ನಟಿ ದಿಶಾ ಪರ್ಮಾರ್‌-ರಾಹುಲ್‌ ವೈದ್ಯ ದಂಪತಿಯ ರೊಮ್ಯಾಂಟಿಕ್‌ ಫೋಟೋ ವೈರಲ್‌

Published : Jul 17, 2022, 05:29 PM IST

ಈ ದಿನಗಳಲ್ಲಿ, ಜನಪ್ರಿಯ ಟಿವಿ ಧಾರಾವಾಹಿ 'ಬಡೆ ಅಚ್ಚೆ ಲಗ್ತೆ ಹೇ 2' ನಲ್ಲಿನ (Bade Achhe Lagte Hain 2) ಪ್ರಿಯಾ ರಾಮ್ ಕಪೂರ್ ಪಾತ್ರವನ್ನು ನಿರ್ವಹಿಸುತ್ತಿರುವ ದಿಶಾ ಪರ್ಮಾರ್ (Disha Parmar) ಮದುವೆಯಾಗಿ ಒಂದು ವರ್ಷವಾಗಿದೆ. 27 ವರ್ಷದ ದಿಶಾ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಪತಿ ರಾಹುಲ್ ವೈದ್ಯ (Rahul Vaidya) ಅವರೊಂದಿಗೆ ಯುಕೆಯಲ್ಲಿದ್ದಾರೆ. ಜುಲೈ 16 ರಂದು ದಂಪತಿಗಳು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದು ಮಾತ್ರವಲ್ಲದೆ, ರಾಹುಲ್ ಸಾಮಾಜಿಕ ಮಾಧ್ಯಮದಲ್ಲಿ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಖತ್‌ ವೈರಲ್‌ ಆಗಿವೆ.

PREV
17
ನಟಿ ದಿಶಾ ಪರ್ಮಾರ್‌-ರಾಹುಲ್‌ ವೈದ್ಯ ದಂಪತಿಯ ರೊಮ್ಯಾಂಟಿಕ್‌ ಫೋಟೋ ವೈರಲ್‌

ಈ ಫೋಟೋಗಳಲ್ಲಿ ದಿಶಾ ಪಾರ್ಮರ್‌ ಅವರ ಪತಿ ರಾಹುಲ್ ವೈದ್ಯನನ್ನು ಚುಂಬಿಸುವುದನ್ನು ಮತ್ತು ಕೆಲವೊಮ್ಮೆ ಅವರ ಕೆನ್ನೆಯನ್ನು ಕಚ್ಚುವುದನ್ನು ಕಾಣಬಹುದು. ಅವರ ಅಭಿಮಾನಿಗಳು ದಂಪತಿಗಳ ನಡುವಿನ ಕೆಮಿಸ್ಟ್ರಿಯನ್ನು ಶ್ಲಾಘಿಸಿದ್ದಾರೆ

27

ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ವಿವಾಹ ವಾರ್ಷಿಕೋತ್ಸವದಂದು ಅವರನ್ನು ಅಭಿನಂದಿಸುತ್ತಿದ್ದಾರೆ ಮತ್ತು ದಂಪತಿಗಳನ್ನು ಹೊಗಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಇದನ್ನು ಅಸಭ್ಯತೆ ಎಂದು ಕರೆದಿದ್ದಾರೆ.

37

ದಿಶಾ ಅವರನ್ನು ಟ್ಯಾಗ್ ಮಾಡುವ ಮೂಲಕ, ರಾಹುಲ್ ವೈದ್ಯ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, 'ನನ್ನ ಪ್ರೀತಿಯ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಒಂದು ವರ್ಷವು ಅತ್ಯಂತ ವೇಗವಾಗಿ ಕಳೆಯಿತು. ನಿಮ್ಮನ್ನು ನನ್ನ ಜೀವನ ಸಂಗಾತಿಯಾಗಿ ಪಡೆದಿದ್ದಕ್ಕಾಗಿ ನಾನು ತುಂಬಾ ಆದೃಷ್ಟ ಮಾಡಿದ್ದೇನೆ. ಮುಂದಿನ ಏಳು ಜೀವಗಳಿಗೆ ನಾನು ನಿಜವಾಗಿಯೂ ನೀನು ಮತ್ತು ನೀನು ಮಾತ್ರ ಬೇಕು ಎಂದು ರಾಹುಲ್ ಬರೆದುಕೊಂಡಿದ್ದಾರೆ. 

47

ಇದರೊಂದಿಗೆ ದಿಶಾ ಎಂಬ ಮೊದಲ ಮೂರು ಅಕ್ಷರಗಳು ಮತ್ತು ರಾಹುಲ್‌ನ ಕೊನೆಯ ಮೂರು ಅಕ್ಷರಗಳನ್ನು ಸೇರಿಸಿ ಇಂಗ್ಲಿಷ್‌ನಲ್ಲಿ ಸಾಮಾನ್ಯ ಹೆಸರಾಗಿರುವ Dishul  ಎಂದು ರಾಹುಲ್ ಹ್ಯಾಶ್‌ಟ್ಯಾಗ್ ಮಾಡಿದ್ದಾರೆ.

57

ರಾಹುಲ್ ಮತ್ತು ದಿಶಾ ಅವರ ರೊಮ್ಯಾಂಟಿಕ್ ಫೋಟೋಗಳಿಗೆ ಶ್ವೇತಾ ತಿವಾರಿ, ಮೌನಿ ರಾಯ್, ಭಾರತಿ ಸಿಂಗ್, ದಿವ್ಯಾಂಕಾ ತ್ರಿಪಾಠಿ, ಅಲಿ ಗೋನಿ, ರಾಖಿ ಸಾವಂತ್, ಎಜಾಜ್ ಖಾನ್, ವಿಶಾಲ್ ಸಿಂಗ್, ಆರತಿ ಛಾಬ್ರಿಯಾ ಮತ್ತು ಜಾಸ್ಮಿನ್ ಭಾಸಿನ್ ಸೇರಿದಂತೆ ಟಿವಿ ಉದ್ಯಮದ ಅನೇಕ ನಟ-ನಟಿಯರು  ಪ್ರತಿಕ್ರಿಯಿಸಿದ್ದಾರೆ ಮತ್ತು  ವಿಶ್‌ ಮಾಡಿದ್ದಾರೆ.

67

ಬಳಕೆದಾರರು ರಾಹುಲ್ ವೈದ್ಯ ಅವರಿಗೆ ಉರ್ಫಿ ಜಾವೇದ್  ಕುರಿತು ಅವರ ಕಾಮೆಂಟ್ ಅನ್ನು ನೆನಪಿಸಿ, "ಇದು  ಅಸಭ್ಯತೆ ಅಲ್ಲವಾ, ನೀವು ಸ್ವಲ್ಪ ಸಮಯದ ಹಿಂದೆ ಜ್ಞಾನವನ್ನು ಕಲಿಸುತ್ತಿದ್ದೀರಿ' ಎಂದು ಕೇಳಿದ್ದಾರೆ. ಕೆಲವು ಸಮಯದ ಹಿಂದೆ ರಾಹುಲ್ ವೈದ್ಯ ಅವರು ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಸೆನ್ಸ್ ಅನ್ನು ಅಸಭ್ಯತೆ ಎಂದು ಕರೆದಿದ್ದರು ಮತ್ತು ಮುಂಬರುವ ದಿನಗಳಲ್ಲಿ ಜನರು ಫ್ಯಾಷನ್ ಹೆಸರಿನಲ್ಲಿ ನಗ್ನತೆಯನ್ನು ಪೋಸ್ಟ್ ಮಾಡಲು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದರು. 

77

ರಾಹುಲ್ ವೈದ್ಯ ಅವರು ಇಂಡಿಯನ್ ಐಡಲ್‌ನ ಮೊದಲ ಸೀಸನ್‌ನ ಸ್ಪರ್ಧಿಯಾಗಿದ್ದಾರೆ ಮತ್ತು ದೇಶದ ಪ್ರಸಿದ್ಧ ಹಿನ್ನೆಲೆ ಗಾಯಕರಾಗಿದ್ದಾರೆ. ಅವರು 16 ಜುಲೈ 2021 ರಂದು ಟಿವಿ ನಟಿ ದಿಶಾ ಪರ್ಮಾರ್ ಅವರನ್ನು ವಿವಾಹವಾದರು. ಬಿಗ್ ಬಾಸ್ 14ರ ಸಮಯದಲ್ಲಿ ದಿಶಾ ಅವರಿಗೆ ಪ್ರಪೋಸ್‌ ಮಾಡಿದ್ದರು. 'ಬಿಗ್ ಬಾಸ್' 14 ನೇ ಸೀಸನ್‌ನ ಸ್ಪರ್ಧಿಯಾಗಿ ರಾಹುಲ್ ಕೂಡ ಇದ್ದರು.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories