರ ಬಂದಾಗ ಕರ್ಣ ಆ ಉಂಗುರವನ್ನು ತಾನೇ ನಿಧಿಗೆ ತೊಡಿಸಿದ್ದಾನೆ. ಅಲ್ಲಿಗೆ ಕರ್ಣ ಮತ್ತು ನಿಧಿ ಎಂಗೇಜ್ಮೆಂಟ್ ಮುಗಿದಿದೆ.
66
ತಲೆಯ ಹುಡುಕಾಟದಲ್ಲಿ ವೀಕ್ಷಕರು
ಇದನ್ನು ನೋಡಿದ ವೀಕ್ಷಕರಿಗೆ ಖುಷಿಯಾದರೂ, ಇಂಥ ಐಡಿಯಾ ಕೊಟ್ಟಿರೋ ತಲೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ದಾರದಿಂದ ಉಂಗುರ ಬಂದರೆ, ಅದು ನೇರವಾಗಿ ಬೆರಳಿಗೆ ಹೋಗಿ ಕುಳಿತುಕೊಳ್ಳಲು ಸಾಧ್ಯನಾ ಎನ್ನುವುದು ಅವರ ಪ್ರಶ್ನೆ. ಇಂಥ ಹುಚ್ಚು ಲಾಜಿಕ್ ಎಲ್ಲಿಯೂ ನೋಡಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇಂಥದ್ದೊಂದು ವಿಭಿನ್ನ ಐಡಿಯಾ ಬಂದವರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಒಟ್ಟಿನಲ್ಲಿ ಈ ಪ್ಲ್ಯಾನ್ ಮಾಡಿರೋ ಹಿಂದಿನ ತಲೆ ಎಲ್ಲಿದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.