Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು

Published : Sep 17, 2026, 12:16 PM IST

ಉಡುಪಿನ ಕಾರಣಕ್ಕೆ ಟ್ರೋಲ್ ಆಗಿ ಬಿಗ್‌ಬಾಸ್ 13 ಪ್ರವೇಶಿಸಿರುವ ನಟಿ ವೈಷ್ಣವಿ ಕೌಂಡಿನ್ಯ, ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ಷರತ್ತುಗಳನ್ನು ಬಿಚ್ಚಿಟ್ಟಿದ್ದಾರೆ. ತಂದೆಯ ಮುಖವನ್ನೇ ನೋಡದೆ ಬೆಳೆದ ಇವರು, ಗಂಡನಾದವನು ಅಹಂಕಾರವಿಲ್ಲದೆ ಮನೆಗೆಲಸದಲ್ಲೂ ಸಮಪಾಲು ನೀಡಬೇಕು ಎಂದಿದ್ದಾರೆ.

PREV
16
ಬಟ್ಟೆಯಿಂದ ಟ್ರೋಲ್​ ಆಗಿ ಬಿಗ್​ಬಾಸ್​ವರೆಗೆ...

ಕಾರ್ಯಕ್ರಮವೊಂದರಲ್ಲಿ ಮುಕ್ಕಾಲು ದೇಹಪ್ರದರ್ಶನ ಮಾಡುವಂಥ ಉಡುಪು ಧರಿಸಿ, ಟ್ರೋಲ್​ ಆಗುವ ಮೂಲಕ, ರಾತ್ರೋ ರಾತ್ರಿ ನೆಗೆಟಿವ್​ ಕಮೆಂಟ್ಸ್​ಗಳಿಂದಲೇ ಫೇಮಸ್​ ಆಗಿ, ಬಿಗ್​ಬಾಸ್​ 13ರ (Bigg Boss 13) ಮನೆಯೊಳಗೆ ಪ್ರವೇಶಿಸಿರುವ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ (Vaishnavi Koundinya) ತಮ್ಮ ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಸಹ ಸ್ಪರ್ಧಿಯ ಜೊತೆ ಮಾತನಾಡಿದ್ದಾರೆ.

26
ಮಹಾರಾಣಿ ಥರ ನೋಡಿಕೊಳ್ಳಬೇಕು

ನನಗೆ ಮದುವೆಯಾಗಲು ಹುಡುಗ ಸಿಕ್ಕರೆ ಮದ್ವೆಯಾಗುತ್ತೇನೆ ಎಂದಿರೋ ವೈಷ್ಣವಿ, ತಮಗೆ ಎಂಥ ಹುಡುಗ ಬೇಕು ಎನ್ನೋದನ್ನು ಹೇಳಿದ್ದಾರೆ. ನನ್ನನ್ನು ಮಹಾರಾಣಿ ಥರ ನೋಡಿಕೊಳ್ಳಬೇಕು. ಹೃದಯದಲ್ಲಿ ಶ್ರೀಮಂತ ಆಗಿರಬೇಕು. ಗಂಡಸು ಎನ್ನುವ ಅಹಂಕಾರ ಇರಬಾರದು ಎಂದಿದ್ದಾರೆ.

36
ಪಾತ್ರೆ ತೊಳೆಯಬೇಕು

ಇಬ್ಬರೂ ದುಡಿದು, ಇಬ್ಬರೂ ಸಂಸಾರ ನಡೆಸಿಕೊಂಡು ಹೋಗಬೇಕು. ನಾನು ಅಡುಗೆ ಮಾಡಿದ್ರೆ ಅವನು ಪಾತ್ರೆ ತೊಳೆಯಬೇಕು, ಅವನು ಅಡುಗೆ ಮಾಡಿದ್ರೆ ನಾನು ಪಾತ್ರೆ ತೊಳೆಯುತ್ತೇನೆ ಎಂದು ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.

46
ನಟಿಯ ಕುರಿತು

ಅಂದಹಾಗೆ ನಟಿ ವೈಷ್ಣವಿ (Vaishnavi Koundilya) ಅವರ ಕುರಿತು ಹೇಳುವುದಾದರೆ, ‘ಮಿಥುನ ರಾಶಿ’, ‘ಪ್ರೇಮಕಾವ್ಯ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಬಾಲ್ಯದಲ್ಲೇ ತಂದೆಯಿಂದ ದೂರವಾಗಿ, ತಾಯಿ-ಅಜ್ಜಿಯ ಜೊತೆ ಬೆಳೆದ ವೈಷ್ಣವಿ, ಕೇವಲ 16ನೇ ವಯಸ್ಸಿಗೆ ನಾಯಕಿಯಾಗಿ, ಕನ್ನಡದ ಜೊತೆಗೆ ತಮಿಳು-ಮಲಯಾಳಂ ಕಿರುತೆರೆಯಲ್ಲೂ ಗುರುತಿಸಿಕೊಂಡವರು.

56
ಬಾಲ್ಯದ ಕಹಿ ಅನುಭವ

ಬಿಗ್‌ಬಾಸ್‌ ವೇದಿಕೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದ ನಟಿ, ತಾವು ತಂದೆ-ತಾಯಿಯ ಏಕೈಕ ಮಗಳು ಎಂದು ಹೇಳಿದ್ದಾರೆ. ತಮ್ಮ ಮನೆಯಲ್ಲಿ ತಾಯಿ, ಅಜ್ಜಿ ಮತ್ತು ತಾವು ಮಾತ್ರ ಇದ್ದಿದ್ದು, ತಂದೆ-ತಾಯಿ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೂ ನೋಡಿಲ್ಲ ಎಂದು ವೈಷ್ಣವಿ ಹೇಳಿಕೊಂಡಿದ್ದು, ಅವರ ಮಾತುಗಳು ಬಿಗ್‌ಬಾಸ್‌ ವೇದಿಕೆಯಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿವೆ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈಚಾಚಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡು ಬೆಳೆದಿದ್ದಾಗಿ ಅವರು ಹೇಳಿದ್ದರು.

66
ತಮಿಳು, ಮಲಯಾಳಂ ಕಿರುತೆರೆಯಲ್ಲೂ ನಟನೆ

ವೈಷ್ಣವಿ ಕೌಂಡಿನ್ಯ ಕೇವಲ ಕನ್ನಡ ಕಿರುತೆರೆಗೆ ಸೀಮಿತವಾಗಿಲ್ಲ. ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಲ್ಲೂ ನಟಿಸಿರುವ ಅವರು, ಅಲ್ಲಿನ ಕಿರುತೆರೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದಾರೆ. ನಟನೆ ಮಾತ್ರವಲ್ಲದೆ ಸೈಕಾಲಜಿ ಮತ್ತು ಜರ್ನಲಿಸಂ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವ ವೈಷ್ಣವಿ, ಭರತನಾಟ್ಯ ಕಲಾವಿದೆಯೂ ಹೌದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories