Karna Serial: ಎಲ್ಲ ಬಿಟ್ಟು ಹೋದ ನಿಧಿ; ತಿರುಗು ಮಂತ್ರ ಹಾಕಿದ ಅಜ್ಜಿ; ವೀಕ್ಷಕರು ಅಂದ್ಕೊಂಡಿದ್ದು ಆಗಿಲ್ಲ

Published : May 18, 2026, 10:56 AM IST

Karna Kannada Serial: ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಮದುವೆ ಆಗಬೇಕು ಎಂದು ನಿತ್ಯಾ ಹೇಳಿದ್ದಳು. ನಿತ್ಯಾ ಈಗ ಎಲ್ಲರಿಗೂ ಎಲ್ಲ ವಿಷಯವನ್ನು ಹೇಳಿದ್ದಾಳೆ. ಹೀಗಿರುವಾಗ ನಿಧಿ ಮನೆ ಬಿಟ್ಟು ಹೋಗಿದ್ದಾಳೆ. ಹೌದು, ಹೊಸ ಪ್ರೋಮೋ ರಿಲೀಸ್‌ ಆಗಿದೆ. 

PREV
15
ಎಲ್ಲ ಸತ್ಯ ಗೊತ್ತಾಯ್ತು

ಇನ್ನೇನು ಅರ್ಜುನ್‌, ನಿಧಿ ಮದುವೆ ಆಗಬೇಕಿತ್ತು. ಎಲ್ಲ ತಯಾರಿ ನಡೆದಿತ್ತು. ಅಕ್ಕನಿಗೋಸ್ಕರ ಕರ್ಣನನ್ನು ಬಿಟ್ಟುಕೊಡಬೇಕು ಎಂದು ನಿಧಿ ಎಂದುಕೊಂಡಿದ್ದಳು. ಇದು ಕರ್ಣನಿಗೆ ಅರ್ಥ ಆಗಿತ್ತು. ನನಗೆ, ಕರ್ಣನಿಗೆ ಮದುವೆ ಆಗಿಲ್ಲ, ಇದು ಕರ್ಣನ ಮಗು ಅಲ್ಲ, ನಿಧಿ-ಕರ್ಣ ಪ್ರೀತಿ ಮಾಡುತ್ತಿದ್ದಾರೆ ಎಂದು ನಿತ್ಯಾ ಎಲ್ಲರಿಗೂ ಹೇಳಿದ್ದಾಳೆ.

25
ಮನೆ ಬಿಟ್ಟು ಹೋದ ನಿಧಿ

ಇದೇ ಟೈಮ್‌ನಲ್ಲಿ ನಿಧಿ ಮನೆ ಬಿಟ್ಟು ಹೋಗಿದ್ದಾಳೆ. ಅವಳನ್ನು ಹುಡುಕಿಕೊಂಡು ಕರ್ಣ ಹೋಗಿದ್ದಾನೆ. ಕರ್ಣ, ನಿಧಿಯನ್ನು ಕರೆದುಕೊಂಡು ಬರಲಿ ಎಂದು ಅಜ್ಜಿ ಹೇಳಿದ್ದಾಳೆ. ಆದರೆ ಅದರ ಜೊತೆಗೆ ಇನ್ನೊಂದು ಷರತ್ತು ಕೂಡ ಹಾಕಿದ್ದಾಳೆ.

35
ಶಾಕ್‌ ಕೊಟ್ಟ ಅಜ್ಜಿ

ಅಜ್ಜಿ ಷರತ್ತು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಇದೇ ಮಂಟಪದಲ್ಲಿ ಅರ್ಜುನ್-ನಿಧಿ ಮದುವೆ ಆಗಬೇಕು ಎಂದು ಅಜ್ಜಿ ಹೇಳಿದ್ದಾಳೆ. ಇದನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ. ಪ್ರೀತಿ ವಿಷಯ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಯಾರು ಯಾರಿಗೆ ಸೇರುತ್ತಾರೆ ಎಂದು ಕಾದು ನೋಡಬೇಕಿದೆ.

45
ವೀಕ್ಷಕರು ಏನಂದ್ರು?

ಅಕ್ಕ ತಂಗಿ ಇಬ್ರಿಗೂ ಬುದ್ದಿನೇ ಇಲ್ಲ. ಅಜ್ಜಿ ಅಂತೂ ಅರಳು ಮರುಳು. ಪಾಪದ ಕರ್ಣ ಅರ್ಜುನ

ಈ ಅಜ್ಜಿ ಮತ್ತು ನಿಧಿಯದ್ದು ಓವರ್ ಆಯ್ತು

ಈ ಅಜ್ಜಿಗೆ ಬಿಪಿ ಮಾತ್ರೆ ಕೊಡಿ ಪ್ಲೀಸ್

ಈ ಶಾಂತಿ ಅಜ್ಜಿದು ಅತೀ ಆಯಿತು

ಕರ್ಣ ತ್ಯಾಗದ ಸಂಕೇತ ಅಲ್ವಾ?

ಇಷ್ಟು ಜನ ಕಣ್ಣ್ ತಪ್ಪಿಸಿ ನಿಧಿ ಹೋಗಕೆ ಬಿಟ್ಟರ್ ಸೀರಿಯಲ್ ನೋಡೋರಿಗೆ ಬುದ್ಧಿ ಇಲ್ಲ. ಏನಾದ್ರು ಒಂದು ಕಥೆ ಕಟ್ಟಿ ತೋರಿಸಿ ತಾರ್ ಇನ್ನೂ ಎಲ್ಲ ವಿಷಯ ಗೊತ್ತಾದಮೇಲೆ ನಿಧಿಯನ್ನು ಕಳಿಸೋದು ತಪ್ಪು

55
ಅರ್ಜುನನ ಪಾತ್ರ ಮುಗಿಯುತ್ತಾ?

ಅರ್ಜುನ್‌ ಪಾತ್ರ ಬಹುಶಃ ಅತಿಥಿ ಪಾತ್ರ ಇರಬಹುದು. ಆದಷ್ಟು ಬೇಗ ಈ ಪಾತ್ರ ಮಗಿಯಬಹುದು. ಹೀಗಾಗಿ ನಿಧಿಯಿಂದ ದೂರ ಆಗಿ ಅವನು ಹೊರಡಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories