Amruthadhaare Serial Update: ಗೌತಮ್‌ ದಿವಾನ್‌ಗೆ ಚಳ್ಳೆಹಣ್ಣು ತಿನಿಸಲು‌ ಜಯದೇವ್ ರೆಡಿ! ಮುಂದೇನಾಗತ್ತೆ?

Published : Jun 26, 2025, 11:56 AM ISTUpdated : Jun 26, 2025, 12:09 PM IST

ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌, ದಿಯಾ ಮದುವೆ ಪ್ಲ್ಯಾನ್‌ ನಡೆಯುತ್ತಿದೆ. ಇನ್ನೊಂದು ಕಡೆ ಜಯದೇವ್‌, ದಿಯಾ ಮದುವೆ ತಪ್ಪಿಸಲು ಭೂಮಿಕಾ ಪ್ರಯತ್ನಪಡುತ್ತಿದ್ದಾಳೆ. ಕೊನೆಗೂ ಅವಳು ಈ ಮದುವೆ ಕಾರ್ಡ್‌ನ್ನು ಗೌತಮ್‌ ದಿವಾನ್‌ಗೆ ಕೊಟ್ಟಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು? 

PREV
15

ಮಲ್ಲಿಗೆ ಮೋಸ ಮಾಡಿ ದಿಯಾಳನ್ನು ಮದುವೆ ಆಗೋದು ಜಯದೇವ್‌ ಪ್ಲ್ಯಾನ್‌ ಆಗಿತ್ತು. ಈಗಾಗಲೇ ಜಯದೇವ್‌ಗೆ ಗೌತಮ್‌ ಸಿಕ್ಕಾಪಟ್ಟೆ ಬುದ್ಧಿ ಹೇಳಿದ್ದಾನೆ, ತಿದ್ದಿದ್ದಾನೆ. ಆದರೂ ಕೂಡ ಅವನು ಮಾತು ಕೇಳಿಸಿಕೊಳ್ಳಲು ರೆಡಿ ಇಲ್ಲ. ತಾನು ಬದಲಾಗಿದ್ದೇನೆ, ಒಳ್ಳೆಯವನು ಅಂತ ಎಲ್ಲರಿಗೂ ನಂಬಿಸುತ್ತ ಬಂದಿದ್ದ ಇವನ ವ್ಯಾಘ್ರ ಮುಖ ಈಗ ಭೂಮಿಕಾ ಮುಂದೆ ಬಯಲಾಗಿದೆ.

25

ಈಗ ಅವಳು ಗೌತಮ್‌ ದಿವಾನ್‌ಗೆ ಮದುವೆ ಪತ್ರಿಕೆ ಕೊಟ್ಟಿದ್ದಾಳೆ. ಕಲ್ಯಾಣ ಮಂಟಪದಲ್ಲಿ ಮದುವೆ ಆಗ್ತೀನಿ ಅಂತ ಹೇಳಿ, ಈಗ ಅವನು ತನ್ನ ಮನೆಯಲ್ಲಿ ಮದುವೆ ಆಗಲು ರೆಡಿಯಾಗಿದ್ದಾನೆ. ಈ ವಿಷಯ ಗೌತಮ್‌ಗೆ ಗೊತ್ತಾಗಿಲ್ಲ. ದಿಯಾ, ಜಯದೇವ್‌ ಮದುವೆ ತಪ್ಪಿಸಲು ಎಲ್ಲರೂ ಹುಡುಕಾಡುತ್ತಿದ್ದಾರೆ. ಹೀಗಾಗಿ ಜಯದೇವ್‌, ದಿಯಾ ಮದುವೆಗೆ ರೆಡಿಯಾಗಿ ಅವರ ಮನೆಗೆ ಬಂದಿದ್ದಾರೆ. ಒಟ್ಟಿನಲ್ಲಿ ತನ್ನ ಅಣ್ಣನಿಗೆ ಚಳ್ಳೆಹಣ್ಣು ತಿನ್ನಿಸಲು ಜಯದೇವ್‌ ರೆಡಿಯಾಗಿದ್ದಾನೆ.

35

“ಇಷ್ಟು ದಿನ ನಡೆದ ಎಲ್ಲ ಘಟನೆಗಳಲ್ಲಿ ಲಕ್ಷ್ಮೀಕಾಂತ್‌ ಮಾವ ಒಂದೇ ಅಲ್ಲ, ಅದರಲ್ಲಿ ಜಯದೇವ್‌ ಕೂಡ ಇದ್ದ. ಆ ವಿಚಾರ ನನಗೆ ಗೊತ್ತಿದೆ. ಜಯದೇವ್‌ ಹೇಗೆ ಮದುವೆ ಆಗ್ತಾನೆ ಅಂತ ನೋಡ್ತೀನಿ” ಎಂದು ಗೌತಮ್‌ ಸವಾಲು ಹಾಕಿದ್ದಾನೆ. ಜಯದೇವ್‌ನನ್ನು ಹುಡುಕಿಕೊಂಡು ಎಲ್ಲರೂ ಕಲ್ಯಾಣ ಮಂಟಪಕ್ಕೆ ಬಂದರೆ, ಗೌತಮ್‌ ಮನೆಗೆ ಜಯದೇವ್‌ ಬಂದಿದ್ದಾನೆ. ಹೀಗಾಗಿ ಈ ಮದುವೆ ಕಥೆ ಏನಾಗತ್ತೆ ಅಂತ ಕಾದು ನೋಡಬೇಕಿದೆ.

45

ಒಟ್ಟಿನಲ್ಲಿ ಜಯದೇವ್‌ ಹಾಗೂ ದಿಯಾ ಮದುವೆ ನಿಲ್ಲತ್ತಾ ಎಂದು ಕಾದು ನೋಡಬೇಕಿದೆ. ಅಂದಹಾಗೆ ಇಷ್ಟು ಮುಂದುವರೆದಿರೋ ಜಯದೇವ್‌ನಿಗೆ ಗೌತಮ್‌ ಹೇಗೆ ಬುದ್ಧಿ ಕಲಿಸ್ತಾನೆ ಎಂದು ಕಾದು ನೋಡಬೇಕಿದೆ. ಇನ್ನು ಭೂಮಿ ಮಗುವಿಗೆ ಶಕುಂತಲಾ ಏನಾದರೂ ಮಾಡ್ತಾಳಾ ಎನ್ನುವ ಭಯ ಕೂಡ ಶುರುವಾಗಿದೆ.

55

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾಗೆ ಮದುವೆಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಗೌತಮ್‌ ಮಲತಾಯಿ ಶಕುಂತಲಾ ಹಾಗೂ ಅವನ ಮಗ ಜಯದೇವ್‌ ಮಾತ್ರ ಈ ಆಸ್ತಿ ಹೊಡೆಯಲು ಯೋಚನೆ ಮಾಡುತ್ತಿದ್ದಾರೆ. ಹೀಗಾಗಿ ಮುಂದೆ ಕಥೆ ಏನಾಗಲಿದೆ ಎಮದು ಕಾದು ನೋಡಬೇಕಿದೆ.

Read more Photos on
click me!

Recommended Stories