Karna Serial: ಕರ್ಣನ ಮೇಲೆ ನಿತ್ಯಾಗೆ ಅಷ್ಟು ಸಿಟ್ಟು ಯಾಕೆ? ಅಸಲಿ ಕಾರಣ ಬೇರೆಯೇ ಇದೆ!

Published : Oct 02, 2025, 10:07 PM IST

Karna Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ನಿಧಿ ನಡುವಿನ ಬಾಂಧವ್ಯ ವೀಕ್ಷಕರಿಗೆ ಇಷ್ಟವಾಗಿದೆ. ಈ ನಡುವೆ ಕರ್ಣನ ಮೇಲೆ ನಿತ್ಯಾ ಮುನಿಸಿಕೊಳ್ಳೋಕೆ ಅಸಲಿ ಕಾರಣ ಬೇರೆ ಇದೆ. 

PREV
17
ಕರ್ಣನ ಮೇಲೆ ದ್ವೇಷ

ಕರ್ಣ ಧಾರಾವಾಹಿಯಲ್ಲಿ ( Karna Serial ) ಮೊದಲಿನಿಂದಲೂ ನಿತ್ಯಾಗೆ ಕರ್ಣನನ್ನು ಕಂಡರೆ ಆಗೋದಿಲ್ಲ. ಆಮೇಲೆ ಕರ್ಣನ ಗುಣಕ್ಕೆ ಅವಳು ಮನಸೋತಳು. ಇತ್ತೀಚೆಗೆ ಮಾರಿಗುಡಿಗೆ ಹೋದಾಗ, ಕರ್ಣನಿಂದ ತನ್ನ ತಂಗಿ ಅಪಾಯ ಆಗಿತ್ತು ಅಂತ ಭಾವಿಸಿದ್ದಾಳೆ, ಹೀಗಾಗಿ ಅವಳು ಕರ್ಣನನ್ನು ಇನ್ನಷ್ಟು ದ್ವೇಷ ಮಾಡುತ್ತಿದ್ದಾಳೆ.

27
ನಿತ್ಯಾ ಕಂಡೀಶನ್‌ ಏನು?

ನಿತ್ಯಾ ಮದುವೆಯ ಜವಾಬ್ದಾರಿ ಕರ್ಣನ ಮೇಲಿದೆ. ನಿತ್ಯಾ ಎಂಗೇಜ್‌ಮೆಂಟ್‌ವರೆಗೂ ಕರ್ಣನೇ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡು ಮಾಡಿದ್ದನು. ಮಾರಿಗುಡಿಯಲ್ಲಿ ಅಸಲಿಗೆ ಏನಾಯಿತು ಎನ್ನೋದು ನಿತ್ಯಾಗೆ ಗೊತ್ತೇ ಇಲ್ಲ. ಹೀಗಾಗಿ ಅವಳು ತನ್ನ ಮದುವೆ ಕರ್ಣನ ಮನೆಯಲ್ಲಿ ನಡೆಯಬೇಕು ಅಂದರೆ ಅಲ್ಲಿ ಕರ್ಣ ಹಾಗೂ ಕರ್ಣನ ತಮ್ಮ ಸಂಜಯ್‌ ಇರಬಾರದು ಎಂದು ಹೇಳಿದ್ದಳು.

37
ನಿತ್ಯಾ ಮೇಲೆ ಕೂಗಾಡಿದ ನಿಧಿ

ಕರ್ಣ ಮದುವೆಯಲ್ಲಿ ಇರಬಾರದು ಎಂದು ಹೇಳಿದ್ದು ನಿಧಿಗೆ ಸಿಟ್ಟು ತರಿಸಿತ್ತು. “ಅಕ್ಕಾ, ನಿನ್ನ ಬಟ್ಟೆ ಹಾಳಾದರೂ, ತೇಜಸ್‌ ತಂದೆ-ತಾಯಿ ಬರದೇ ಇದ್ರೂ ಎಲ್ಲದಕ್ಕೂ ಕರ್ಣ ಸರ್‌ ಬೇಕು. ಕರ್ಣ ಸರ್‌ ಮಾಡಿದ್ದು ನಿನಗೆ ನೆನಪಿಲ್ಲ, ಅಲ್ವಾ?” ಎಂದು ಅವಳು ನಿತ್ಯಾ ಮೇಲೆ ಕೂಗಾಡಿದ್ದಳು. ತಂಗಿ ಕರ್ಣನ ಸಲುವಾಗಿ ನನ್ನ ವಿರುದ್ಧ ಫೈಟ್‌ ಮಾಡಿದಳು ಅಂತ ನಿತ್ಯಾ ಬೇಸರ ಮಾಡಿಕೊಂಡಿದ್ದಳು. ಆಮೇಲೆ ಅವಳು ಡೋರ್‌ ಲಾಕ್‌ ಮಾಡಿಕೊಂಡು, ಅತ್ತಿದ್ದಾಳೆ. ಆಮೇಲೆ ಅಜ್ಜಿ ಶಾಂತಿ ಬಳಿ ತನ್ನ ಸಂಕಟ ಹೇಳಿಕೊಂಡಿದ್ದಳು.

47
ನಿಧಿಗೋಸ್ಕರ ನಿತ್ಯಾ ಮಾಡಿದ ತ್ಯಾಗ ಏನು?

“ನಿಧಿಗೆ ಕರ್ಣ ಮಾಡಿದ ಸಹಾಯ ಎಲ್ಲವೂ ನೆನಪಿದೆ, ಅವಳ ಸ್ವಂತ ಅಕ್ಕ ಮಾಡಿದ ಸಹಾಯ ನೆನಪಿಲ್ಲ. ಶಾಲೆಗೆ ಹೋಗುವಾಗ ಎಲ್ಲ ಸ್ಪರ್ಧೆಯಲ್ಲಿಯೂ ಭಾಗವಹಿಸಬೇಕು ಅಂತ ಹಠ ಮಾಡುತ್ತಿದ್ದಳು. ಆಗ ನಾನು ಎರಡು ರೂಪಾಯಿ ಸಿಗುತ್ತದೆ ಅಂತ ಚಿಕ್ಕ ಪುಟ್ಟ ಕೆಲಸ ಮಾಡುತ್ತಿದ್ದೆ. ಪ್ರಪಂಚ ನನ್ನ ವಿರುದ್ಧ ತಿರುಗಿಬಿದ್ದರೂ ಎದುರಿಸೋ ಧೈರ್ಯ ಇದೆ. ನಿಧಿ ಮೆಡಿಕಲ್‌ ಓದುತ್ತೀನಿ ಅಂತ ಹೇಳಿದ್ದಕ್ಕೆ ನಾನು ಇಂಜಿನಿಯರಿಂಗ್‌ ಮಾಡೋ ಆಸೆ ಬಿಟ್ಟೆ. ಚಾಕೊಲೇಟ್‌ ಸಿಕ್ಕರೂ ಕೂಡ ನಾನು ಅದನ್ನು ಅವಳಿಗೆ ಕೊಡುತ್ತಿದ್ದೆ, ಅವಳು ನಗುವಲ್ಲಿ ನನ್ನ ಖುಷಿ ಕಾಣುತ್ತಿದ್ದೆ” ಎಂದು ನಿತ್ಯಾ ಹೇಳಿಕೊಂಡು ಅತ್ತಿದ್ದಾಳೆ.

57
ನಿತ್ಯಾ ಇಷ್ಟೆಲ್ಲ ಮಾಡಿದಳಾ?

“ನನ್ನ ಹಳೆ ಬಟ್ಟೆಗಳನ್ನೆಲ್ಲ ಅವಳಿಗೆ ಕೊಡ್ತೀಯಾ ಅಂತ ಶಾಂತಿ ಕಣ್ಣು ತಪ್ಪಿಸಿ ಹರಿದು ಹಾಕುತ್ತಿದ್ದೆ, ಅವಳಿಗೆ ಹೊಸ ಬಟ್ಟೆ ಸಿಗಲಿ ಅನ್ನೋದು ನನ್ನ ಆಸೆ ಆಗಿತ್ತು. ನಾನು ಮಾತಿಗೆ ಅವಳ ಅಕ್ಕ ಆದರೂ, ನನಗೆ ಅವಳು ಮಗು ಮಾತ್ರ. ಅಕ್ಕ ಇಷ್ಟೆಲ್ಲ ತ್ಯಾಗ ಮಾಡಿದ್ದಾಳೆ ಅಂತ ಹೇಳಿಕೊಳ್ಳಬೇಕು ಅಂತ ಇಷ್ಟೆಲ್ಲ ಮಾತಾಡ್ಲಿಲ್ಲ. ಬೇರೆಯವರು ಮಾಡಿರೋದು ದೊಡ್ಡ ಸಹಾಯ ಅಂತ ಅವಳಿಗೆ ಅನಿಸಿದೆ, ಆದರೆ ನಾನು ಮಾಡಿರೋದು ನೆನಪಾಗಲಿ ಅಂತ ಹೇಳ್ತಿದೀನಿ ಅಷ್ಟೇ. ನನಗೆ ನಿಮ್ಮಿಬ್ಬರನ್ನು ಕಳೆದುಕೊಳ್ಳೋಕೆ ಆಗೋದಿಲ್ಲ, ನಿಮಗೆ ಏನಾದರೂ ನನಗೆ ಸಹಿಸಿಕೊಳ್ಳೋಕೆ ಆಗೋದಿಲ್ಲ” ಎಂದು ನಿತ್ಯಾ ಹೇಳಿಕೊಂಡು ಅತ್ತಿದ್ದಾಳೆ.

67
ಕ್ಷಮೆ ಕೇಳಿದ ತಂಗಿ!

ನಿತ್ಯಾ ಹೇಳಿದ್ದು ಕೇಳಿಸಿಕೊಂಡ ನಿಧಿ, “ಅಕ್ಕಾ, ನೀನು ಮಾಡಿದ್ದನ್ನೆಲ್ಲ ನಾನು ಮರೆತಿಲ್ಲ. ದಯವಿಟ್ಟು ನನ್ನ ಮಾತನ್ನು ಕ್ಷಮಿಸು” ಅಂತ ಹೇಳಿದ್ದಳು. ಕೊನೆಗೂ ಅಕ್ಕನ ಬಳಿ ನಿಧಿ ಕ್ಷಮೆ ಕೇಳಿದ ಬಳಿಕ ನಿತ್ಯಾ ಕ್ಷಮಿಸಿದ್ದಾಳೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಮುಂದೆ ಏನಾಗುವುದೋ ಏನೋ!

77
ಪಾತ್ರಧಾರಿಗಳು

ನಿತ್ಯಾ- ನಮ್ರತಾ ಗೌಡ

ನಿಧಿ-ಭವ್ಯಾ ಗೌಡ

ಕರ್ಣ-ಕಿರಣ್‌ ರಾಜ್‌

ಶಾಂತಿ-ಗಾಯತ್ರಿ ಪ್ರಭಾಕರ್‌

Read more Photos on
click me!

Recommended Stories