ಕರ್ಣ ಧಾರಾವಾಹಿಯಲ್ಲಿ ನಿಧಿಗೆ ಕರ್ಣ ಅಂದರೆ ತುಂಬ ಇಷ್ಟ. ಕಾಲೇಜು ಪ್ರೊಫೆಸರ್ ಪ್ರೀತಿಸುವ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಈ ಸೀರಿಯಲ್ ಆರಂಭದಲ್ಲೇ ನಿಧಿ ಪಾತ್ರಧಾರಿ ಭವ್ಯಾ ಗೌಡ ಅವರು ಈ ಸೀರಿಯಲ್ ಆರಂಭದಲ್ಲಿ ತಾನು ಲವ್ ಮಾಡಿರೋದಾಗಿ ಒಪ್ಪಿಕೊಂಡಿದ್ದರು.
ನಿಮಗೆ ಯಾರಾದರೂ ಕ್ರಶ್ ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್ ಸುವರ್ಣ ನ್ಯೂಸ್ ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹೇಳಿದ್ದರು.
25
ಭವ್ಯಾ ಗೌಡ ಫೋಟೋ ಶೇರ್ ಮಾಡಿದ್ರು
ಕೆಲ ದಿನಗಳ ಹಿಂದೆ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ಸಹೋದರನ ಮದುವೆ ಎಂದು ಕ್ಯಾಪ್ಶನ್ ನೀಡಿ, ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳ ಮಧ್ಯೆ ಒಂದು ಫೋಟೋಕ್ಕೆ ದೃಷ್ಟಿ ತಾಕದೆ ಇರುವಂತೆ ಮಾಡುವ ಇಮೋಜಿ ಹಾಕಿದ್ದರು, ಆಗಲೇ ಭವ್ಯಾ ಗೌಡ ಅವರ ಪ್ರಿಯಕರ ಇವರೇ ಇರಬಹುದಾ ಎಂಬ ಪ್ರಶ್ನೆ ಬಂದಿತ್ತು.
35
ಹುಡುಗ ಯಾರು?
ಚಿಕ್ಕಮಗಳೂರು ಮೂಲದ ಹುಡುಗನನ್ನು ಭವ್ಯಾ ಗೌಡ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ, ಇನ್ನು ಭವ್ಯಾ ಗೌಡ ಅವರು ಹುಡುಗನ ಫೋಟೋ ಸಮೇತ ಅವರೇ ಅಧಿಕೃತವಾಗಿ ರಿವೀಲ್ ಮಾಡೋದು ಬಾಕಿ ಇದೆ.
ಈಗ ಭವ್ಯಾ ಗೌಡ ಅವರು ತಾವು ಪ್ರೀತಿ ಮಾಡುತ್ತಿರುವ ಹುಡುಗನ ಕೈಗಳ ಜೊತೆ ತಮ್ಮ ಕೈ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ಕೂಡ ದೃಷ್ಟಿ ತಾಕದಿರುವಂತೆ ಮಾಡುವ ಇಮೋಜಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಗಾಸಿಪ್ ಇನ್ನಷ್ಟು ಗಟ್ಟಿಯಾಗಿದೆ.
55
ಯಾವಾಗ ಅಧಿಕೃತವಾಗಿ ಘೋಷಣೆ ಮಾಡ್ತಾರೆ?
ಭವ್ಯಾ ಗೌಡ ಅವರಿಗೆ ಅಕ್ಕ ಕೂಡ ಇದ್ದಾರೆ. ಅಕ್ಕನಿಗೆ ಮದುವೆ ಮಾಡಬೇಕು ಎಂದು ಭವ್ಯಾ ಹೇಳಿದ್ದರು. ಭವ್ಯಾ ಗೌಡ ಅಕ್ಕ ದಿವ್ಯಾ ಮದುವೆ ಬಳಿಕ ಇವರು ತಮ್ಮ ಲವ್ ವಿಷಯವನ್ನು ಬಹಿರಂಗ ಮಾಡಬಹುದು ಎಂದು ಕಾಣುತ್ತದೆ, ಕಾದು ನೋಡೋಣ