ಯುಟ್ಯೂಬ್‌ನ್ನು ಅಣುಕಿಸಿದ್ದ Ashwini Gowda; ಗಿಲ್ಲಿ ನಟ ಹೊರಗಡೆ ಹೊಡೆದ ಬಂಪರ್‌ ಲಾಟರಿ ಬಗ್ಗೆ ಯಾರಿಗೂ ಗೊತ್ತಿಲ್ಲ

Published : Nov 05, 2025, 12:11 PM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ನಾನು 100 ಸಿನಿಮಾ ಮಾಡಿದ್ದೀನಿ, ನೀನು 1 ಯುಟ್ಯೂಬ್‌ ಚಾನೆಲ್ ಮಾಡಿಕೊಂಡು ನಾಟಕ ಮಾಡಬೇಡ, ನಿನ್ನಂಥ 100‌ ಯುಟ್ಯೂಬ್ ಚಾನೆಲ್‌ ಮಾಡ್ತೀನಿ ಎಂದು ಅಶ್ವಿನಿ ಗೌಡ, ರಕ್ಷಿತಾಗೆ ಚಾಲೆಂಜ್‌ ಮಾಡಿದ್ದರು. ನಾನು ಏನಾಗಿದ್ದೀನೋ ಅದು ಯುಟ್ಯೂಬ್‌ನಿಂದ ಎಂದು ಗಿಲ್ಲಿ ನಟ ಹೇಳಿದ್ರು 

PREV
15
ಕಿರುತೆರೆಯಲ್ಲಿ ಹೆಸರು ಮಾಡಿದ್ರು

ಈಗಾಗಲೇ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಭರ್ಜರಿ ಬ್ಯಾಚುಲರ್ಸ್‌, ಕ್ವಾಟ್ಲೆ ಕಿಚನ್‌, ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದರು. ಕಿರುತೆರೆಯಲ್ಲಿ ಕಾಮಿಡಿಯಿಂದಲೇ ಹೆಸರು ಮಾಡಿರುವ ಗಿಲ್ಲಿಗೆ ಭರ್ಜರಿ ಅವಕಾಶ ಸಿಕ್ಕಿರೋದು ದೊಡ್ಮನೆಯಲ್ಲಿರುವವರಿಗೆ ಗೊತ್ತೇ ಇಲ್ಲ.

25
'ದಿ ಡೆವಿಲ್’‌ ಸಿನಿಮಾದಲ್ಲಿ ನಟನೆ

ಹೌದು, ನಟ ದರ್ಶನ್‌ ತೂಗುದೀಪ ಅಭಿನಯದ ‘ದಿ ಡೆವಿಲ್’‌ ಸಿನಿಮಾದಲ್ಲಿ ಗಿಲ್ಲಿ ನಟ ಅವರು ಅಭಿನಯಿಸುತ್ತಿರೋದು ದೊಡ್ಮನೆಯಲ್ಲಿದ್ದವರಿಗೆ ಗೊತ್ತೇ ಇಲ್ಲ. ನಟ ದರ್ಶನ್‌ ಅವರ ಈ ಸಿನಿಮಾದಲ್ಲಿ ಗಿಲ್ಲಿ ನಟ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಿನಿಮಾ ತಂಡ ಪೋಸ್ಟರ್‌ ಜೊತೆಯಲ್ಲಿ ಘೋಷಣೆ ಮಾಡಿದೆ.

35
ಟ್ರೋಫಿ ಗೆಲ್ಲುತ್ತಾರಾ?

ಸಿನಿಮಾ ತಂಡ ಘೋಷಣೆ ಮಾಡುವವರೆಗೂ ಎಲ್ಲಿಯೂ ಹೇಳಿಕೊಳ್ಳುವಂತಿಲ್ಲ ಎಂದು ಮೊದಲೇ ಒಪ್ಪಂದ ಆಗಿರುತ್ತದೆ, ಹೀಗಾಗಿ ಗಿಲ್ಲಿ ನಟ ಕೂಡ ಇದನ್ನೆಲ್ಲ ಹೇಳದೆ ಸುಮ್ಮನೆ ಇರಬಹುದು. ಅಂದಹಾಗೆ ಮಂಡ್ಯದಲ್ಲಿ ಕಾಮಿಡಿ ವಿಡಿಯೋ ಮಾಡಿಕೊಂಡು, ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿಕೊಳ್ತಿದ್ದ ಗಿಲ್ಲಿ ನಟ ಈಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ಟ್ರೋಫಿ ಗೆಲ್ಲುತ್ತಾರೆ ಎನ್ನುವಷ್ಟರ ಮಟ್ಟಿಗೆ ಭರವಸೆ ಮೂಡಿಸಿದ್ದಾರೆ.

45
‘ದಿ ಡೆವಿಲ್‌ʼ ಸಿನಿಮಾದಲ್ಲಿ ನಟನೆ

2023ರ ನವೆಂಬರ್ 2ರಂದು ‘ದಿ ಡೆವಿಲ್‌ʼ ಸಿನಿಮಾ ಘೋಷಣೆಯಾಯಿತು. ನಿರ್ದೇಶಕ ಪ್ರಕಾಶ್ ವೀರ್ (ಮಿಲನ ಸಿನಿಮಾ ಖ್ಯಾತಿಯ) ಅವರು ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. 2024ರ ಮಾರ್ಚ್ 22ರಂದು ಬೆಂಗಳೂರಿನಲ್ಲಿ ಸಿನಿಮಾದ ಶೂಟಿಂಗ್ ಶುರುವಾಯಿತು. 2025ರ ಡಿಸೆಂಬರ್ 12 ಕ್ಕೆ ಈ ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ನಟ ದರ್ಶನ್‌ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಆರೋಪದಲ್ಲಿ ಜೈಲಿನಲ್ಲಿರುವುದಿಕ್ಕೆ ಈ ಸಿನಿಮಾ ಕೆಲಸ ಸ್ವಲ್ಪ ವಿಳಂಬವಾಯ್ತು.

55
ದೊಡ್ಡ ತಾರಾಗಣವಿರುವ ಸಿನಿಮಾ

ರಚನಾ ರೈ ಈ ಸಿನಿಮಾದ ನಾಯಕಿಯಾಗಿದ್ದು, ಇತ್ತೀಚೆಗಷ್ಟೇ ಈ ಸಿನಿಮಾದ ಹಾಡೊಂದು ರಿಲೀಸ್‌ ಆಗಿ, ಜನರ ಮನಸ್ಸು ಗೆದ್ದಿದೆ. ಮಹೇಶ್ ಮಂಜ್ರೇಕರ್, ಜಿಷು ಸೇನ್‌ಗುಪ್ತ, ಮುಕೇಶ್ ರಿಷಿ, ಫರ್ದೀನ್ ಖಾನ್ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಕೂಡ ಈ ಸಿನಿಮಾದಲ್ಲಿದ್ದಾರೆ. ಬಿ ಅಜನೀಶ್ ಲೋಕನಾಥ್‌ ಸಂಗೀತ, ಸುಧಾಕರ್ ಎಸ್. ರಾಜ್, ಫೋಟೋಗ್ರಫಿ ಈ ಸಿನಿಮಾಕ್ಕಿದೆ. ಗ್ಯಾಂಗ್‌ಸ್ಟಾರ್‌ ಆಕ್ಷನ್‌ ಆಧಾರಿತ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories