ಶ್ರೀ ಗಂಧದ ಗುಡಿ: ಹರಿ ಜಪಿಸುತ್ತಿರುವ ಆ 'ಅನಿತಾ' ಯಾರು? ಚಂದನಾಗೆ ಹೊಟ್ಟೆಯುರಿ ಕೊಟ್ಟ ಚಲುವೆ ಹಿನ್ನೆಲೆ ಇಲ್ಲಿದೆ!

Published : Jul 02, 2026, 08:12 PM IST

'ಶ್ರೀ ಗಂಧದ ಗುಡಿ' (shree gandhada gudi) ಧಾರಾವಾಹಿಯಲ್ಲಿ ಹರಿ ಮತ್ತು ಚಂದನಾ (Harishchandra and Chandana) ನಡುವಿನ ಪ್ರೀತಿಯನ್ನು ಪರೀಕ್ಷಿಸಲು 'ಅನಿತಾ' ಎಂಬ ಹೊಸ ಪಾತ್ರದ ಪ್ರವೇಶವಾಗಿದೆ. ಹರಿಯನ್ನು ಒಲಿಸಿಕೊಂಡಿರುವ ಅನಿತಾ (Anita) ಯಾರು? ಈ ಹೊಸ ಪಾತ್ರಧಾರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

PREV
16

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ಗಂಧದ ಗುಡಿ' ಧಾರಾವಾಹಿಯಲ್ಲಿ ಚೆಂದದ ಜೋಡಿಯಾಗಿರುವ ಹರಿಶ್ಚಂದ್ರ-ಚಂದನಾ ನಡುವೆ ಪ್ರೀತಿ ಇದೆಯೋ ಇಲ್ಲವೋಎಂಬುದನ್ನು ತಿಳಿಯಲು ಹೊಸ ಪಾತ್ರವೊಂದನ್ನು ಪರಿಚಯಿಸಲಾಗಿದೆ. ಈ ಹೊಸ ಪಾತ್ರದ ಕಾಲೇಜು ಹುಡುಗಿ ಅನಿತಾ, (College girl Anita) ಚಂದನಾಳ ಗಂಡ ಹರಿಯ ಫೋನ್ ನಂಬರ್ ಪಡೆದು ಮಾತನಾಡುತ್ತಿದ್ದಾಳೆ. ಇತ್ತ ಹರಿ ಕೂಡ ಚಂದನಾಗೆ ಹೊಟ್ಟೆ ಉರಿಸಲೆಂದೇ ಅನಿತಾ ಓ.. ಅನಿತಾ ಎಂದೆಲ್ಲಾ ಹಾಡು ಹೇಳುತ್ತಾ ಕಿಚಾಯಿಸಿದ್ದಾನೆ. ಹಾಗಾದರೆ ಈ ಹೊಸ ಪಾತ್ರಧಾರಿ ಅನಿತಾ ಯಾರು? ನಟಿಯ ಪೂರ್ಣ ಮಾಹಿತಿ ಇಲ್ಲಿದೆ.

26

ಅಪ್ಪ-ಮಕ್ಕಳು ಸೇರಿ ಐದು ಜನ ಗಂಡಸರೇ ತುಂಬಿದ್ದ ಮನೆಗೆ ಹರಿಶ್ಚಂದ್ರನನ್ನ ಸಂದರ್ಭಕ್ಕೆ ಕಟ್ಟುಬಿದ್ದು ಮದುವೆ ಮಾಡಿಕೊಂಡು ಮನೆ ಬಿಟ್ಟು ಓಡಿಬಂದ ಚಂದನಾ ಹರಿಯನ್ನ ಗಂಡ ಎಂದು ಒಪ್ಪಿಕೊಳ್ಳಲು ಸಿದ್ಧಳಿಲ್ಲ. ಇತ್ತ ಹರಿಗೆ ಚಂದನಾ ಮೇಲೆ ಪ್ರೀತಿ ಅಂಕುರವಾಗಿದ್ದು, ಚಂದನಾಳನ್ನು ಒಲಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಇತ್ತ ಚಂದನಾಗೂ ಹರಿ ಮೇಲೆ ಲವ್ ಆಗಿದ್ದು, ಹಲವು ಸಂದರ್ಭಗಳಲ್ಲಿ ಇದು ಗೊತ್ತಾಗಿದೆ. ಆದರೆ, ಹರಿಯನ್ನು ಮಾತ್ರ ಗಂಡನಾಗಿ ಒಪ್ಪಿಕೊಳ್ಳದೇ ಸತಾಯಿಸುತ್ತಿದ್ದಾಳೆ.

36

ಇದೀಗ ಹರಿ ತನ್ನ ಮೇಲೆ ಚಂದನಾಗೆ ಪ್ರೀತಿ ಇರುವ ಬಗ್ಗೆ ತಿಳಿಯಲು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ತನ್ನ ಕೊನೆಯ ತಮ್ಮ ಮಯೂರನ ಕಾಲೇಜು ಗೆಳತಿ ಅನಿತಾ, ಹರಿಯನ್ನು ನೋಡಿ ಫಿದಾ ಆಗಿದ್ದಾಳೆಂದು ಸೀನ್ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ನಟಿಸುತ್ತಿರುವ ಅನಿತಾ ಬೇರಾರೂ ಅಲ್ಲ, ಕಿರುತೆರೆಯಲ್ಲಿ ಬಾಲ ಪ್ರತಿಭೆಯಾಗಿ ಕಾಣಿಸಿಕೊಂಡಿದ್ದ ಶ್ರಾವ್ಯಾ ಮರವಂತೆ (Shravya Maravanthe).

46

ಈ ಬಾಲ ಪ್ರತಿಭೆ ಶ್ರಾವ್ಯಾ ಮರವಂತೆ ಗುರುತು ಇನ್ನೂ ಸಿಗಲಿಲ್ಲವಾ..? ಇಲ್ಲಿದೆ ಮಾಹಿತಿ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ಪ್ರತಿಭೆ ಆಗಿದ್ದಾಳೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್-2ರಲ್ಲಿ (Drama junior's) ಕಿರುತೆರೆಗೆ ಬಾಲ ಪ್ರತಿಭೆಯಾಗಿ ಕಾಲಿಟ್ಟ ಶ್ರಾವ್ಯಾ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟಲ್ ಮಾಸ್ಟರ್ಸ್ (Dance Karnataka Dance-DKD) ಸೀಸನ್‌ನಲ್ಲಿಯೂ ರನ್ನರ್ ಅಪ್ ಸ್ಥಾನ ಪಡೆದು ರಾಜ್ಯದ ಜನತೆಗೆ ಪರಿಚಿತವಾಗಿದ್ದಳು.

56

ಇದೀಗ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಲೇಜು ಹುಡುಗಿ ಪಾತ್ರದಲ್ಲಿ ಸಹ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಧಾರಾವಾಹಿಯಲ್ಲಿ ಹರಿಯ ಹೆಂಡತಿ ಚಂದನಾಗೆ ಅನಿತಾಳನ್ನು ನೋಡಿ ಹೊಟ್ಟೆಕಿಚ್ಚು ಶುರುವಾಗಿದೆ. ಹರಿಯ ಮೇಲೆ ಪೊಸೆಸಿವ್‌ನೆಸ್ ಕಾಣಿಸತೊಡಗಿದೆ. ಯಾರು ಈ ಅನಿತಾ? ಹರಿಯ ಹಿಂದೆ ಏಕೆ ಬಿದ್ದಿದ್ದಾಳೆ? ಎಂದು ಚಿಂತಿಸತೊಡಗಿದ್ದಾಳೆ. ಜೊತೆಗೆ, ಹರಿ ಕೂಡ ಅನಿತಾ.., ಓ... ಅನಿತಾ.., ಎಂದು ಜಪ ಮಾಡುತ್ತಿದ್ದು, ಇದರಿಂದ ಚಂದನಾಗೆ ಕೋಪವೂ ಬಂದಿದೆ.

66

ಕಾಲೇಜು ಹುಡುಗನಾಗಿರುವ ಮಯೂರನ ಗೆಳತಿಯಾಗಿರುವ ಅನಿತಾ, ಆಕಸ್ಮಿಕವಾಗಿ ಬಸ್ ನಿಲ್ದಾಣದಲ್ಲಿ ಹರಿಶ್ಚಂದ್ರ ಹಾಗೂ ಚಂದನಾಗೆ ಸಿಗುತ್ತಾಳೆ. ಆಗ ಹರಿಯನ್ನು ನೋಡಿದ ಅನಿತಾ, ಮಯೂರನನ್ನು ಮಾತನಾಡಿಸುತ್ತಾ, ಹರಿಯ ಬಳಿ ಹೋಗಿ ಫೋನ್ ನಂಬರ್ ಪಡೆದುಕೊಳ್ಳುತ್ತಾಳೆ. ಇದು, ಚಂದನಾ ಮನಸ್ಸಿಗೆ ಬೆಂಕಿ ಹಚ್ಚಿದಂತಾಗಿದೆ. 

ಅನಿತಾ, ಹರಿಗೆ ಜೋಡಿಯಾಗಲು ಬಂದ ಪಾತ್ರವಲ್ಲ, ಅತಿಥಿ ಪಾತ್ರವೂ ಆಗಿರಬಹುದು. ಅಥವಾ ಮಯೂರನಿಗೆ ಜೋಡಿಯಾಗುವ ಪಾತ್ರವೂ ಆಗಿರಬಹುದು. ಇದೀಗ ಚಂದನಾ-ಹರಿ ನಡುವೆ ಇರುವ ಪ್ರೀತಿ ಬಯಲಿಗೆ ಬರಲು ಅನಿತಾ ಅಸ್ತ್ರವಾಗಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories