3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​

Published : Feb 10, 2026, 12:36 PM IST

ಕರ್ಣ ಸೀರಿಯಲ್‌ನಲ್ಲಿ, ರಮೇಶ್‌ನ ಯೋಜನೆಗೆ ತಿರುಗೇಟು ನೀಡಿದ ಕರ್ಣ 3 ಕೋಟಿ ಆಸ್ತಿಯನ್ನು ನಿತ್ಯಾ ಹೆಸರಿಗೆ ಬರೆಸಲು ಕೇಳಿದ್ದಾನೆ. ಇದೇ ವೇಳೆ, ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಮಾಡರ್ನ್ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್​ ಏನಂದ್ರು ನೋಡಿ. 

PREV
16
ಕರ್ಣ ಸೀರಿಯಲ್​​ ಟ್ವಿಸ್ಟ್​

ಕರ್ಣ ಸೀರಿಯಲ್​ (Karna Serial) ನಲ್ಲಿ ಸದ್ಯ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದ್ದು, ಕರ್ಣ ಮತ್ತು ನಿತ್ಯಾಗೆ ತೊಂದರೆ ಕೊಡಲು ಹೋದ ಅಪ್ಪ ರಮೇಶ್​ಗೆ ತಿರುಗೇಟು ನೀಡಿದ್ದಾನೆ ಕರ್ಣ.

26
ಕರ್ಣನ ತಿರುಗೇಟು

ಮ್ಯಾರೇಜ್​ ಸರ್ಟಿಫಿಕೇಟ್​ ಮಾಡಿಸಿಬಿಟ್ಟರೆ, ನಿತ್ಯಾ ಮತ್ತು ಕರ್ಣ ಗಂಡ- ಹೆಂಡತಿ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಪ್ಲ್ಯಾನ್​ ಮಾಡಿದ್ದ ರಮೇಶ್​. ಇದಕ್ಕಾಗಿ ಪ್ರಾಪರ್ಟಿ ನಿಮ್ಮ ಹೆಸರಿಗೆ ಮಾಡಲು ಈ ಸರ್ಟಿಫಿಕೇಟ್​ ಬೇಕು ಎಂದಿದ್ದ. ಆದರೆ ಅವನ ಪ್ಲ್ಯಾನ್​ ಉಲ್ಟಾ ಮಾಡಿದ್ದ ಕರ್ಣ, ನಿತ್ಯಾಳ ನಕಲಿ ಸಹಿ ಹಾಕಿಸಿದ್ದ. ಆದರೆ 3 ಕೋಟಿ ರೂಪಾಯಿ ಆಸ್ತಿಯನ್ನು ನಿತ್ಯಾಳ ಹೆಸರಿಗೆ ಮಾಡುವಂತೆ ಹೇಳಿ ರಮೇಶ್​ನನ್ನು ಕಕ್ಕಾಬಿಕ್ಕಿ ಮಾಡಿದ್ದಾನೆ.

36
ಸ್ಟೈಲಿಷ್​ ಲುಕ್​

ಸೀರಿಯಲ್​ನಲ್ಲಿ ಇಷ್ಟು ಆಗುತ್ತಿದ್ದಂತೆಯೇ ಇತ್ತ ನಿತ್ಯಾ ಫುಲ್​ ಸ್ಟೈಲಿಷ್ ಆಗಿಬಿಟ್ಟಿದ್ದಾಳೆ. ಸೀರೆಯನ್ನು ಬಿಟ್ಟು ಮಾಡರ್ನ್​ ಡ್ರೆಸ್​​ ತೊಟ್ಟಿದ್ದಾಳೆ! ಅಂದಹಾಗೆ ಈ ಸೀರಿಯಲ್​ಗೂ, ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಅವರ ಸ್ಟೈಲಿಷ್​ ಲುಕ್​ಗೂ ಏನೂ ಸಂಬಂಧವಿಲ್ಲ. ಆದರೆ ಹೀಗೆ ಕಮೆಂಟ್​ ಮಾಡುವ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು.

46
ಮಾಡರ್ನ್​ ಡ್ರೆಸ್​​

ಅಂದಹಾಗೆ ನಮ್ರತಾ ಗೌಡ (Namratha Gowda) ಅವರು ಮಾಡರ್ನ್​ ಡ್ರೆಸ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡು, ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮದುಮಗಳಂತೆ ಅದರಲ್ಲಿ ಕಂಗೊಳಿಸುತ್ತಿದ್ದಾರೆ ನಟಿ.

56
ಸೀರಿಯಲ್​​ಗೆ ಕನೆಕ್ಟ್​

ಇದನ್ನು ನೋಡಿದ ಅಭಿಮಾನಿಗಳು ಕರ್ಣ ಸೀರಿಯಲ್​​ಗೂ, ಈ ಲುಕ್​ಗೂ ಕನೆಕ್ಟ್​ ಮಾಡಿ, 3 ಕೋಟಿಯ ಆಸ್ತಿ ಬರುತ್ತಿದ್ದಂತೆಯೇ ಲುಕ್ಕೇ ಚೇಂಜಾಯ್ತು ಎಂದು ತಮಾಷೆ ಮಾಡುತ್ತಿದ್ದಾರೆ.

66
ಫ್ಯಾನ್ಸ್​ ಫಿದಾ

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರೋ ನಟಿ ನಮ್ರತಾ ಗೌಡ, ಆಗಾಗ್ಗೆ ಫೋಟೋಶೂಟ್​, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಾರೆ. ಇದೀಗ ಅವರ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories