‘ಕರ್ಣ’ ಸೀರಿಯಲ್ ಮೂಲಕ ಜನಪ್ರಿಯರಾಗಿರುವ ನಟ ಕಿರಣ್ ರಾಜ್, ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಚರ್ಚೆಯಲ್ಲಿದ್ದಾರೆ. ನಟನೆಯ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರ ಬದುಕಿನ ಹಲವು ಅಪರೂಪದ ಸಂಗತಿಗಳನ್ನು ಈ ಲೇಖನ ಅನಾವರಣಗೊಳಿಸುತ್ತದೆ.
ಸದ್ಯ ಕರ್ಣ ಸೀರಿಯಲ್ (Karna Serial) ಅತಿ ಹೆಚ್ಚು ವೀಕ್ಷಣೆ ಕಾಣುತ್ತಿರುವ ಧಾರಾವಾಹಿಗಳಲ್ಲಿ ಒಂದು ಎನ್ನಿಸಿದೆ. ಇದರಲ್ಲಿ ಕರ್ಣ ಆಗಿ ನಟಿಸ್ತಿರೋ ನಟನ ಹೆಸರು ಕಿರಣ್ ರಾಜ್. ಈ ಸೀರಿಯಲ್ನಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚೇ ಒಳ್ಳೆಯವನು ಎನ್ನಿಸಿಕೊಂಡು ಕೆಲವೊಮ್ಮೆ ಇರಿಟೇಟ್ ಮಾಡುವುದೂ ಇದೆ ಎನ್ನುವುದು ವೀಕ್ಷಕರ ಅಭಿಮತ. ಆದರೆ, ರಿಯಲ್ ಜೀವನದಲ್ಲಿಯೂ ಇಂಥ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರು ಇರುತ್ತಾರೆ ಎನ್ನುವುದು ನಟನ ಮಾತು.
27
ಕಿರಣ್ ರಾಜ್ಗೆ ಭರ್ಜರಿ ಫ್ಯಾನ್ಸ್
ಅದೇನೇ ಇದ್ದರೂ ಕಿರಣ್ ರಾಜ್ ಅವರ ನಟನೆಗೆ ಮನಸೋಲದವರೇ ಇಲ್ಲ. ಇವರು ಇದಾಗಲೇ ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲಿ ನಟಿಸಿಯೂ ಸೈ ಎನ್ನಿಸಿಕೊಂಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. 1993ರ ಜುಲೈ 5ರಂದು ಹುಟ್ಟಿರುವ ನಟನಿಗೆ ಈಗ 32 ವರ್ಷ ವಯಸ್ಸು.
37
ಹಲವು ಸೀರಿಯಲ್ಗಳಲ್ಲಿ ನಟನೆ
ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಹೀಗೆ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಕದ್ದು ಗೆದ್ದಿರೋ ನಟ ಕಿರಣ್ ರಾಜ್, ಸೀರಿಯಲ್ಗಳ ನಟರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ನಿಜನಾ? ಈ ಪ್ರಶ್ನೆಯೊಂದು ಅವರಿಗೆ ಸಂದರ್ಶನದಲ್ಲಿ ಎದುರಾಗಿದೆ. ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟಿರೋ ನಟ, ನಾನೂ ಗೂಗಲ್ನಲ್ಲಿ ಈ ಬಗ್ಗೆ ನೋಡಿದ್ದೇನೆ ಎಂದಿದ್ದಾರೆ!
57
ಅತಿ ಹೆಚ್ಚು ಸಂಭಾವನೆ?
ಆದರೆ, ತಾವು ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಹೌದೋ, ಅಲ್ಲವೋ ಎನ್ನುವುದನ್ನು ಬಾಯಿ ಬಿಟ್ಟಿಲ್ಲ. ಬೇರೆಯವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲವಲ್ಲ, ಅದಕ್ಕೆ ನಾನು ಹೆಚ್ಚು ಪಡೆಯುತ್ತೇನೋ ಇಲ್ಲವೋ ಗೊತ್ತಾಗುವುದಿಲ್ಲ ಎನ್ನುತ್ತಲೇ ತಾವು ಪಡೆಯುವ ಸಂಭಾವನೆಯ ಬಗ್ಗೆ ಕೇಳಿದ ಪ್ರಶ್ನೆಗೂ ಸೂಕ್ಷ್ಮವಾಗಿ ಜಾಣ್ಮೆಯಿಂದ ನುಸುಳಿಕೊಂಡಿದ್ದಾರೆ.
67
ಸಮಾಜಸೇವೆಯಲ್ಲಿಯೂ ಮುಂದು
ಅಂದಹಾಗೆ, ನಟ ಕಿರಣ್ ರಾಜ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
77
ಜೀ ಕುಟುಂಬ ಅವಾರ್ಡ್ನಲ್ಲಿ ರಿವೀಲ್
ಜೀ ಕುಟುಂಬ ಅವಾರ್ಡ್ನಲ್ಲಿ ಇವರ ಈ ಸೇವೆಯ ಬಗ್ಗೆ ರಿವೀಲ್ ಮಾಡಲಾಗಿತ್ತು. ಅನಾಥಾಶ್ರಮ ಒಂದಕ್ಕೆ ಕಿರಣ್ ರಾಜ್ ಕಡೆಯಿಂದ ಪ್ರತಿತಿಂಗಳೂ ರೇಷನ್ ಬರುತ್ತದೆ. 25 ಮಕ್ಕಳ ಸ್ಕೂಲ್ ಫೀಸ್ ತುಂಬುತ್ತಿದ್ದಾರೆ. ಆಶ್ರಮದ ಮಕ್ಕಳನ್ನು ಟೂರ್ಗೂ ಕರೆದುಕೊಂಡು ಹೋಗ್ತಾರೆ. ಈ ಬಗ್ಗೆ ಖುದ್ದು ಆಶ್ರಮವಾಸಿಗಳು ಭಾವುಕರಾಗಿ ನುಡಿದಿದ್ದರು. ಮೈಸೂರು ಮಹಾರಾಜ ಯದುವೀರ ದತ್ತ ಅವರೂ ಕಿರಣ್ ರಾಜ್ ಅವರ ಕಾರ್ಯವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.