Karna Serial: ಡಿಪ್ರೆಶನ್‌ಗೆ ಹೋದಳಾ ನಿಧಿ? ; ಇನ್ನು ಕರ್ಣ-ನಿತ್ಯಾ ರಿಯಲ್‌ ಮದುವೆ ಆಗಬೇಕು!

Published : Feb 10, 2026, 01:19 PM IST

Karna Kannada Serial Episode Update: ಕರ್ಣ ಧಾರಾವಾಹಿಯಲ್ಲಿ ಅಪ್ಪ-ಮಗನಿಗೆ ನಿಧಿ-ಕರ್ಣ-ನಿತ್ಯಾ ಬದುಕಿನಲ್ಲಿ ಆಟ ಆಡೋದು ದೊಡ್ಡ ಕೆಲಸವಾಗಿದೆ. ಈಗ ಸಂಜಯ್‌ ಕೂಡ ಅದೇ ಹಾದಿ ಹಿಡಿದಿದ್ದಾನೆ. ಇದರಿಂದ ನಿಧಿ ಕನಸು ಕಮರಿ ಹೋಗಿದೆ. ಹಾಗಾದರೆ ಮುಂದೆ ಏನಾಗುವುದು? 

PREV
16
ಬೆಳಗೆದ್ದು ಕರ್ಣ ಮುಖ ನೋಡಿದ ನಿಧಿ

ತನ್ನ ಪರೀಕ್ಷೆ ಫಲಿತಾಂಶ ಬರುತ್ತದೆ, ನಾನು ಪಾಸ್‌ ಆಗ್ತೀನೋ ಇಲ್ಲವೋ ಎಂದು ನಿಧಿ ಚಿಂತೆಯಲ್ಲಿದ್ದಳು. ಬೆಳಗ್ಗೆ ಎದ್ದು ಮೊದಲು ಕರ್ಣನ ಮುಖ ನೋಡಿದರೆ ನನಗೆ ಒಳ್ಳೆಯದಾಗುತ್ತದೆ ಎಂದು ಅವಳು ಅಂದುಕೊಂಡಿದ್ದಳು. ಕರ್ಣನ ಮುಖ ದರ್ಶನ ಆದರೂ ಕೂಡ ಫೇಲ್‌ ಆಗಿದ್ದಾಳೆ.

26
ಸಂಜಯ್‌ ಕುತಂತ್ರ ಒಂದಾ? ಎರಡಾ?

ನಿಧಿ ಹಾಗೂ ಸಂಜಯ್‌ ಇಬ್ಬರೂ ಮೆಡಿಕಲ್‌ ವಿಭಾಗದಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಹೀಗಿರುವಾಗ ನಿಧಿ ಕಂಡರೆ ಸಂಜಯ್‌ಗೆ ಆಗೋದೇ ಇಲ್ಲ, ಈ ಹಿಂದೆಯೂ ಅವನು ತೊಂದರೆ ಕೊಟ್ಟಿದ್ದನು. ಆಗಲೂ ಕರ್ಣ ಬಿಸಿ, ಬಿಸಿ ಕಜ್ಜಾಯ ಕೊಟ್ಟಿದ್ದರೂ ಕೂಡ ಸಂಜಯ್‌ ಬುದ್ಧಿ ಕಲಿತಿಲ್ಲ.

36
ಸಂಜಯ್‌ ಈಗ ಏನು ಮಾಡಿದ?

ಸಂಜಯ್‌ ಈಗ ಮನೆಯಲ್ಲಿರುವ ಹತ್ತು ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ಮಾರಿ, ಅದನ್ನು ಬಳಸಿ ಮೆಡಿಕಲ್‌ ಫಲಿತಾಂಶವನ್ನು ಬದಲಾಯಿಸಿದ್ದಾನೆ. ಕರ್ಣನ ಮನೆಯವರದ್ದೇ ಕಾಲೇಜ್‌ ಇದಾಗಿದೆ. ಹೀಗಾಗಿ ಸಂಜಯ್‌ಗೆ ಈ ಫಲಿತಾಂಶ ಬದಲಿಸೋದು ಸುಲಭ ಆಗಿತ್ತು. ಈಗ ಸಂಜಯ್‌ ಟಾಪರ್‌ ಆದರೆ, ನಿಧಿ ಫೇಲ್‌ ಆಗಿದ್ದಾಳೆ.

46
ಡಿಪ್ರೆಶನ್‌ಗೆ ಹೋಗ್ತಾಳಾ?

ನಿಧಿ ಈಗ ಡಿಪ್ರೆಶನ್‌ಗೆ ಹೋಗ್ತಾಳಾ ಎಂದು ಕಾದು ನೋಡಬೇಕಿದೆ. ಮೆಡಿಕಲ್‌ ಓದಬೇಕು, ಡಾಕ್ಟರ್‌ ಆಗಬೇಕು ಎಂದುಕೊಂಡಿದ್ದವಳಿಗೆ ಫೇಲ್‌ ಆಗಿರೋ ಮಾಹಿತಿ ಸಿಕ್ಕಿದರೆ ಏನು ಮಾಡುತ್ತಾಳೆ? ಅವಳು ಡಿಪ್ರೆಶನ್‌ಗೆ ಹೋಗ್ತಾಳೆ ಎಂದು ಸಂಜಯ್‌ ಲೆಕ್ಕ ಹಾಕಿದ್ದಾನೆ.

56
ಕರ್ಣ ಕಂಡುಹಿಡಿಯುತ್ತಾನಾ?

ನಿಧಿ ಎಂಥಹ ವಿದ್ಯಾರ್ಥಿ ಎಂದು ಎಲ್ಲರಿಗೂ ಗೊತ್ತಿದೆ. ಅವಳು ಫೇಲ್‌ ಎಂದರೆ ಯಾರೂ ಕೂಡ ನಂಬೋದಿಲ್ಲ. ಕರ್ಣ ಈಗ ಪರೀಕ್ಷೆ ಫಲಿತಾಂಶದ ಹಿಂದಿನ ಕುತಂತ್ರವನ್ನು ಬಯಲಿಗೆ ಎಳೆದರೆ ಮಾತ್ರ ನಿಧಿ ಬಚಾವ್‌ ಆಗುತ್ತಾಳೆ.

66
ನಿಧಿಗೆ ಏನೂ ಆಗದೆ ಇದ್ರೆ ಸಾಕು

ನಿಧಿ ಡಿಪ್ರೆಶನ್‌ಗೆ ಹೋಗದೆ, ಆರಾಮಾಗಿರಲಿ, ಇಲ್ಲ ಅಂದ್ರೆ ನಿತ್ಯಾ-ಕರ್ಣ ಗಂಡ-ಹೆಂಡತಿಯಾಗಿ ಬದುಕ್ತಾರೆ ಎಂದು ವೀಕ್ಷಕರು ಲೆಕ್ಕ ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories