ಬಿಗ್ ಬಾಸ್‌ ವಿನ್ನರ್ ಶಶಿ ಕುಮಾರ್ ಮದುವೆ; ಹುಡುಗಿ ಯಾರು?

Published : Jul 24, 2022, 02:25 PM IST

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಿಗ್ ಬಾಸ್‌ ವಿನ್ನರ್ ಶಶಿ. ಹುಡುಗಿ ಯಾರೆಂದು ಪ್ರಶ್ನಿಸಿದ ಅಭಿಮಾನಿಗಳು...

PREV
16
ಬಿಗ್ ಬಾಸ್‌ ವಿನ್ನರ್ ಶಶಿ ಕುಮಾರ್ ಮದುವೆ; ಹುಡುಗಿ ಯಾರು?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 6ರ ವಿನ್ನರ್ ಶಶಿ ಕುಮಾರ್ ಪರ್ಸನಲ್ ಲೈಫ್‌ ವಿಚಾರವೊಂದು ರಿವೀಲ್ ಅಗಿದೆ. 

26

ಶಶಿ ಕುಮಾರ್ ಮುಂದಿನ ತಿಂಗಳು, ಅಂದ್ರೆ ಆಗಸ್ಟ್‌ 6 ಮತ್ತು 7ರಂದು ಮದುವೆಯಾಗಲಿದ್ದಾರೆ. ವಿವಾಹ ಮಹೋತ್ಸವದ ಬಗ್ಗೆ ಖಾಸಗಿ ವೆಬ್‌ವೊಂದು ವರದಿ ಮಾಡಿದೆ

36

ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹುಡುಗಿ ಹೆಸರು ಸ್ವಾತಿ, ಮೂಲತಃ ದೊಡ್ಡಬಳ್ಳಾಪುರದವರು. ಸ್ವಾತಿ ಕೂಡ ಕೃಷಿ ಕುಟುಂಬದಿಂದ ಬಂದವರು ಎನ್ನಲಾಗಿದೆ.

46

ಕಿರುತೆರೆ, ಸಿನಿಮಾ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಕುಮಾರ್ ಮೂಲತಃ ಚಿಕ್ಕಬಳ್ಳಾಪುರದವರು.  ಬೆಂಗಳೂರಿನ ಪ್ರತಿಷ್ಠಿತ ಜಿಕೆವಿಕೆಯಲ್ಲಿ ಕೃಷಿ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

56

ಬಿಗ್ ಬಾಸ್ ಶೋ ನಂತರ ಶಶಿ ಕುಮಾರ್ ಶುಗರ್ ಫ್ಯಾಕ್ಟರಿ, ಮೆಹಬೂಬ ಸಿನಿಮಾದಲ್ಲಿ ನಟಿಸಿದ್ದಾರೆ. ಮೆಹಬೂಬ ಚಿತ್ರಕ್ಕೆ 6 ಪ್ಯಾಕ್‌ ಕೂಡ ಮಾಡಿದ್ದರು.

66

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಶಿ ಕುಮಾರ್ ಆರೋಗ್ಯದ ಬಗ್ಗೆ ಸುಲಭ ಕೃಷಿ ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories