ಮಂಗಳೂರಿನ ಕೀರ್ತಿ ಭಟ್ ಅವರು ಈಗ ಉದಯ ಟಿವಿಯ ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪಘಾತವೊಂದರಲ್ಲಿ ಕೀರ್ತಿ ಭಟ್ ತಾಯಿ, ತಂದೆ, ಸಹೋದರ ಕೂಡ ತೀರಿಕೊಂಡಿದ್ದರು. ಕೆಲ ವರ್ಷಗಳಿಂದ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.
ಕೀರ್ತಿ ಭಟ್ ಅವರಿಗೆ ಅಪಘಾತದಿಂದ ಕಾಲಿಗೆ ರಾಡ್ ಹಾಕಲಾಗಿದೆ. ಅಷ್ಟೇ ಅಲ್ಲದೆ ಸ್ಪ್ರಿಂಗ್ ಕೂಡ ಹಾಕಲಾಗಿದೆ. ಹೀಗಾಗಿ ಅವರು ಡ್ಯಾನ್ಸ್ ಮಾಡಲಾಗೋದಿಲ್ಲ, ಅಷ್ಟೇ ಅಲ್ಲದೆ ಒಂದೇ ಕಡೆ ನಿಂತಲ್ಲೇ ನಿಂತುಕೊಳ್ಳಲಾಗಿದೆ, ಏಕಾಏಕಿ ಕೂಡ ಏಳಲಾಗೋದಿಲ್ಲ. ಇಷ್ಟೆಲ್ಲ ಆಗಿರುವಾಗ ಕೆಲವರು ಕೀರ್ತಿಗೆ ಅಪಘಾತವೇ ಆಗಿಲ್ಲ ಎಂದು ಹೇಳಿದ್ದರಂತೆ, ಅಷ್ಟೇ ಅಲ್ಲದೆ ಅವರಿಗೆ ಮಗು ಕೂಡ ಆಗೋದಿಲ್ಲ ಎಂದು ಡಾಕ್ಟರ್ ಹೇಳಿದ್ದಾರಂತೆ.
25
ಸಂದರ್ಶನದಲ್ಲಿ ಹೇಳಿದ್ರು
ಈ ಹಿಂದೆ ಅವರು ಮಗುವೊಂದನ್ನು ದತ್ತು ತಗೊಂಡಿದ್ದು, ಆ ಮಗು ಕೂಡ ತೀರಿಕೊಂಡಿತು. ಅಷ್ಟೇ ಅಲ್ಲದೆ ಬ್ರೇಕಪ್ ಕೂಡ ಆಗಿದೆ. ಮಗುವಿನ ಬಗ್ಗೆ ಅವರು ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
35
ಗಟಾರದಲ್ಲಿ ಬಿದ್ದಿದ್ದ ಮಗು
“ನಾನು ಒಂದು ಸಂಸ್ಥೆಗೆ ಹೋಗಿದ್ದೆ, ಬಟ್ಟೆಗಳನ್ನು ಕೊಡಲು ಹೋಗಿದ್ದೆ. ನನ್ನ ತಂದೆಯಿಂದಲೇ ಈ ಗುಣ ಬಂದಿದ್ದೆ. ಆಗ ಒಂದು ಮಗು ಕಾಣಿಸಿತು. ಕೆಂಗೇರಿ ಗಟಾರದಲ್ಲಿ ಒಂದೂವರೆ ತಿಂಗಳು ಮಗು ಕಾಣಿಸಿತ್ತು. ಐದು ವರ್ಷದವರೆಗೆ ಹಾಗೆಲ್ಲ ದತ್ತು ತಗೊಳೋಕೆ ಆಗೋದಿಲ್ಲ ಎಂದು ಹೇಳಿದ್ದರು. ನನಗೆ ಈ ದತ್ತು ತಗೊಳ್ಳುವ ಪ್ರಕ್ರಿಯೆ ಕೂಡ ಗೊತ್ತಿರಲಿಲ್ಲ” ಎಂದು ಕೀರ್ತಿ ಭಟ್ ಹೇಳಿದ್ದಾರೆ.
“ಆಮೇಲೆ ಆ ಮಗುವನ್ನು ಹೇಗೆ ನೋಡಿಕೊಳ್ಳೋದು ಎಂಬ ಡೌಟ್ ಬಂತು. ಆಮೇಲೆ ಸಂಸ್ಥೆಯಲ್ಲಿ ಒಂದು ಆಂಟಿ ಇಟ್ಟು, ಆ ಮಗುವನ್ನು ನೋಡಿಕೊಳ್ಳಲು ಬಿಟ್ಟೆ. ಅದಕ್ಕೆ ಬೇಕಾದ ಖರ್ಚೆಲ್ಲವನ್ನು ನಾನೇ ನೋಡಿಕೊಂಡೆ. ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಆಪರೇಶನ್ ಕೂಡ ಮಾಡಲಾಯ್ತು. ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ಅವಳು ಯಾವಾಗಲೂ ಆಟ ಆಡಿಕೊಂಡು ಇರುತ್ತಿದ್ದಳು. ಯಾರ ದೃಷ್ಟಿ ಬಿತ್ತೋ ಏನೋ ಆ ಮಗುವಿಗೆ ಅನಾರೋಗ್ಯ ಆಗಿತ್ತು. ಬಿಗ್ ಬಾಸ್ ಶೋಗೆ ಹೋಗುವ ಎರಡು ದಿನ ಮುನ್ನ ಆ ಮಗು ತೀರಿಕೊಂಡಿತು” ಎಂದು ಕೀರ್ತಿ ಭಟ್ ಹೇಳಿದ್ದರು.
55
ಬ್ರೇಕಪ್ ಆಯ್ತು!
ನಿರ್ದೇಶಕ ಕಾರ್ತಿಕ್ ಎನ್ನುವವರ ಜೊತೆ ಕೀರ್ತಿ ಭಟ್ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ. ಇವರಿಬ್ಬರು ಲವ್ ಮಾಡಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು. ಆಮೇಲೆ ಕಾರ್ತಿಕ್ ಅವರು ದುಡ್ಡಿಗೋಸ್ಕರ ಕೀರ್ತಿ ನನ್ನಿಂದ ದೂರ ಆದಳು ಎಂದು ಆರೋಪ ಮಾಡಿದ್ದರು. ಕೀರ್ತಿ ಭಟ್ ಮಾತ್ರ, “ಸತ್ಯ ಬೇರೆ ಇದೆ” ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.