Karna Serial: ಮಧ್ಯರಾತ್ರಿ ಹೆದರಿದ ನಿತ್ಯಾಳ ಸಮಾಧಾನಕ್ಕೆ ಕೋಣೆಗೆ ಕರ್ಣ ಬಂದಾಗ ನಡೆದದ್ದೇ ಬೇರೆ! ಅಲ್ಲಿ ಆಗಿದ್ದೇನು?

Published : Nov 04, 2025, 10:09 PM IST

ತೇಜಸ್‌ನನ್ನು ಹುಡುಕಲು ಕರ್ಣ ಮತ್ತು ನಿತ್ಯಾ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೊಂದೆಡೆ, ಕರ್ಣನ ತಂದೆ ರಮೇಶ್ ಅವನ ವಿರುದ್ಧ ಸಂಚು ರೂಪಿಸಿದ್ದು, ಹೋಟೆಲ್‌ನಲ್ಲಿ ನಡೆದ ಘಟನೆಯಿಂದ ಕರ್ಣನಿಗೆ ನಿಧಿಯ ನೆನಪಾಗುತ್ತದೆ. ತೇಜಸ್‌ನ ಹುಡುಕಾಟವು ಕುತೂಹಲ ಮೂಡಿಸಿದೆ.

PREV
17
ತೇಜಸ್​ನನ್ನು ಹುಡುಕಿ ಚಿಕ್ಕಮಗಳೂರಿಗೆ

ಕರ್ಣ ಸೀರಿಯಲ್​ನಲ್ಲಿ, ಕರ್ಣ ಮತ್ತು ನಿತ್ಯಾ ತೇಜಸ್​ನನ್ನು ಹುಡುಕಿ ಚಿಕ್ಕಮಗಳೂರಿಗೆ ಹೊರಟಿದ್ದಾರೆ. ಮನೆಯಲ್ಲಿ ಹನಿಮೂನ್​ಗೆ ಹೋಗುವುದಾಗಿ ಹೇಳಿ ತೇಜಸ್​ನ ಹುಡುಕಿ ಹೊರಟಿದ್ದಾರೆ.

27
ಕರ್ಣನನ್ನು ಮುಗಿಸಲು ರೌಡಿ

ಕರ್ಣದ ತಂದೆ ರಮೇಶ್​ ತೇಜಸ್​ನ ಕಾಣೆ ಮಾಡಿರುವ ಸತ್ಯ ತಿಳಿಯದೇ, ನಿತ್ಯಾ ಚಿಕ್ಕಮಗಳೂರಿಗೆ ಹೋಗುವ ವಿಷ್ಯ ಹೇಳಿಬಿಟ್ಟಿದ್ದಳು. ಕರ್ಣ ಹೇಗೋ ಅದನ್ನು ತಪ್ಪಿಸಿದ್ದ. ಆದರೆ ಕರ್ಣನನ್ನು ಮುಗಿಸಲು ರೌಡಿಗಳನ್ನು ಬಿಟ್ಟಿದ್ದಾನೆ ರಮೇಶ್​.

37
ಹೋಟೆಲ್​ನಲ್ಲಿ ರೂಮ್​

ಅದೇ ಇನ್ನೊಂದೆಡೆ ಹೋಟೆಲ್​ಗೆ ಬಂದ ನಿತ್ಯಾ ಮತ್ತು ಕರ್ಣ ಬೇರೆ ಬೇರೆ ಕೋಣೆಯನ್ನು ಪಡೆದುಕೊಂಡಿದ್ದಾರೆ. ಮಧ್ಯರಾತ್ರಿ, ಬೆಚ್ಚಿಬಿದ್ದ ನಿತ್ಯಾ, ಕರ್ಣನ ಕೋಣೆಗೆ ಹೋಗಿ ಬಾಗಿಲು ತಟ್ಟಿ, ನನ್ನ ಕೋಣೆಯಲ್ಲಿ ಎಂದಿದ್ದಾಳೆ.

47
ಕರ್ಣ ಶಾಕ್​

ಇದನ್ನು ಕೇಳಿ ಶಾಕ್​ ಆದ ಕರ್ಣ, ಯಾರೋ ಬಂದಿರಬೇಕು ಎಂದು ಊಹಿಸಿ ನಿತ್ಯಾಳ ಕೋಣೆಗೆ ಹೋಗಿ ನೋಡಿದ್ರೆ ಅಲ್ಲಿ ಇದ್ದುದು ಹಲ್ಲಿ. ಇದನ್ನು ನೋಡಿ ಹೆದರುತ್ತೀರಾ ಎಂದು ನಕ್ಕಿದ್ದಾನೆ ಕರ್ಣ.

57
ಚಿಕ್ಕಂದಿನಿಂದಲೂ ಹಲ್ಲಿ ಎಂದರೆ ಭಯ

ನನಗೆ ಚಿಕ್ಕಂದಿನಿಂದಲೂ ಹಲ್ಲಿ ಎಂದರೆ ಭಯ. ಹಲ್ಲಿ ಬಂದರೆ ನಿಧಿಯೇ ಅದನ್ನು ಓಡಿಸುತ್ತಿದ್ದಳು ಎನ್ನುತ್ತಿದ್ದಂತೆಯೇ ಕರ್ಣನಿಗೆ ನಿಧಿಯ ನೆನಪಾಗಿದೆ.

67
ನಿಧಿಯ ನೆನಪಿನಲ್ಲಿದ್ದಾನೆ ಕರ್ಣ

ಕೋಣೆಗೆ ಬಂದು ನಿಧಿಯ ನೆನಪಿನಲ್ಲಿದ್ದಾನೆ ಕರ್ಣ. ಇನ್ನೆರಡು ದಿನಗಳಲ್ಲಿ ತೇಜಸ್​ ಸಿಗುತ್ತಾನೆ. ಎಲ್ಲವೂ ಸರಿ ಹೋಗುತ್ತದೆ. ಬಂದು ಎಲ್ಲಾ ಸತ್ಯವನ್ನೂ ಹೇಳುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದಾನೆ ಕರ್ಣ.

77
ಸದ್ಯಕ್ಕಿರುವ ಕುತೂಹಲ

ಆದರೆ ಅಷ್ಟು ಸುಲಭದಲ್ಲಿ ತೇಜಸ್​ ಸಿಕ್ಕರೆ ಕರ್ಣ ಸೀರಿಯಲ್​ ಇಲ್ಲಿಗೇ ಮುಗಿದು ಬಿಡುತ್ತದೆ. ಸುಲಭದಲ್ಲಿ ಅಂತೂ ಆತ ಸಿಗಲು ಸಾಧ್ಯವೇ ಇಲ್ಲ. ಹಾಗಿದ್ದರೆ ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಈ ಎಪಿಸೋಡ್​ ನೋಡಲು ಇದರ ಮೇಲೆ ಕ್ಲಿಕ್​  ಮಾಡಿ

Read more Photos on
click me!

Recommended Stories