Bhagyalakshmi serial ಸುಷ್ಮಾ ರಾವ್‌ ಪತಿ ಯಾರು? ಮಾತು ತಪ್ಪಿದ ಗಂಡನನ್ನು ತರಾಟೆಗೆ ತಗೊಂಡ ನಟಿ!

Published : Jan 31, 2026, 04:47 PM IST

Bhagyalakshmi Kannada Serial Actress Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಆಗಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಸುಷ್ಮಾ ಕೆ ರಾವ್‌ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಆಗಿವೆ. ಈ ಖುಷಿಯನ್ನು ಕಲರ್ಸ್‌ ಕನ್ನಡ ವಾಹಿನಿಯು ಅನುಬಂಧ ವೇದಿಕೆಯಲ್ಲಿ ಸಂಭ್ರಮಿಸಿದೆ. 

PREV
15
ಸುಷ್ಮಾ ಕೆ ರಾವ್‌ ಅವರ ಪತಿ ಯಾರು?

ಸುಷ್ಮಾ ಕೆ ರಾವ್‌ ಅವರ ಪತಿ ಮಧುಕರ್ ಆದಿಮೂರ್ತಿ ಅವರು ಐಟಿ ಉದ್ಯೋಗಿ. ಅಂದಹಾಗೆ ಆರ್ಯನ್‌ ಎಂಬ ಮುದ್ದಾದ ಮಗ ಕೂಡ ಇದ್ದಾನೆ.

25
ಎಲ್ಲಿಯೂ ಹೇಳಿಕೊಂಡಿಲ್ಲ?

ನನ್ನ ಕುಟುಂಬಸ್ಥರಿಗೆ ಕ್ಯಾಮರಾ ಎಂದರೆ ಆಗೋದಿಲ್ಲ, ನನ್ನ ತಾಯಿಗೆ, ತಮ್ಮನಿಗೆ ಯಾರಿಗೂ ಕೂಡ ಕ್ಯಾಮರಾ ಮುಂದೆ ಬರೋದು ಇಷ್ಟವೇ ಇಲ್ಲ ಎಂದು ಸುಷ್ಮಾ ರಾವ್‌ ಹೇಳಿದ್ದರು. ಆದರೆ ಸುಷ್ಮಾ ಪತಿ, ಮಗ ಸರ್ಪ್ರೈಸ್‌ ಆಗಿ ಅನುಬಂಧ ವೇದಿಕೆಗೆ ಬಂದಿದ್ದರು.

35
ಮಾತು ತಪ್ಪಿದ ಪತಿ

ನನ್ನ ಫೋಟೋವನ್ನು ಎಲ್ಲಿಯೂ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಬೇಡ, ನಾನು ಎಲ್ಲಿಗೂ ಬರೋದಿಲ್ಲ, ನಿನ್ನ ಜೀವನ ಬೇರೆ, ನಮ್ಮ ಜೀವನ ಬೇರೆ ಎಂದು ಬದುಕೋಣ ಎಂದು ಹೇಳಿ ಈಗ ಅನುಬಂಧ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಸುಷ್ಮಾ ಅವರು ಸರ್ಪ್ರೈಸ್‌ ಆಗಿ ಹೇಳಿದ್ದಾರೆ.

45
ಪತಿಗೆ ಒಂದೇ ಡೌಟ್

ನನ್ನ ಟೀಂನವರು ನನಗೆ ಫೋನ್‌ ಮಾಡಿದಾಗೆಲ್ಲ, ನೀವು ಹೇಗೆ ಸಹಿಸಿಕೊಳ್ಳಬಹುದು ಎಂದು ಹೇಳಿದ್ದರು. ನಾನು ಮನೆಯಲ್ಲಿದ್ದಾಗ, ಶೂಟಿಂಗ್‌ನಲ್ಲಿದ್ದವರು ಹೇಗೆ ಸಹಿಸಿಕೊಂಡಿರಬಹುದು ಎಂಬ ಡೌಟ್‌ ಇರುತ್ತದೆ. ಏನೇ ಆದರೂ ನಾನು ಮಾತನಾಡೋದಿಲ್ಲ ಎಂದು ಮಧುಕರ್‌ ಅವರು ಹೇಳಿದ್ದಾರೆ.

55
ಮಗ ಹೇಳಿದ್ದೇನು?

ಆರ್ಯನ್‌ “ನನ್ನ ತಾಯಿ ಪೊರಕೆಯಲ್ಲಿ ಹೊಡೆಯುತ್ತಾಳೆ. ಅಪ್ಪನಿಗಿಂತ ಜಾಸ್ತಿ ನನಗೆ ಹೊಡೆಯುತ್ತಾಳೆ” ಎಂದು ಮುದ್ದು ಮುದ್ದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories