Karna Kannada Serial: ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!

Published : Dec 18, 2025, 11:59 AM IST

Karna Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಳ್ಳುವುದೊಂದು, ಆಗುವುದೊಂದು ಎನ್ನೋ ಥರ ಆಗಿದೆ. ಕರ್ಣ-ನಿತ್ಯಾ ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ತೇಜಸ್‌ ಆಗಮನವಾಗಿದೆ, ಈಗ ಕಥೆ ಇನ್ನೊಂದು ತಿರುವು ಪಡೆದುಕೊಳ್ಳಲಿದೆ.

PREV
15
ರಮೇಶ್‌ ಪತ್ನಿ ಪ್ಲ್ಯಾನ್

ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದು ಸುಳ್ಳು ಎನ್ನೋದು ನಿಧಿಗೂ, ಕರ್ಣನ ತಂಗಿ ರಾಧಿಕಾಗೂ ಗೊತ್ತಾಗಿದೆ. ಇನ್ನೊಂದು ಕಡೆ ಇನ್ನೊಮ್ಮೆ ಇವರಿಬ್ಬರ ಮದುವೆಯನ್ನು ನೋಡಬೇಕು ಎಂದು ಸಂಜಯ್‌, ನಿತ್ಯಾಳ ಕೊರಳಲ್ಲಿದ್ದ ತಾಳಿಯನ್ನು ಕಟ್‌ ಮಾಡಿದ್ದನು. ಹೀಗಾಗಿ ಮನೆಯಲ್ಲಿ ಮತ್ತೆ ಕರ್ಣ-ನಿತ್ಯಾ ಮದುವೆ ಆಗಬೇಕಿತ್ತು. ಆಗಲೂ ಕರ್ಣನ ತಾಯಿ, ಗಂಡ ರಮೇಶ್‌ ಮೈಮೇಲೆ ಬಿಸಿನೀರು ಹಾಕಿದಳು. ಆಗ ಎಲ್ಲರ ಗಮನ ರಮೇಶ್‌ ಮೇಲೆ ಹೋದಾಗ, ನಿತ್ಯಾ ತನಗೆ ತಾನೇ ತಾಳಿ ಹಾಕಿಕೊಂಡಳು.

25
ತೇಜಸ್‌ ತಪ್ಪು ತಿಳ್ಕೊಂಡಿದ್ದಾನೆ

ತಮಗೆ ಮದುವೆ ಆಗಿದೆ ಎಂದು ಕರ್ಣ, ನಿತ್ಯಾ ಎಲ್ಲರನ್ನು ಯಾಮಾರಿಸುತ್ತಿದ್ದಾರೆ. ಇವರು ಖುಷಿಯಾಗಿರಬಾರದು ಎಂದು ರಮೇಶ್‌, ನಯನತಾರಾ, ಸಂಜಯ್‌ ದಿನಕ್ಕೊಂದು ಢಷ್ಯಂತ್ರ ಮಾಡುತ್ತಿದ್ದಾರೆ. ಈಗ ತೇಜಸ್‌ ಹೊರಗಡೆ ಬಂದಿರೋದು ಕೂಡ ರಮೇಶ್‌ ಕುತಂತ್ರ ಎಂದು ಕಾಣುತ್ತದೆ. ನಿತ್ಯಾಳನ್ನು ಮದುವೆ ಆಗಬೇಕಿದ್ದ ತೇಜಸ್‌ನನ್ನು ರಮೇಶ್‌ ಕಿಡ್ನ್ಯಾಪ್‌ ಮಾಡಿಸಿದ್ದನು. ತೇಜಸ್‌ನನ್ನು ಕರ್ಣನೇ ಕಿಡ್ನ್ಯಾಪ್‌ ಮಾಡಿಸಿರೋದು ಎಂದು ನಂಬಿಸಿದ್ದನು.

35
ಮನೆಹಾಳ ರಮೇಶ್‌ಗೆ ಎಲ್ಲ ಗೊತ್ತು

ಈಗ ತೇಜಸ್‌ ಹೊರಗಡೆ ಬಂದರೆ ಕರ್ಣ-ನಿತ್ಯಾ ಮದುವೆ ಆಗಿರೋ ವಿಷಯ ಗೊತ್ತಾದರೆ ಈ ಮೂವರ ಜೀವನ ಏನಾಗುತ್ತೆ? ನಿಧಿ ಏನ್‌ ಮಾಡ್ತಾಳೆ ಎಂದು ರಮೇಶ್‌ಗೆ ಗೊತ್ತಿದೆ. ಈಗ ತೇಜಸ್‌ ತಪ್ಪಿಸಿಕೊಳ್ಳಲು ಅವನೇ ಅನುವು ಮಾಡಿಕೊಟ್ಟಿದ್ದಾನೆ.

45
ಮುಂದಿರುವ ಪ್ರಶ್ನೆಗಳೇನು?

ಇಂದು ರಿಲೀಸ್‌ ಆಗಿರುವ ಪ್ರೋಮೋದಲ್ಲಿ ತೇಜಸ್‌ ತಪ್ಪಿಸಿಕೊಂಡು ಬಂದು, ನಿತ್ಯಾಳನ್ನು ಭೇಟಿ ಮಾಡಲು ಬಂದಿದ್ದಾನೆ, ಇವರಿಬ್ಬರ ಮುಖಾಮುಖಿಯಾಗಿದೆ. ಕರ್ಣನಿಂದಲೇ ನನ್ನ, ನಿನ್ನ ಮದುವೆ ನಿಂತು ಹೋಗಿದೆ, ಕರ್ಣನಿಂದಲೇ ಜೀವನ ಹಾಳಾಯ್ತು ಎಂದು ತೇಜಸ್‌ ಹೇಳಬಹುದು. ಕರ್ಣ, ನಿತ್ಯಾ ಮದುವೆ ಆಗಿರುವ ವಿಷಯ ಗೊತ್ತಾದರೆ ತೇಜಸ್‌ ಏನು ಮಾಡಬಹುದು? ನಿತ್ಯಾಳ ಹೊಟ್ಟೆಯಲ್ಲಿರೋದು ನನ್ನ ಮಗು ಎಂದು ತೇಜಸ್‌ ನಂಬುತ್ತಾನಾ? ಹೀಗೆ ಸಾಕಷ್ಟು ಪ್ರಶ್ನೆಗಳಿವೆ.

55
ಮುಂದೆ ಏನಾಗಲಿದೆ?

ಒಟ್ಟಿನಲ್ಲಿ ಕರ್ಣನ ಮೇಲೆ ಆರೋಪ ಬರೋದಂತೂ ಗ್ಯಾರಂಟಿ. ಕರ್ಣನಿಂದಲೇ ನಾನು ತೇಜಸ್‌ನಿಂದ ದೂರ ಆದೆ, ನನ್ನ, ತೇಜಸ್‌ ಮದುವೆ ಆಗಿಲ್ಲ ಎಂದು ನಿತ್ಯಾ ನಂಬಿದರೂ ಆಶ್ಚರ್ಯವಿಲ್ಲ. ಆಮೇಲೆ ಅವಳು ಕರ್ಣನ ವಿರುದ್ಧ ಸೇಡು ತೀರಿಸಿಕೊಳ್ತಾಳಾ? ಕರ್ಣ-ನಿಧಿ ಮದುವೆ ಆಗದಂತೆ ತಡೆಯುತ್ತಾಳಾ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories