‘ಕರ್ಣ’ ಸೀರಿಯಲ್ ಖಳನಾಯಕಿ ನಯನತಾರಾ, ಕರ್ಣ ಮತ್ತು ನಿತ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ನಡೆಸಿರುವ ಕುತಂತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಕೆಟ್ಟ ಘಟನೆಗಳು ಸಮಾಜದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಚರ್ಚೆ ನಡೆಯುತ್ತಿದೆ.
ಇಂದು ಸೀರಿಯಲ್ ಎಂದರೆ ಕೇವಲ ಸೀರಿಯಲ್ ಆಗಿ ಉಳಿದಿಲ್ಲ. ಅಲ್ಲಿ ಕಥೆಯನ್ನು ಮುಂದುವರೆಸಲು, ನಾಯಕ-ನಾಯಕಿಯರನ್ನು ಸಮಸ್ಯೆಗೆ ಸಿಲುಕಿಸಲು ವಿಲನ್ಗಳು ಕುತಂತ್ರ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇದೇ ಕುತಂತ್ರ, ಸೀರಿಯಲ್, ಸಿನಿಮಾಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಹಲವು ವೀಕ್ಷಕರ ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವ ಬಗ್ಗೆ ಇದಾಗಲೇ ಸಾಕಷ್ಟು ಅಧ್ಯಯನಗಳಲ್ಲಿ ತಿಳಿದು ಬಂದಿದೆ.
26
ಜನಮನ ಗೆದ್ದ ಕರ್ಣ ಸೀರಿಯಲ್
ಇದೀಗ ಜನರು ಮೆಚ್ಚಿಕೊಂಡಿರುವ ಕೆಲವೇ ಕೆಲವು ಸೀರಿಯಲ್ಗಳ ಪೈಕಿ ಜೀ ಕನ್ನಡದ ಕರ್ಣ ಸೀರಿಯಲ್ (Karna Serial) ಕೂಡ ಒಂದು. ಇದರಲ್ಲಿ ಕೂಡ ಹೀರೋ, ವಿಲನ್ ಎಲ್ಲರೂ ಇದ್ದಾರೆ. ಇದಾಗಲೇ ವಿಲನ್ ರಮೇಶ್ನಿಗೆ ತಿರುಗೇಟು ಕೊಟ್ತಿದ್ದಾನೆ ಕರ್ಣ.
36
ರಮೇಶ್ ಕಿತಾಪತಿ
ಅಷ್ಟಕ್ಕೂ ರಮೇಶ್ ಇಲ್ಲಿಯವರೆಗೆ ಮಾಡಿರುವ ಕಿತಾಪತಿಗಳು ಒಂದೆರಡಲ್ಲ. ಆದರೆ ಅವು ಕೇವಲ ಕರ್ಣ, ನಿಧಿ ಮತ್ತು ನಿತ್ಯಾ ಮೇಲೆ ಪ್ರಭಾವ ಬೀರುತ್ತಿತ್ತೇ ವಿನಾ ಅದೊಂದು ರೀತಿಯಲ್ಲಿ ಸಮಾಜ ಘಾತುಕ ಎಂದು ಎನ್ನಿಸಿಕೊಂಡಿರಲಿಲ್ಲ.
ಆದರೆ ಇದೀಗ, ನಯನತಾರಾ ಮಾಡಿರುವ ಕಿತಾಪತಿ ಬಗ್ಗೆ ಇದೀಗ ಭಾರಿ ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಕರ್ಣ ಮತ್ತು ಆಸ್ಪತ್ರೆಯಲ್ಲಿ ಡೈರೆಕ್ಟರ್ ಆಗಿ ನೇಮಕಗೊಂಡಿರುವ ನಿತ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ನಯನತಾರಾ ಅಲ್ಲಿರುವ ಮಾತ್ರೆಗಳನ್ನು ಬದಲಿಸಿ, ಎಲ್ಲಾ ಡೇಟ್ ಬಾರ್ ಆಗಿರೋ ಮಾತ್ರೆ ಹಾಕಲು ಹೇಳಿದ್ದಾಳೆ. ಅದರಂತೆ ಎಲ್ಲಾ ನಡೆದಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಕಾಲ್ ಮಾಡಿ ಹೇಳಿದ್ದಾನೆ.
56
ಕೆಟ್ಟ ಮನಸ್ಥಿತಿ
ಇದು ಸೀರಿಯಲ್ ಬಿಡಿ, ಇಲ್ಲಿ ಏನು ಬೇಕಾದರೂ ನಡೆಯತ್ತೆ ಎನ್ನುವ ಸ್ಥಿತಿ ಇದಲ್ಲ. ಏಕೆಂದರೆ, ಇಂಥ ಕೆಟ್ಟ ವಿಷಯಗಳು ವೀಕ್ಷಕರಿಗೆ ಬಹುಬೇಗನೇ ತಲೆಗೆ ಹೋಗಿ, ಅಲ್ಲಿ ಆಗುವುದು ಕೆಟ್ಟದ್ದೇ. ಅಷ್ಟಕ್ಕೂ ಸೀರಿಯಲ್ನಲ್ಲಿ ಕೊನೆಗೆ ವಿಲನ್ಗಳ ನಾಶವಾಗಿ, ನಾಯಕ-ನಾಯಕಿಗೇ ಜಯ ಆಗುವುದು ಇದ್ದೇ ಇದೆ. ಆದರೆ ನಿಜ ಜೀವನದಲ್ಲಿ ಹಾಗಲ್ಲವಲ್ಲ!
66
ಎಕ್ಸ್ಪೈರಿ ಮಾತ್ರೆ
ಇಲ್ಲಿ ಎಕ್ಸ್ಪೈರಿ ಆಗಿರುವ ಮಾತ್ರೆಗಳನ್ನು ಒಂದಿಷ್ಟು ರೋಗಿಗಳಿಗೆ ಕೊಡಲಾಗುತ್ತದೆ. ಅದು ಅವರ ಜೀವಕ್ಕೆ ಅಪಾಯವಾಗುತ್ತದೆ. ಕರ್ಣ, ನಿತ್ಯಾ ಮೇಲೆ ಒಂದಿಷ್ಟು ಕೇಸು ಬರುತ್ತದೆ ಅಥವಾ ಇವೆಲ್ಲಾ ಆಗುವ ಮೊದಲೇ ಕರ್ಣನಿಗೆ ವಿಷಯ ತಿಳಿಯಬಹುದು. ಸೀರಿಯಲ್ನಲ್ಲಿ ಏನಾದರೂ ಆಗಬಹುದು. ಆದರೆ ಮಾತ್ರೆಗಳನ್ನು ಬದಲಿಸಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುವಂಥ ಪ್ಲ್ಯಾನ್ ಹೇಳುವ ದೃಶ್ಯಗಳು ಬೇಕೇ, ಸೀರಿಯಲ್ಗಳು ಇಂಥದ್ದನ್ನು ಕಲಿಸಬೇಕೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ವಿಲನ್ ರಮೇಶ್, ಆಹಾರವನ್ನು ಕಸದ ಬುಟ್ಟಿಗೆ ಚೆಲ್ಲಿದಾಗಲೂ ಇಂಥ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಮಾತ್ರೆಗಳ ದೃಶ್ಯ ಜನರ ಜೀವದ ಜೊತೆ ಚೆಲ್ಲಾಟ ಆಡುವಂತಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.