Kannada TV Serial TRP: ಭರ್ಜರಿ ಠಕ್ಕರ್‌ ಕೊಟ್ಟು ಮತ್ತೆ ನಂ 1 ಸ್ಥಾನ ಅಲಂಕರಿಸಿದ ಹಳೇ ಧಾರಾವಾಹಿ! ಉಳಿದ ಕಥೆ ಏನು?

Published : Jun 27, 2025, 11:21 AM ISTUpdated : Jun 27, 2025, 11:30 AM IST

ಈ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಹೊರಬಿದ್ದಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ? ಟಾಪ್‌ 10 ಧಾರಾವಾಹಿಗಳು ಯಾವುವು?

PREV
113
ಟಾಪ್‌ 10 ಧಾರಾವಾಹಿಗಳು ಯಾವುವು?

ಎಲ್ಲ ಧಾರಾವಾಹಿಗಳು ಎಲ್ಲ ವಾರವೂ ಟಾಪ್‌ ಸ್ಥಾನದಲ್ಲಿ ಇರೋದಿಲ್ಲ, ಒಂದು ಧಾರಾವಾಹಿ ಒಂದು ವಾರ ಹೆಚ್ಚು ಟಿಆರ್‌ಪಿ ಕಂಡರೆ, ಇನ್ನೊಂದು ವಾರ ಕಡಿಮೆ ಟಿಆರ್‌ಪಿ ಪಡೆಯಬಹುದು. ಹಾಗಾದರೆ ಟಾಪ್‌ 10 ಧಾರಾವಾಹಿಗಳು ಯಾವುವು? 

213
ಭಾರ್ಗವಿ ಎಲ್‌ಎಲ್‌ಬಿ

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ 4.4 TRP ಸಿಕ್ಕಿದೆ.

ಶಕ್ತಿಪ್ರಸಾದ್‌ ಎನ್ನುವ ದುಷ್ಟನ ವಿರುದ್ಧ ಭಾರ್ಗವಿ ಕಾನೂನು ಕದನಕ್ಕೆ ಇಳಿದಿದ್ದಾಳೆ. ಇಲ್ಲಿ ವಕೀಲ ಜೆಪಿ ಪಾಟೀಲ್‌ ವಿರುದ್ಧ ಭಾರ್ಗವಿ ವಾದ ಮಾಡಬೇಕಿದೆ. ಅಕ್ಕ ಬೃಂದಾಳ ದುಷ್ಟತನದ ವಿರುದ್ಧ ಭಾರ್ಗವಿ ಹೋರಾಡಿ ಗೆಲ್ಲುತ್ತಾಳಾ?

313
ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.5 TVR ಸಿಕ್ಕಿದೆ. 

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಹಾಗೂ ಕಿಶನ್‌ ಮದುವೆ ಆಗತ್ತಾ ಎನ್ನೋದು ದೊಡ್ಡ ವಿಷಯವಾಗಿದೆ. ಈ ಬಗ್ಗೆಯೇ ಕಥೆ ಸಾಗುತ್ತಿದೆ. ಆದೀಶ್ವರ್‌ ಕಾಮತ್‌, ಕನ್ನಿಕಾ ಮಾತ್ರ ಪೂಜಾ ಮನೆಯವರ ವಿರುದ್ಧ ದ್ವೇಷ ಸಾರುತ್ತಿದ್ದಾರೆ.

413
ಮುದ್ದುಸೊಸೆ ಧಾರಾವಾಹಿ

ಮುದ್ದುಸೊಸೆ ಧಾರಾವಾಹಿಗೆ 5.2 TVR ಸಿಕ್ಕಿದೆ. 

ಭದ್ರನ ಮನೆಯಲ್ಲಿ ವಿದ್ಯಾ ನಿಜಕ್ಕೂ ಒದ್ದಾಡ್ತಿದ್ದಾಳೆ. ವಿದ್ಯಾಗೆ ಅಡುಗೆ ಮಾಡೋಕೆ ಬರಲ್ಲ ಅಂತ ಭದ್ರನ ಮನೆಯವರಿಗೆ ಗೊತ್ತಾಗಿದೆ. ವಿದ್ಯಾಗೆ ಅಲ್ಲಿ ಭದ್ರ, ಭದ್ರನ ತಾಯಿ ಬಿಟ್ಟು ಉಳಿದವರೆಲ್ಲರೂ ತೊಂದರೆ ಕೊಡೋರೇ ಆಗಿದ್ದಾರೆ. ಅಲ್ಲಿನ ಸವಾಲುಗಳನ್ನು ಅವಳು ಹೇಗೆ ಎದುರಿಸ್ತಾಳೆ ಎಂದು ಕಾದು ನೋಡಬೇಕಿದೆ.

513
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.94 TVR ಸಿಕ್ಕಿದೆ. 

