ಸೋಶಿಯಲ್ ಮೀಡಿಯಾದಲ್ಲಿ ಮಲ್ಲಮ್ಮ ಸಂಭಾವನೆ ಕುರಿತು ಚರ್ಚೆ ನಡೆಯುತ್ತಿವೆ. ಸಂದರ್ಶನಗಳಲ್ಲಿಯೂ ಸಂಭಾವನೆ, ವಾಹಿನಿ ಜೊತೆಗಿನ ಒಪ್ಪಂದ ಸೇರಿದಂತೆ ಎಲ್ಲಾ ವಿಷಯ ನಮ್ಮ ಪ್ರಿಯಾಂಕಾ ಮೇಡಂಗೆ ಗೊತ್ತು ಎಂದು ಮಲ್ಲಮ್ಮ ಹೇಳಿದ್ದರು. ಈ ವಿಡಿಯೋಗಳ ಬೆನ್ನಲ್ಲೇ ಕೆಲಸವಿಲ್ಲದ ಕೆಲವರು ಪ್ರಿಯಾಂಕಾ ಅವರ ಮೇಲೆಯೇ ಅನುಮಾನ ಬರುವಂತೆ ಮತನಾಡಿದ್ದರು. ಈ ವಿಷಯ ತಿಳಿದ ಪ್ರಿಯಾಂಕಾ ಅವರು ಸಂಭಾವನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮನೋಜ್ ಸಹ ಉಪಸ್ಥಿತಿಯಲ್ಲಿದ್ದರು.