Bigg Boss Kannada 12 Updte: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾರಿಗೆ ಯಾವ ಸ್ಥಾನ ಇದೆ ಎಂದು ರ್ಯಾಂಕಿಂಗ್ ನೀಡಿ ಎಂದು ಬಿಗ್ ಬಾಸ್ ಆದೇಶ ಮಾಡಿದ್ದರು. ಆ ವೇಳೆ ರಘು, ಗಿಲ್ಲಿ ನಟ ನಡುವೆ ಮಾರಾಮಾರಿ ಜಗಳ ಆಗಿದೆ. ಕುಚಿಕುಗಳಾಗಿದ್ದವರು, ಈಗ ಜಗಳ ಆಡಿಕೊಂಡಿದ್ದಾರೆ.
ಧನುಷ್ ಗೌಡ ಅವರು, “ಎರಡನೇ ಸ್ಥಾನದಲ್ಲಿ ಗಿಲ್ಲಿಯನ್ನು ನಿಲ್ಲಿಸುತ್ತೇನೆ. ಅವನ ವಿಷಯ ಬಂದಾಗ ಅವನು ಸ್ಟ್ಯಾಂಡ್ ತಗೊಳ್ತಾನೆ” ಎಂದಿದ್ದಾರೆ.
ರಕ್ಷಿತಾ ಶೆಟ್ಟಿ ಅವರು, “ಗಿಲ್ಲಿ ನಟ ಮನೆ ಕೆಲಸ ಏನೂ ಮಾಡೋದಿಲ್ಲ” ಎಂದು ಹೇಳಿದ್ದಾರೆ.
25
ಮನೆ ಕೆಲಸ ಎಂದಿದ್ದಕ್ಕೆ ಗಿಲ್ಲಿಗೆ ಸಿಟ್ಟು
ರಘು ಅವರು, “ಮನೆಯಲ್ಲಿ ಸೋಂಭೇರಿ, ಎರಡನೇ ಸ್ಥಾನದಲ್ಲಿದ್ದಾರೆ” ಎಂದು ಹೇಳಿದ್ದಾರೆ.
ಗಿಲ್ಲಿ ನಟ ಅವರು, “ಯಾರು ನೋಡಿದರೂ ಕೂಡ ಮನೆ ಕೆಲಸ ಅಂತಾರೆ, ಮನೆ ಕೆಲಸ ಮಾಡೋಕೆ ಬಂದಿದ್ದೀನಾ ಇಲ್ಲಿ?” ಎಂದು ಹೇಳಿದ್ದಾರೆ.
35
ಊಟದ ವಿಚಾರಕ್ಕೆ ಗಿಲ್ಲಿ ಪಿತ್ತ ನೆತ್ತಿಗೇರಿತು
“ಅಡುಗೆ ಮನೆಯಲ್ಲಿ ತಟ್ಟೆ ಹಿಡಿದುಕೊಂಡು ನಿಂತಿದ್ಯಾ?” ಎಂದು ರಘು ಪ್ರಶ್ನೆ ಮಾಡಿದ್ದಾರೆ. ತಾನು ಮಾತಾಡುವಾಗ ಗಿಲ್ಲಿ ನಟ ಮಾತನಾಡಿದರು ಎಂದು ರಘು ಸಿಟ್ಟಾಗಿದ್ದಾರೆ. ಇದೇ ವಿಚಾರವಾಗಿ ಇವರಿಬ್ಬರ ಮಧ್ಯೆ ಜಗಳ ಆಗಿದೆ. ರಕ್ಷಿತಾ ಮಾತ್ರ ಇವರ ಜಗಳ ಬಿಡಿಸಲು ಮುಂದಾಗಿದ್ದಾರೆ.
ರಘು ಅವರು ಊಟದ ವಿಚಾರ ತೆಗೆದಿರೋದು ಗಿಲ್ಲಿ ನಟನಿಗೆ ಸಿಟ್ಟು ತರಿಸಿದೆ. ಹೀಗಾಗಿ ಇನ್ನೊಂದಿಷ್ಟು ಜಗಳ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದೇ ವಿಚಾರ ಚರ್ಚೆ ಆಗಿದೆ. ಊಟದ ವಿಚಾರ ಯಾಕೆ ಮಾತನಾಡಬೇಕು ಎಂದು ಹೇಳಲಾಗುತ್ತಿದೆ
55
ಗಿಲ್ಲಿ ಲವ್ಸ್ ರಘು
ರಘು ಅಣ್ಣ ಅಂದರೆ ನನಗೆ ತುಂಬ ಇಷ್ಟ ಎಂದು ಗಿಲ್ಲಿ ನಟ ಹೇಳಿಕೊಂಡಿದ್ದರು. ಯಾವಾಗ ನೋಡಿದರೂ ಅವರು ರಘು ಜೊತೆ ಇರುತ್ತಿದ್ದರು, ರಘು ಮೈಮೇಲೆ ಬಿದ್ದು ಹೊರಳಾಡುತ್ತಿದ್ದರು. ಟಾಸ್ಕ್ ಬಂದಾಗ ಕೂಡ ರಘು ಅವರನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಈಗ ಇವರ ಮಧ್ಯೆ ಜಗಳ ಬಂದರೂ ಜಾಸ್ತಿ ದಿನ ಇರೋದಿಲ್ಲ