Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಈ ಹಿಂದೆ ಗೌತಮ್ ಹಾಗೂ ಭೂಮಿಕಾಗೆ ಬೇಸರ ಆಗುವಲ್ಲಿ ಅಪೇಕ್ಷಾ ಕೈವಾಡ ಕೂಡ ಇತ್ತು. ಈಗ ಅಪೇಕ್ಷಾ ಜೀವನಪರ್ಯಂತ ಕಣ್ಣೀರು ಹಾಕುವ ಶಾಕಿಂಗ್ ನ್ಯೂಸ್ ಹೊರಬಂದಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್‌ನಿಂದ ಭೂಮಿ ದೂರವಾಗಿ ಬದುಕುತ್ತಿದ್ದಾಳೆ, ಈಗ ಮಹಿಮಾ ತಾಯಿಯಾಗುತ್ತಿದ್ದಾಳೆ, ಆದರೆ ಅಪೇಕ್ಷಾಗೆ ಮಾತ್ರ ಮಕ್ಕಳ ಯೋಗ ಇಲ್ಲ. ಜಯದೇವ್-ಶಕುಂತಲಾ ಸೇರಿಕೊಂಡು, ಗೌತಮ್-ಭೂಮಿಗೆ ಮಾಡಿದ ಅನ್ಯಾಯಕ್ಕೋ ಏನೋ ಅವಳಿಗೆ ಮೊಮ್ಮಕ್ಕಳನ್ನು ನೋಡೋ ಯೋಗವೇ ಇಲ್ಲದಂತಾಗಿದೆ.
27
ಶಕುಂತಲಾ ವಂಶ ಬೆಳೆಯುತ್ತಿಲ್ಲ
ಹೌದು, ಶಕುಂತಲಾ ತನ್ನ ವಂಶ ಬೆಳೆಯಬೇಕು ಎಂದು ಬಯಸುತ್ತಿದ್ದಾಳೆ. ಆದರೆ ಮದುವೆಯಾಗಿ ಇಷ್ಟು ವರ್ಷವಾದರೂ ಕೂಡ ಅಪೇಕ್ಷಾಗೆ ತಾಯಿ ಭಾಗ್ಯ ಇಲ್ಲ. ಇನ್ನು ಜಯದೇವ್‌ಗೂ ಕೂಡ ಮಕ್ಕಳಾಗಿಲ್ಲ. ಇನ್ನು ಮಹಿಮಾ ಆರಂಭದಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಳು, ಈಗ ಅವಳಿಗೆ ತಾಯಿಯಾಗುವ ಭಾಗ್ಯ ಸಿಕ್ಕಿದೆ.
37
ಶಕುಂತಲಾ ಮಾಡಿದ ಕರ್ಮ ಎಲ್ಲಿಗೆ ಹೋಗತ್ತೆ?
ಗೌತಮ್ ಹಾಗೂ ಭೂಮಿಕಾಗೆ ನೋವು ಕೊಟ್ಟಿದ್ದಕ್ಕೆ, ಅವರಿಗೆ ಮಾಡಿದ ಮೋಸಕ್ಕೆ ನಮಗೆ ಮಕ್ಕಳಾಗುತ್ತಿಲ್ಲ, ಈ ವಂಶ ಬೆಳೆಯುತ್ತಿಲ್ಲ. ನಾವು ಎಷ್ಟೇ ಪ್ರಯತ್ನಪಟ್ಟರೂ ಕೂಡ ಮಕ್ಕಳಾಗುತ್ತಿಲ್ಲ ಎಂದು ಅಪೇಕ್ಷಾ ಒಮ್ಮೆ ಪಾರ್ಥನ ಬಳಿ ಬೇಸರ ಹೊರಹಾಕಿದ್ದಳು. ಈಗ ಅವಳಿಗೆ ಮಕ್ಕಳಾಗೋದಿಲ್ಲ ಎಂದು ವೈದ್ಯರು ಸೆರ್ಟಿಫಿಕೇಟ್ ಕೊಟ್ಟಿದ್ದರು. ಅಪೇಕ್ಷಾಗೆ ಈಗ ಮಕ್ಕಳಾಗಲ್ಲ ಎನ್ನೋದು ಶಕುಂತಲಾ ಮಾಡಿದ ಕರ್ಮದಿಂದ ಒಂದೇ ಅಲ್ಲ, ಅವಳು ಮಾಡಿದ ಕರ್ಮವೂ ಸೇರಿದೆ.
ನಾನು, ಪಾರ್ಥ ಮದುವೆಯಾಗಿ ಬಂದಾಗ ಅದನ್ನು ಭೂಮಿಕಾ ಒಪ್ಪಿಕೊಳ್ಳಲಿಲ್ಲ, ನಮಗೆ ಬಾಯಿಗೆ ಬಂದಹಾಗೆ ಬೈಯ್ದಳು, ಮನೆಯವರು ಇದಕ್ಕೆ ಸಾಥ್ ಕೊಟ್ಟರು ಅಂತ ಅಪೇಕ್ಷಾ ಬೇಸರ ಮಾಡಿಕೊಂಡಿದ್ದಾಳೆ. ಅಪೇಕ್ಷಾಳನ್ನು ಅವರ ತಂದೆ-ತಾಯಿ ಕೂಡ ದೂರ ಇಟ್ಟಿದ್ದರು. ಇದು ಅಪೇಕ್ಷಾಗೆ ಬೇಸರ ತಂದಿತ್ತು. ಅದಾದಮೇಲೆ ಭೂಮಿಕಾಗೆ ಮಗು ಆಗೋದು ಕಷ್ಟ ಎಂದು ವೈದ್ಯರು ಹೇಳಿದ್ದರು.
57
ಮಗು ಆಗೋದು ಕಷ್ಟ ಎಂದಿದ್ದರು
ಭೂಮಿಕಾ ವಯಸ್ಸು 35 ಆದಮೇಲೆ ಮದುವೆ ಆಗಿದ್ದಳು, ಆಗ ಗೌತಮ್‌ಗೆ 45 ವರ್ಷ. ಇವರಿಬ್ಬರು ತಡವಾಗಿ ಮದುವೆಯಾಗಿದ್ದಕ್ಕೆ ಸಹಜವಾಗಿ ಮಗು ಆಗುವುದು ಕಷ್ಟವಾಗಿತ್ತು. ಸಾಕಷ್ಟು ಬಾರಿ ವೈದ್ಯರನ್ನು ಸಂಪರ್ಕಿಸಿದಾಗಲೂ ಅವರಿಗೆ ಅಷ್ಟು ಭರವಸೆ ಸಿಕ್ಕಿರಲಿಲ್ಲ.
67
ಅಪೇಕ್ಷಾ ಚುಚ್ಚು ಮಾತು ನೆನಪಿದ್ಯಾ?
ಈ ಜೋಡಿ ಒಂದಾಗಬಾರದು, ಮಗು ಆಗಬಾರದು ಅಂತ ಶಕುಂತಲಾ ಕೂಡ ಬಯಸಿದ್ದಳು. ಆ ಟೈಮ್‌ನಲ್ಲಿ ಅಪೇಕ್ಷಾ ಭೂಮಿಕಾಗೆ ಚುಚ್ಚು ಮಾತನಾಡಿದ್ದಳು. ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆ ಆದರೆ ಹೀಗೆ ಆಗೋದು ಅಂತ ಅಪೇಕ್ಷಾ ಚುಚ್ಚು ಮಾತನಾಡಿದ್ದಳು. ಇದು ಭೂಮಿಗೆ ಕಣ್ಣೀರು ಹಾಕಿಸಿತ್ತು. ಪದೇ ಪದೇ ಅಪೇಕ್ಷಾ, ಭೂಮಿಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಳು. ಆ ಕಾರಣಕ್ಕೋ ಏನೋ ಅಪೇಕ್ಷಾಗೆ ಈಗ ಮಗುವೇ ಆಗಿಲ್ಲ. ಆಮೇಲೆ ಭೂಮಿಕಾ ಪ್ರಗ್ನೆಂಟ್ ಆದಾಗ, ಅವಳನ್ನು ರೌಡಿಗಳು ಅಟ್ಯಾಕ್ ಮಾಡಿದಾಗ ಅಪೇಕ್ಷಾ ಕಾಪಾಡಿದ್ದಳು. ಇದನ್ನು ಕೂಡ ಮರೆಯುವಂತಿಲ್ಲ.
77
ಅಪೇಕ್ಷಾಗೆ ಮಕ್ಕಳಾಗಲ್ಲ
ನಮಗೆ ಮಕ್ಕಳಾಗೋದಿಲ್ಲ ಎನ್ನೋ ವಿಚಾರ ಪಾರ್ಥ-ಅಪೇಕ್ಷಾಗೆ ಗೊತ್ತಾದರೆ ಏನು ಮಾಡುತ್ತಾರೋ ಏನೋ! ಅಪೇಕ್ಷಾ ಈಗ ಒಳ್ಳೆಯವಳಾಗಿದ್ದಾಳೆ, ಅಕ್ಕ-ಬಾವ ಮನೆಗೆ ಬರಲಿ, ಆಮೇಲೆ ಈ ಮನೆಯಲ್ಲಿ ಖುಷಿ ನೆಲೆಸುತ್ತದೆ ಎಂದು ಅಂದುಕೊಂಡಿದ್ದಾಳೆ. ಆದರೆ ಅವಳಿಗೆ ಹೀಗೆ ಆಗಿರೋದು ನಿಜಕ್ಕೂ ವೀಕ್ಷಕರಿಗೆ ಬೇಸರ ಆಗುವುದು.