ಲವ್ನಿಧಿ ಮತ್ತು ಕರ್ಣ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದಾರೆ. ಇದೇ ವೇಳೆ, ಗರ್ಭಿಣಿ ನಿತ್ಯಾಳ ಮೇಲೆ ಕರ್ಣ ತೋರುತ್ತಿರುವ ಅತಿಯಾದ ಕಾಳಜಿಯಿಂದ ಆಕೆ ಅವನತ್ತ ಆಕರ್ಷಿತಳಾಗುತ್ತಿದ್ದಾಳೆ. ತನ್ನ ತಂಗಿಯ ಪ್ರೇಮದ ಅರಿವಿಲ್ಲದ ನಿತ್ಯಾ, ಕರ್ಣನನ್ನು ಪ್ರೀತಿಸಲಾರಂಭಿಸಿದರೆ ನಿಧಿಯ ಕಥೆಯೇನು?
ನಿಧಿ ಮತ್ತು ಕರ್ಣ ಲವ್ ಮಾಡ್ತಿರೋ ವಿಷಯ ನಿತ್ಯಾಗೆ ಇನ್ನೂ ಗೊತ್ತಿಲ್ಲ. ಅದನ್ನು ಹೇಳುವುದು ಬೇಡ ಎಂದು ಸದ್ಯ ಅವರು ಕೂಡ ಗುಟ್ಟಾಗಿಯೇ ಇದ್ದಾರೆ. ಆದರೆ ಇದೇ ಅವರಿಗೆ ಮುಳುವಾಗುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ.
26
ಸತ್ಯ ಒಪ್ಪಿಕೊಳ್ಳದ ತೇಜಸ್
ಅಷ್ಟಕ್ಕೂ ತೇಜಸ್ ಅಂತೂ ಸದ್ಯದ ಸ್ಥಿತಿಯಲ್ಲಿ ನಿತ್ಯಾಳನ್ನು ಒಪ್ಪಿಕೊಳ್ಳುವ ಸಾಧ್ಯತೆಯೇ ಇಲ್ಲ. ಏಕೆಂದರೆ, ಅವನು ಕರ್ಣನದ್ದೇ ತಪ್ಪು, ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ಕೂಡ ಕರ್ಣನದ್ದೇ ಅಂದುಕೊಂಡಿದ್ದಾನೆ. ರಮೇಶ್ ಅವನಿಗೆ ಆ ರೀತಿಯಲ್ಲಿ ತಲೆ ತಿರುಗಿಸಿ ಇಟ್ಟಿದ್ದಾನೆ.
36
ಗರ್ಭಿಣಿ ಮೇಲೆ ಪ್ರೀತಿ
ಅದೇ ಇನ್ನೊಂದೆಡೆ, ಗರ್ಭಿಣಿ ನಿತ್ಯಾಳ ಮೇಲೆ ಕರ್ಣ ಸಿಕ್ಕಾಪಟ್ಟೆ ಪ್ರೀತಿ ತೋರಿಸುತ್ತಿದ್ದಾನೆ. ಆಕೆಯನ್ನು ತನ್ನ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಕೂಡ ಮಾಡಿದ್ದಾನೆ.
ಪ್ರತಿ ಹೆಜ್ಜೆಯಲ್ಲಿಯೂ ಕರ್ಣ ತನ್ನ ಮೇಲೆ ತೋರಿಸ್ತಿರೋ ಪ್ರೀತಿಯಿಂದ ಹಾಗೂ ಅವನು ತನ್ನ ತಂಗಿಯನ್ನು ಲವ್ ಮಾಡ್ತಿರೋ ವಿಷ್ಯ ಗೊತ್ತಿಲ್ಲದೇ ಇರುವುದರಿಂದ, ನಿತ್ಯಾಗೆ ಕರ್ಣನ ಮೇಲೆ ಲವ್ ಆಗಿಬಿಡತ್ತಾ ಎನ್ನುವ ಆತಂಕದಲ್ಲಿ ಸೀರಿಯಲ್ ಪ್ರೇಮಿಗಳು ಇದ್ದಾರೆ.
56
ಪ್ರೀತಿಗೆ ಕರಗಿದ ನಿತ್ಯಾ
ಇದಾಗಲೇ ಕರ್ಣನ ಸಹಾಯವನ್ನು ಪದೇ ಪದೇ ನೆನಪಿಸುವ ನಿತ್ಯಾ, ಪ್ರತಿ ಬಾರಿಯೂ ಕರ್ಣನಿಗೆ ಥ್ಯಾಂಕ್ಸ್ ಹೇಳುತ್ತಲೇ ಇದ್ದಾಳೆ. ಆತ ತನ್ನ ಮೇಲೆ ತೋರುವ ಪ್ರೀತಿಗೆ ಆಕೆ ಕರಗಿ ಹೋಗಿದ್ದಾಳೆ. ಈ ಪ್ರೀತಿ ಪ್ರೇಮದಲ್ಲಿ ಬದಲಾಗದಿದ್ದರೆ ಸಾಕು ಎನ್ನುವುದು ವೀಕ್ಷಕರ ಆಶಯ.
66
ನಿತ್ಯಾಳಿಂದ ನಿಧಿಗೆ ಬೋಧನೆ
ಒಂದು ವೇಳೆ ಹಾಗೇನಾದರೂ ಆದರೆ, ನಿಧಿ ಕಥೆ ಏನು ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ನಿನ್ನ ಮೇಲೆ ಕೇರ್ ತಗೊ. ನಿನ್ನ ಯೋಚನೆಯನ್ನೇ ಮಾಡು, ನನ್ನ ಬಗ್ಗೆ ಹೆಚ್ಚು ಯೋಚನೆ ಮಾಡಬೇಡ ಎಂದು ನಿತ್ಯಾ ನಿಧಿಗೆ ಹೇಳುತ್ತಿದ್ದಾಳೆ. ಆದರೆ ಆಕೆಗಿನ್ನೂ ತನ್ನ ತಂಗಿಯ ಲವ್ಸ್ಟೋರಿ ಬಗ್ಗೆ ಗೊತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.