ಈ ಧಾರಾವಾಹಿಯಲ್ಲಿ ಶ್ರಾವಣಿಯು ವೀರೇಂದ್ರನಾಥ್‌ ಮಗಳಲ್ಲ ಎನ್ನೋ ಸತ್ಯ ಹೊರಬಿದ್ದಿದೆ. ಅಂದಹಾಗೆ ಸುಬ್ಬುಗೆ ಮದನ್‌ ಹೊಡೆದಿದ್ದಾರೆ. ಸುಬ್ಬುನನ್ನು ವೀರು ಕಾಪಾಡಿದ್ದಾನೆ. ಅಷ್ಟೇ ಅಲ್ಲದೆ ಅವನನ್ನು ವೀರುನೇ ಕೇರ್‌ ಮಾಡ್ತಿದ್ದಾನೆ.

613
ನಾ ನಿನ್ನ ಬಿಡಲಾರೆ ಧಾರಾವಾಹಿ

ನಾ ನಿನ್ನ ಬಿಡಲಾರೆ ಧಾರಾವಾಹಿಗೆ 8.65 TVR ಸಿಕ್ಕಿದೆ. 

ಹಿತಾ ಕಂಡರೆ ಶರತ್‌ಗೆ ತುಂಬ ಇಷ್ಟ. ಆದರೆ ಮಗಳಿಗೆ ಅಪ್ಪನನ್ನು ಕಂಡರೆ ಆಗೋದೇ ಇಲ್ಲ. ಇನ್ನೊಂದು ಕಡೆ ಶರತ್‌ ಪತ್ನಿ ಅಂಬಿಕಾ ದೆವ್ವವಾಗಿದ್ದಾಳೆ. ಇನ್ನು ಈ ಮನೆಯಲ್ಲಿ ಕೆಲಸ ಮಾಡುವ ದುರ್ಗಾ ಕಂಡರೆ ಹಿತಾಗೆ ತುಂಬ ಇಷ್ಟ.

713
ಲಕ್ಷ್ಮೀ ನಿವಾಸ ಧಾರಾವಾಹಿ

ಲಕ್ಷ್ಮೀ ನಿವಾಸ ಧಾರಾವಾಹಿಗೆ 7.7 TVR ಸಿಕ್ಕಿದೆ. 

ಇನ್ನೂ ಜಾನು ಬದುಕಿರೋ ವಿಷಯ ಎಲ್ಲರಿಗೂ ಗೊತ್ತಾಗಿಲ್ಲ. ಹರೀಶ್‌, ಸಂತೋಷ್‌ ಮನೆಯಲ್ಲಿ ಲಕ್ಷ್ಮೀ, ಶ್ರೀನಿವಾಸ್‌ ಇದ್ದಾರೆ. ಈ ವಯಸ್ಸಿನಲ್ಲೂ ಇವರಿಬ್ಬರಿಗೂ ಒಟ್ಟಿಗೆ ಇರೋಕೆ ಆಗ್ತಿಲ್ಲ ಎಂಬ ಬೇಸರ ಇದೆ. ಇನ್ನೊಂದು ಕಡೆ ಒಂದೇ ಮನೇಲಿದ್ರೂ ಜಾನು-ವಿಶ್ವ ಭೇಟಿ ಆಗ್ತಿಲ್ಲ. ಇದರ ಸುತ್ತವೇ ಕಥೆ ಸಾಗ್ತಿದೆ.

813
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.94 TVR ಸಿಕ್ಕಿದೆ. 

ಈ ಧಾರಾವಾಹಿಯಲ್ಲಿ ಶ್ರಾವಣಿಯು ವೀರೇಂದ್ರನಾಥ್‌ ಮಗಳಲ್ಲ ಎನ್ನೋ ಸತ್ಯ ಹೊರಬಿದ್ದಿದೆ. ಅಂದಹಾಗೆ ಸುಬ್ಬುಗೆ ಮದನ್‌ ಹೊಡೆದಿದ್ದಾರೆ. ಸುಬ್ಬುನನ್ನು ವೀರು ಕಾಪಾಡಿದ್ದಾನೆ. ಅಷ್ಟೇ ಅಲ್ಲದೆ ಅವನನ್ನು ವೀರುನೇ ಕೇರ್‌ ಮಾಡ್ತಿದ್ದಾನೆ.

913
ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಗೆ 7.39 TVR ಸಿಕ್ಕಿದೆ. 

ಜಯದೇವ್‌ ಹಾಗೂ ದಿಯಾ ಮದುವೆ ಆಗೋಕೆ ನೋಡ್ತಿದ್ದಾರೆ. ಇನ್ನೊಂದು ಕಡೆ ಸೀಮಂತ ಮಾಡಿಕೊಂಡಿರೋ ಭೂಮಿ ಮತ್ತೆ ಗೌತಮ್‌ ದಿವಾನ್ ಮನೆಗೆ ಬಂದಿದ್ದಾಳೆ. ಲಕ್ಷ್ಮೀಕಾಂತ್‌ ಮಾವ ಜೈಲು ಸೇರಿದ್ದಾನೆ. ಹೀಗಾಗಿ ಭೂಮಿಕಾ ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ.

1013
ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿಗೆ 7.79 TVR ಸಿಕ್ಕಿದೆ. 

ರಾಣಿ ಮದುವೆ ಮಾಡಲು ಸಕಲ ತಯಾರಿ ನಡೆಯುತ್ತಿದೆ. ವೀರಭದ್ರ ಕೂಡ ರಾಣಿ, ಮನು ಮದುವೆ ಮಾಡಿ ಶಿವು ನೆಮ್ಮದಿ ಹಾಳು ಮಾಡುವ ಸಂಚು ರೂಪಿಸಿದ್ದಾನೆ. ಮನು ಪೆದ್ದ. ಹೀಗಾಗಿ ಈ ವಿಷಯ ಗೊತ್ತಿಲ್ಲದೆ ರಾಣಿ ಮೋಸ ಹೋಗ್ತಾಳಾ ಅಂತ ಕಾದು ನೋಡಬೇಕಿದೆ. ಇನ್ನೊಂದು ಕಡೆ ಶಿವು-ಪಾರು ನಡುವಿನ ಲವ್‌ ಹೆಚ್ಚಾಗಿ, ನಾಚಿಕೆ ಕಡಿಮೆ ಆಗ್ತಿದೆ.

1113
ಪುಟ್ಟಕ್ಕನ ಮಕ್ಕಳು ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 5.25 TVR ಸಿಕ್ಕಿದೆ. ಪುಟ್ಟಕ್ಕನ ಮೆಸ್‌ ಕ್ಲೋಸ್‌ ಮಾಡಬೇಕು ಅಂತ ಸಚಿನ್‌ ತಂದೆ, ಪೊಲೀಸ್‌ ಇನ್‌ಸ್ಪೆಕ್ಟರ್‌ ಕೂಡ ಒಟ್ಟಿಗೆ ಸೇರಿದ್ದರು. ಆದರೆ ಪುಟ್ಟಕ್ಕನ ಮೆಸ್‌ಗೆ ಮಾತ್ರ ಏನೂ ಮಾಡೋಕೆ ಆಗ್ತಿಲ್ಲ. ಡಿಸಿ ಸ್ನೇಹ ದೆವ್ವದ ಕಥೆ ಸದ್ಯ ಪ್ರಸಾರ ಆಗ್ತಿದೆ. ವೀಕ್ಷಕರಿಗೆ ನಿಜಕ್ಕೂ ಸ್ನೇಹ ದೆವ್ವ ಆಗಿದ್ದಾಳಾ ಅಂತ ಕಾತುರದಿಂದ ನೋಡುತ್ತಿದ್ದಾರೆ.

1213
ನಂದಗೋಕುಲ ಧಾರಾವಾಹಿ

ನಂದಗೋಕುಲ ಧಾರಾವಾಹಿಗೆ 4.7 TVR ಸಿಕ್ಕಿದೆ. 

ನಂದಕುಮಾರ್‌ ಹಾಗೂ ಸೂರ್ಯಕಾಂತ್‌ ಕುಟುಂಬದ ದ್ವೇಷದ ಕಥೆ ಇಲ್ಲಿದೆ. ಇನ್ನೊಂದು ಕಡೆ ನಂದಕುಮಾರ್‌ ಮಕ್ಕಳು ಅವನ ವಿರುದ್ಧ ಲವ್‌ ಮ್ಯಾರೇಜ್‌ ಮಾಡಿಕೊಳ್ತಾರಾ? ಲವ್‌ ಮ್ಯಾರೇಜ್‌ನಿಂದ ತನ್ನ ಪತ್ನಿಗೆ ತವರು ಮನೆಯವರೇ ಶತ್ರುಗಳಾಗಿದ್ದಾರೆ. ಹೀಗಾಗಿ ನನ್ನ ಮಕ್ಕಳು ಲವ್‌ ಮ್ಯಾರೇಜ್‌ ಆಗಬಾರದು ಅಂತ ನಂದಕುಮಾರ್‌ ಬಯಸ್ತಾನೆ. ಮುಂದೆ ಏನಾಗುವುದು?

1313
ಯಜಮಾನ ಧಾರಾವಾಹಿ

ಯಜಮಾನ ಧಾರಾವಾಹಿಗೆ 3.8 TVR ಸಿಕ್ಕಿದೆ.

ಝಾನ್ಸಿ ಹಾಗೂ ರಾಘವೇಂದ್ರ ಪರಸ್ಪರ ಯಾವಾಗ ಪ್ರೀತಿಯಲ್ಲಿ ಬೀಳ್ತಾರೆ? ಗಂಡ ರಾಘು ಮನೆಯಲ್ಲಿರೋ ಝಾನ್ಸಿ ಅವನನ್ನು, ಅವನ ಮನೆಯವರನ್ನು ಮೆಚ್ಚಿಸ್ತಾಳಾ? ಎನ್ನೋದು ಈಗ ಇರುವ ಟ್ವಿಸ್ಟ್.‌ ಸದ್ಯ ರಾಘು ಮನೆಯಲ್ಲಿ ಝಾನ್ಸಿ ಒದ್ದಾಡ್ತಿದ್ದಾಳೆ.

Read more Photos on
click me!

Recommended Stories