ರಕ್ಷಿತಾ ಶೆಟ್ಟಿ ಅವರ ಮಾತುಗಳು ಟ್ರೋಲ್ ಆಗುತ್ತಿರುತ್ತವೆ. ಇದೀಗ ಬೆಂಗಳೂರಿನ ಜನತೆಗೆ ರಕ್ಷಿತಾ ಶೆಟ್ಟಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ರಕ್ಷಿತಾ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಾ, ತಮಗಿದ್ದ ತಪ್ಪು ಕಲ್ಪನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ನೋಡುಗರನ್ನು ಸೆಳೆದ ಸ್ಪರ್ಧಿ. ಬಿಗ್‌ಬಾಸ್ ನಿಂದ ಹೊರಗೆ ಬಂದ್ಮೇಲೆಯೂ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಶೆಟ್ಟಿ ಅವರ ಮಾತುಗಳು ಟ್ರೋಲ್ ಆಗುತ್ತಿರುತ್ತವೆ. ಇದೀಗ ಬೆಂಗಳೂರಿನ ಜನತೆಗೆ ರಕ್ಷಿತಾ ಶೆಟ್ಟಿ ಪ್ರಶ್ನೆಯೊಂದನ್ನು ಕೇಳಿದ್ದಾರೆ.
25
ತಪ್ಪು ಕಲ್ಪನೆ
ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ವಿವಿಧ ಕಾರ್ಯಕ್ರಮಗಳಿಗೆ ರಕ್ಷಿತಾ ಶೆಟ್ಟಿ ಅತಿಥಿಯಾಗಿ ತೆರಳುತ್ತಿದ್ದಾರೆ. ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದಾರೆ. ಇದೆಲ್ಲದರ ಜೊತೆಯಲ್ಲಿ ವ್ಲಾಗ್‌ಗಳನ್ನು ಸಹ ರಕ್ಷಿತಾ ಶೆಟ್ಟಿ ಮಾಡುತ್ತಿದ್ದಾರೆ. ಇದೀಗ ರಕ್ಷಿತಾ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಾ, ತಮಗಿದ್ದ ತಪ್ಪು ಕಲ್ಪನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
35
ಬಿಗ್‌ಬಾಸ್ ಅವಕಾಶ
ರಕ್ಷಿತಾ ಶೆಟ್ಟಿ ತುಳುನಾಡಿನ ಮೂಲದವರಾಗಿದ್ದೂ, ಬೆಳೆದುದ್ದೆಲ್ಲಾ ಮಹಾನಗರಿ ಮುಂಬೈ. ರಜೆದಿನಗಳಲ್ಲಿ ಅಜ್ಜಿ ಊರು ಉಡುಪಿಗೆ ಬರುತ್ತಿದ್ದ ರಕ್ಷಿತಾ ಶೆಟ್ಟಿ ಅವರಿಗೆ ಇಲ್ಲಿಯ ಸಂಸ್ಕೃತಿ, ಆಚರಣೆ, ಜೀವನಶೈಲಿ ಆಕರ್ಷಿಸಿತ್ತು. ಉಡುಪಿಯಲ್ಲಿಯೇ ಉಳಿದುಕೊಂಡು ವಿಡಿಯೋ ಮಾಡುತ್ತಿದ್ದ ರಕ್ಷಿತಾ ಶೆಟ್ಟಿಗೆ ಬಿಗ್‌ಬಾಸ್‌ಗೆ ಹೋಗುವ ಆಫರ್ ಬಂದಿತ್ತು. ಸಿಕ್ಕ ಅವಕಾಶವನ್ನು ರಕ್ಷಿತಾ ಶೆಟ್ಟಿ ಸದ್ಬಳಕೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಿಗ್‌ಬಾಸ್ ಸ್ಪರ್ಧಿಗಳೆಲ್ಲರೂ ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ, ನಾನು ಬೆಂಗಳೂರಿನಲ್ಲಿಯೂ ಸಮುದ್ರವಿದೆ ಅಂತ ತಿಳಿದುಕೊಂಡಿದ್ದೆ. ಬೆಂಗಳೂರಿನ ಯಾವುದಾದ್ರು ಭಾಗದಲ್ಲಿ ಸಮುದ್ರ ಇರಬಹುದು ಅಂತ ಅನ್ಕೊಂಡಿದ್ದೆ. ಬಿಗ್‌ಬಾಸ್‌ಗಾಗಿ ಇಲ್ಲಿ ಬಂದಾಗಲೇ ಬೆಂಗಳೂರಿನಲ್ಲಿ ಸಮುದ್ರ ಇಲ್ಲ ಅಂತ ಗೊತ್ತಾಯ್ತು ಎಂದು ಹೇಳಿಕೊಂಡಿದ್ದಾರೆ.
ನನಗೆ ಬೇಸರವಾದ್ರೆ ನಾನು ಕಡಲ ಕಿನಾರೆಗೆ (ಬೀಚ್) ಹೋಗಿ ಕುಳಿತುಕೊಳ್ಳುತ್ತೇನೆ. ಉಡುಪಿ, ಮುಂಬೈನಲ್ಲಿ ಸಮುದ್ರ ಇದೆ ಅಲ್ಲವಾ? ಹಾಗೆಯೇ ಬೆಂಗಳೂರಿನಲ್ಲಿದೆ ಅಂತ ತಿಳಿದುಕೊಂಡಿದೆ. ಆದ್ರೆ ಇಲ್ಲಿ ಸಮುದ್ರವೇ ಇಲ್ಲ. ಹಾಗಾದ್ರೆ ಬೆಂಗಳೂರಿನ ಜನರು ಬೇಸರವಾದ್ರೆ ಎಲ್ಲಿಗೆ ಹೋಗ್ತಾರೆ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿ ನಾವು ಗೋವಾಗೆ ಹೋಗ್ತಿವಿ ಅಂದ್ರೆ ಗಿಲ್ಲಿ ನಟ, ಬಾರ್‌ಗೆ ಹೋಗ್ತಾರೆ ಎಂದು ತಮಾಷೆ ಮಾಡಿದ್ದಾರೆ.
ಬೆಂಗಳೂರಿನ ನಿವಾಸಿಗಳೇ ಬೇಸರವಾದಾಗ ಅಥವಾ ಮೂಡ್ ಆಫ್ ಆದಾಗ ಎಲ್ಲಿಗೆ ಹೋಗ್ತೀರಿ ಎಂದು ಕಮೆಂಟ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.