ಕನ್ನಡ ಚಿತ್ರರಂಗದ ಅದ್ಭುತ ನಟ, ನಿರೂಪಕ ಮತ್ತು ನಿರ್ದೇಶಕನಾಗಿರುವ ಮಾಸ್ಟರ್ ಆನಂದ್ ಕುಟುಂಬ ಕನ್ನಡ ಕಿರುತೆರೆಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ.
27
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
37
ನನ್ನಮ್ಮ ಸೂಪರ್ ಸ್ಟಾರ್ ನಂತರ ವಂಶಿಕಾ ಗಿಚ್ಚಿ ಗಿಲಿಗಿಲಿಶೋನಲ್ಲಿ ಬ್ಯುಸಿಯಾದಳು, ಈ ನಡುವೆ ಯಶಸ್ವಿನಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
47
ಟಿವಿಯಲ್ಲಿ ಬಿಗ್ ಬಾಸ್ ಸೀಸನ್ 9 ಆರಂಭವಾಗುವ ಮುನ್ನ ಮೊದಲ ಬಾರಿ ಡಿಫರೆಂಟ್ ಆಗಿರಲಿ ಎಂದು ಓಟಿಟಿಯಲ್ಲೂ 48 ದಿನಗಳ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ.
57
ಸಾಮಾನ್ಯವಾಗಿ ಓಟಿಟಿ ಬಿಗ್ ಬಾಸ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುವವರನ್ನು ಆಯ್ಕೆ ಮಾಡುತ್ತಾರೆ.ಈ ಲಿಸ್ಟ್‌ನಲ್ಲಿ ಯಶಸ್ವಿನಿ ಸೇರಿಕೊಳ್ಳುತ್ತಾರೆ ಎನ್ನಲಾಗಿದೆ. ಅಲ್ಲದೆ ಮಾಸ್ಟರ್ ಆನಂದ್ ವಿಡಿಯೋ ವೈರಲ್ ಆಗುತ್ತಿದೆ.
67
ಹೌದು! ವಂಶಿಕಾ ಒಂದು ರೂಮಿನಲ್ಲಿ ಯಶಸ್ವಿನಿ ಒಂದು ರೂಮಿನಲ್ಲಿ 9.35 ಆದರೂ ಮಲಗಿದ್ದಾರೆ ಇವರನ್ನು ಬಿಗ್ ಬಾಸ್‌ಗೆ ಕಳುಹಿಸಿದ್ದರೆ ಹೇಗಿರುತ್ತದೆ ಎಂದು ಆನಂದ್ ವಿಡಿಯೋ ಮಾಡಿದ್ದಾರೆ.
77
ಅನಂದ್ ಸಹೋದರ ಅರುಣ್ ಮತ್ತು ಮಾಧುರ್ಯ ಕಲರ್ಸ್ ಕನ್ನಡದ ರಾಜಾ ರಾಣಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಶೋಗೂ ವಂಶಿಕಾ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಳು.