ಕರ್ಣ ಸೀರಿಯಲ್ ರೋಚಕ ತಿರುವು ಪಡೆದಿದ್ದು, ನಿಧಿಯ ಬದಲು ನಿತ್ಯಾಳಿಗೆ ಕರ್ಣ ತಾಳಿ ಕಟ್ಟಿದ್ದಾನೆ. ಮದುವೆ ವೇಳೆ ನಿತ್ಯಾ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ. ಈ ಟ್ವಿಸ್ಟ್‌ಗಳ ಬಗ್ಗೆ ಕರ್ಣ, ನಿತ್ಯಾ ಮತ್ತು ನಿಧಿ ಪಾತ್ರಧಾರಿಗಳು ಲೈವ್ ಬಂದು ಮಾತನಾಡಿದ್ದಾರೆ.
ಸದ್ಯ ಕರ್ಣ ಸೀರಿಯಲ್ (Karna Serial) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ನಿಧಿಯನ್ನು ಮದ್ವೆಯಾಗಬೇಕಿದ್ದ ಕರ್ಣ ನಿತ್ಯಾಳಿಗೆ ತಾಳಿ ಕಟ್ಟಿದ್ದಾನೆ. ಇದೇ ವೇಳೆ ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಆಕೆ ಗರ್ಭಿಣಿ ಎನ್ನುವುದು ತಿಳಿದಿದೆ. ಇವೆಲ್ಲಾ ಟ್ವಿಸ್ಟ್ ಮೇಲೆ ಟ್ವಿಸ್ಟ್ ನಡುವೆಯೇ ಕರ್ಣ ಸೀರಿಯಲ್ ಪಾತ್ರಧಾರಿಗಳಾಗಿರುವ ಕರ್ಣ, ನಿತ್ಯಾ ಮತ್ತು ನಿಧಿ ನೇರಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಮಾತನಾಡಿದ್ದಾರೆ.
27
ಕರ್ಣ ಸೀರಿಯಲ್ ನಟ-ನಟಿಯರು ಲೈವ್
ಕರ್ಣ ಉರ್ಫ್ ಕಿರಣ್ ರಾಜ್ (Kiran Raj), ನಿತ್ಯ ಪಾತ್ರಧಾರಿ ನಮ್ರತಾ ಗೌಡ (Namrutha Gowda) ಮತ್ತು ನಿಧಿ ಪಾತ್ರಧಾರಿ ಭವ್ಯ ಗೌಡ (Bhavya Gowda) ನೇರಪ್ರಸಾರದಲ್ಲಿ ಬಂದು ಮಾತನಾಡಿದ್ದಾರೆ. ನಾವೆಲ್ಲಾ ಗ್ಲಿಸರಿನ್ ಇಲ್ಲದೆಯೇ ತುಂಬಾ ಅತ್ತಿದ್ದೇವೆ. ತುಂಬಾ ಎಮೋಷನ್ ಆಗಿದ್ವಿ ಶೂಟಿಂಗ್ನಲ್ಲಿ ಎಂದಿದ್ದಾರೆ ನಟಿ ನಮ್ರತಾ ಗೌಡ. ನನ್ನನ್ನು ನೋಡಿಕೊಂಡು ತುಂಬಾ ಬೈದುಕೊಂಡಿದ್ದೀರಿ ಎನ್ನೋದು ಗೊತ್ತು. ಆದರೆ ಫುಲ್ ಸೀರಿಯಲ್ ನೋಡಿದಾಗ ನಿತ್ಯಾ ಹೀಗೆ ಏಕೆ ಮಾಡಿದಳು ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.
37
ನಿಜ ಜೀವನಕ್ಕೆ ಹತ್ತಿರ
ಕರ್ಣ ಯಾರನ್ನು ಮದ್ವೆ ಆಗ್ತಾನೆ, ಮುಂದೇನಾಗತ್ತೆ ಎನ್ನೋದನ್ನು ನೀವು ಸೀರಿಯಲ್ ನೋಡಿಯೇ ತಿಳಿಯಬೇಕು ಎಂದಿದ್ದಾರೆ ಈ ನಟರು. ಲೈಫ್ ಕೂಡ ಇದೇ ರೀತಿ. ನಾವು ಅಂದುಕೊಂಡದ್ದೇ ಒಂದು, ಆಗೋದೇ ಇನ್ನೊಂದು, ಅದನ್ನೇ ಸೀರಿಯಲ್ನಲ್ಲಿಯೂ ತೋರಿಸಲಾಗಿದೆ ಎಂದಿದ್ದಾರೆ ಕಿರಣ್ ರಾಜ್.
ನಮ್ಮ ಮೂರು ಕ್ಯಾರೆಕ್ಟರ್ ಅನ್ನು ಪರ್ಸನಲ್ ಆಗಿ ತೆಗೆದುಕೊಂಡಿರುವುದು ನಿಮ್ಮ ಕಮೆಂಟ್ಸ್ ನೋಡಿ ತಿಳಿಯುತ್ತದೆ. ಇದು ರಿಯಲ್ ಲೈಫ್ಗೂ ಅಪ್ಲೈ ಆಗುತ್ತದೆ. ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡು ಹೋಗುವ ಕ್ಯಾರೆಕ್ಟರ್ ಕೂಡ ಇದೆ. ಇದೊಂದು ಬರೀ ಸೀರಿಯಲ್ ಆಗಿರದೇ ನಿಜ ಜೀವನಕ್ಕೆ ಹತ್ತಿರವಾಗಿದೆ ಎಂದಿದ್ದಾರೆ ಕಿರಣ ರಾಜ್.
57
ನೆಗೆಟಿವ್ ಕಮೆಂಟ್ಸ್ಗೆ ಬೇಸರ
ಬ್ರೇಕ್ ಇಲ್ಲದೇ ಶೂಟಿಂಗ್ ಮಾಡುತ್ತಿದ್ದೇವೆ ಎಂದಿರೋ ನಮ್ರತಾ ಗೌಡ, ತಮಗೆ ಬರ್ತಿರೋ ನೆಗೆಟಿವ್ ಕಮೆಂಟ್ಸ್ ಬಗ್ಗೆ ಬೇಸರ ಆಗುತ್ತದೆ ಎಂದಿದ್ದಾರೆ. ಈ ಸೀರಿಯಲ್ ಬಿಟ್ಟುಬಿಡು ಎಂದು ತುಂಬಾ ಜನ ಮೆಸೇಜ್ ಮಾಡ್ತೀರಾ. ಆದರೆ ಮುಂದೆ ನೋಡಿ ಏನಾಗುತ್ತದೆಯೆಂದು. ಇದು ತುಂಬಾ ವಿಭಿನ್ನ ಕ್ಯಾರೆಕ್ಟರ್. ಅದಕ್ಕಾಗಿಯೇ ಒಪ್ಪಿಕೊಂಡೆ. ಆದರೆ ಕೆಲವೊಮ್ಮೆ ಮೆಸೇಜ್ ಬರೋದನ್ನು ನೋಡಿ ಸೀರಿಯಲ್ ಬಿಟ್ಬಿಡೋಣ ಎನ್ನಿಸಿದ್ದೂ ಉಂಟು ಎಂದಿದ್ದಾರೆ.
67
ನಿಧಿ ಕರ್ಣನನ್ನು ಬಿಟ್ಟು ಕೊಡ್ತಾಳಾ?
ಕರ್ಣನ ಬಿಟ್ಟುಕೊಡುತ್ತೀರಾ ಎಂದು ನಿಧಿಗೆ ಕೇಳಿದ ಪ್ರಶ್ನೆಗೆ, ನಟಿ ಭವ್ಯಾ ಗೌಡ ನನ್ನ ಅಕ್ಕ ನಿತ್ಯನಿಗೆ ನಮ್ಮ ಲವ್ ವಿಷ್ಯ ಗೊತ್ತಾಗಿದ್ದರೆ ಆಕೆ ಮದುವೆ ಆಗ್ತಾ ಇರಲಿಲ್ಲ. ಕರ್ಣ ಕೂಡ ಸನ್ನಿವೇಶಕ್ಕೆ ತಕ್ಕಂತೆ ಮದ್ವೆಯಾಗಬೇಕಾಯಿತು ಎಂದ್ರೆ, ಕಿರಣ್ ರಾಜ್ ಅವರು ಇದು ಸ್ಟೋರಿ ಎಂಡ್ ಅಲ್ಲ. ಇದು ಶುರು ಮಾತ್ರ. ಇದು ಕನ್ಕ್ಲೂಸನ್ ಅಲ್ಲ. ಟ್ವಿಸ್ಟ್ ಇದ್ದೇ ಇರುತ್ತದೆ. ಅದನ್ನು ಫುಲ್ ನೋಡಿ ಎನ್ನೋ ಮೂಲಕ ಕರ್ಣ ಮತ್ತು ನಿಧಿ ಒಂದಾಗೋ ಸೂಚನೆ ಕೊಟ್ಟಿದ್ದಾರೆ.
77
ಇಬ್ಬರನ್ನೂ ಮದ್ವೆಯಾಗಿ
ಕರ್ಣ ಇಬ್ಬರನ್ನೂ ಮದ್ವೆಯಾಗ್ತೀರಾ ಎನ್ನುವ ಪ್ರಶ್ನೆಗೆ ಏನೂ ಉತ್ತರಿಸಿಲ್ಲ ನಟರು. ಆದರೆ ಬೈ ಒನ್ ಗೆಟ್ ಒನ್ ಫ್ರೀ ಆಗತ್ತೆ ಎಂದು ನಕ್ಕಿದ್ದಾರೆ ಅಷ್ಟೇ. ಇಬ್ಬರನ್ನೂ ಮದ್ವೆಯಾಗಿಬಿಡಿ ಎಂದು ಕರ್ಣನಿಗೆ ವೀಕ್ಷಕರು ಟಿಪ್ಸ್ ಕೂಡ ಕೊಟ್ಟಿದ್ದಾರೆ. ಅದಕ್ಕೇ ನಗುವೇ ಉತ್ತರವಾಗಿದೆ ಈ ನಟರದ್ದು.