ಆಕೆ ಕಂಡ್ರೆ ನಂಗೆ ಹೊಟ್ಟೆ ಉರಿ, ತಪ್ಪು ತಪ್ಪು ಮಾತಾಡಿ ಫೇಮಸ್​ ಆಗೋದು ಸಾಧನೆನಾ? Bigg Boss ಜಾಹ್ನವಿ ಶಾಕಿಂಗ್​ ಹೇಳಿಕೆ

Published : Dec 13, 2025, 03:03 PM IST

ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್ ಆದ ಬಳಿಕ ಆಂಕರ್ ಜಾಹ್ನವಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯನ್ನು 'ತುಘಲಕ್ ದರ್ಬಾರ್'ಗೆ ಹೋಲಿಸಿರುವ ಅವರು, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಖ್ಯಾತಿ ಕಂಡು ತಮಗೆ ಹೊಟ್ಟೆ ಉರಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

PREV
18
ಬಿಗ್​ಬಾಸ್ ಎಲಿಮಿನೇಷನ್​ ಶಾಕ್​

ಬಿಗ್​ಬಾಸ್​ ಮೂಲಕ ಹೈಪ್​ ಕ್ರಿಯೇಟ್​ ಮಾಡಿದ್ದ ಆ್ಯಂಕರ್​ ಜಾಹ್ನವಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಿರುವ ಕಾರಣ, ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ತಾವೇ ಫೈನಲಿಸ್ಟ್​ ಆಗಲು ಸೂಕ್ತ ಸ್ಪರ್ಧಿಯಾಗಿತ್ತು ಎಂದು ಈಗಲೂ ಅಂದುಕೊಂಡಿರುವ ಜಾಹ್ನವಿ ಅವರಿಗೆ ಎಲಿಮಿನೇಷನ್​ ಶಾಕ್​ ಕೊಟ್ಟಿದೆ.

28
ವೀಕ್ಷಕರ ಅಸಮಾಧಾನ

ಅಷ್ಟಕ್ಕೂ ಜಾಹ್ನವಿ (Bigg Boss Jhanvi) ಅವರು ಬಿಗ್​ಬಾಸ್​ ಮನೆಯಲ್ಲಿ ಇದ್ದಾಗ ಕೆಲವು ಕಾರಣಗಳಿಂದ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು ಇದೆ. ಮಧ್ಯರಾತ್ರಿ ಗೆಜ್ಜೆ ಶಬ್ದ ಮಾಡುವ ಮೂಲಕ ರಕ್ಷಿತಾ ಶೆಟ್ಟಿಗೆ ತೊಂದರೆ ಕೊಟ್ಟಿದ್ದು ಒಂದಾದರೆ, ಅದಕ್ಕಿಂತಲೂ ಅವರಿಗೆ ಉಲ್ಟಾ ಹೊಡೆದದ್ದು ಸ್ಪಂದನಾ ಸೋಮಣ್ಣ ಅವರ ವಿಷಯದಲ್ಲಿ.

38
ನೆಟ್ಟಿಗರ ಟೀಕೆ

ಇದೀಗ ಬಿಗ್​ಬಾಸ್​​ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸೇರಿದಂತೆ ಕೆಲವು ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು, ನೆಟ್ಟಿಗರಿಂದ ಭಾರಿ ಟೀಕೆಗಳೂ ಕೇಳಿಬರುತ್ತಿವೆ.

48
ತುಘಲಕ್​ ದರ್ಬಾರ್​ ಇದ್ದಂಗೆ

ಬಿಗ್​ಬಾಸ್ ಮನೆಯಲ್ಲಿ ಏನೇನೋ ಆಗತ್ತೆ. ಬಿಗ್​ಬಾಸ್​​ ಮನೆಯಲ್ಲಿ ಇರುವಾಗಲೇ ಹೊರಗೆ ಏನಾಗ್ತಿತ್ತು ಎನ್ನುವುದು ನನಗೆ ತಿಳಿದಿತ್ತು. ಹೊರಗೆ ವೀಕ್ಷಕರಿಗೆ ತೋರಿಸೋದು ಒಂದೂವರೆ ಗಂಟೆ ಮಾತ್ರ. ಅದೊಂದು ರೀತಿಯ ತುಘಲಕ್​ ದರ್ಬಾರ್​ ಇದ್ದ ಹಾಗೆ ಎಂದು ರೆಡ್​ ಎಫ್​ಎಂ ಗೆ ನೀಡಿರುವ ಸಂದರ್ಶನದಲ್ಲಿ ಜಾಹ್ನವಿ (Bigg Boss Jhanvi) ಹೇಳಿದ್ದಾರೆ.

58
ರಕ್ಷಿತಾ ಎಂದ್ರೆ ಇರಿಟೇಟ್​

ಆ ಹುಡುಗಿ ಎಂದ್ರೆ ನನಗೆ ಇರಿಟೇಟ್​. ಈಗಲೂ ರಕ್ಷಿತಾ ಶೆಟ್ಟಿ ಎಂದ್ರೆ ನನಗೆ ಇಷ್ಟವಿಲ್ಲ ಎನ್ನುತ್ತಲೇ ತಪ್ಪು ತಪ್ಪು ಮಾತನಾಡಿ, ಹಾಡು ಹೇಳಿ ವೈರಲ್​ ಆಗುವವರು ಹೆಚ್ಚಾಗ್ತಿದ್ದಾರೆ. ಅವರಿಗೆ ಟೇಪ್​ ಕಟಿಂಗ್​ಗೂ ಕರೀತಾರೆ, ಮೀಡಿಯಾದವರು ಮೈಕೂ ಹಿಡೀತಾರೆ, ಅವರ ಸಾಧನೆ ಏನು? ನಾವೆಷ್ಟು ಸಾಧನೆ ಮಾಡಿ ಮೇಲೆ ಬಂದವರು ಎಂದು ರಕ್ಷಿತಾ ಶೆಟ್ಟಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ ಜಾಹ್ನವಿ.

68
ಹೂವಿನ ಬಾಣದಂತೆ ಹುಡುಗಿಗೆ ಹೋಲಿಕೆ!

ಹೂವಿನ ಬಾಣದಂತೆ ಹುಡುಗಿಗೆ ರಕ್ಷಿತಾ ಶೆಟ್ಟಿ ಅವರನ್ನು ಹೋಲಿಕೆ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಅದೇ ವೇಳೆ ಅಲ್ಲಿಯೇ ಸ್ಪಷ್ಟನೆಯನ್ನೂ ನೀಡಿದ ಜಾಹ್ನವಿ, ರಕ್ಷಿತಾ ಶೆಟ್ಟಿ ಬಿಡಿ ತನ್ನ ಯುಟ್ಯೂಬ್​ಗೆ ಏನೇನು ಬೇಕೋ ಅದನ್ನು ಮಾಡ್ತಾಳೆ. ಕಷ್ಟಪಟ್ಟು ಏನೇನೋ ಕಂಟೆಂಟ್​ ಮಾಡ್ತಾಳೆ ಎಂದೂ ಹೇಳಿದ್ದಾರೆ.

78
ರಕ್ಷಿತಾ ಕಂಡ್ರೆ ಹೊಟ್ಟೆ ಉರಿ

ಇದೇ ವೇಳೆ ರಕ್ಷಿತಾ ಶೆಟ್ಟಿ ಮಂಗಳೂರಿನವಳು. ಅವಳಿಗೆ ಇರುವ ಖ್ಯಾತಿ ನೋಡಿದ್ರೆ ನನಗೆ ಹೊಟ್ಟೆ ಉರಿಯಾಗುತ್ತದೆ. ನಾನೂ ಅಲ್ಲೇ ಹುಟ್ಟಿದ್ರೆ ನನ್ನನ್ನೂ ಜನ ಇಷ್ಟಪಡುವವರೇನೋ ಎಂದಿದ್ದಾರೆ!

88
ಟ್ರಿಗರ್​ ಮಾಡಲು

ರಜತ್​ ಮತ್ತು ಚೈತ್ರಾ ಕುಂದಾಪುರ ಅವರನ್ನು ಕರೆಸಿದ್ದೇ ಅಶ್ವಿನಿ ಗೌಡ ಅವರನ್ನು ಟ್ರಿಗರ್​ ಮಾಡಲು ಎಂದೂ ಈ ಸಂದರ್ಭದಲ್ಲಿ ಜಾಹ್ನವಿ ಹೇಳಿದ್ದಾರೆ.

Read more Photos on
click me!

Recommended Stories