Amruthadhaare Serial: ಗೌತಮ್‌ ಜೊತೆಗೆ ಇನ್ನೊಂದು ಸಾವು! ಬಹುಮುಖ್ಯವಾದ ಪಾತ್ರ ಮುಗಿದೋಯ್ತಾ?

Published : May 22, 2026, 12:45 PM IST

Amruthadhaare Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾಳ ನಿಜವಾದ ಮಗಳು ಮಿಂಚು ಎನ್ನೋದು ಲಕ್ಷ್ಮೀಕಾಂತ್‌ ಮಾವನಿಗೆ ಗೊತ್ತಾಗಿದೆ. ಈ ವಿಷಯವನ್ನು ಅವನು ಮನೆಯವರಿಗೆ ತಿಳಿಸಬೇಕು ಎನ್ನುವಷ್ಟರಲ್ಲಿ ಜಯದೇವ್‌ ಎಂಟ್ರಿಯಾಗಿದೆ. 

PREV
15
ಜಯದೇವ್‌ಗೆ ಗೂಢಾಚಾರಿ ಸಿಕ್ಕಿದ್ದಾನೆ!

ಎಲ್ಲ ಕಳೆದುಕೊಂಡಿದ್ದ ಜಯದೇವ್‌ಗೆ ಒಂದು ಹೊತ್ತು ಊಟಕ್ಕೂ ಸಮಸ್ಯೆ ಆಗಿತ್ತು. ಹೀಗಾಗಿ ಅವನು ಜೀತದಾಳಿನ ಥರ ಅವಳ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈಗ ಅವನು ಮತ್ತೆ ಗೌತಮ್‌ ವಿರುದ್ಧ ಸೇಡು ತೀರಿಸಿಕೊಂಡು, ಆ ಆಸ್ತಿಯನ್ನು ಹೊಡೆಯುವ ಪ್ಲ್ಯಾನ್‌ ಮಾಡಿದ್ದಾನೆ. 

ಊಟಕ್ಕೂ ಪರದಾಡುತ್ತಿದ್ದ ಜಯದೇವ್‌ಗೆ ಈಗ ಕೈಯಲ್ಲಿ ಮೊಬೈಲ್‌ ಇದೆ, ಬೈಕ್‌ ಸಿಕ್ಕಿದೆ. ಇವನನ್ನು ನಂಬಿಕೊಂಡು ಗೌತಮ್‌ ಆಫೀಸ್‌ನಲ್ಲಿದ್ದವನು, ಲಕ್ಷ್ಮೀಕಾಂತ್‌ ಏನ್‌ ಮಾಡ್ತಾನೆ ಎಂದು ಮಾಹಿತಿಯನ್ನು ಕೂಡ ಕೊಡ್ತಾರೆ. ಇದೆಲ್ಲ ಹೇಗೆ ಸಾಧ್ಯವೋ ಏನೋ!

25
ಸತ್ಯ ಬಾಯಿಬಿಡದ ಮಾವ

ಲಕ್ಷ್ಮೀಕಾಂತ್‌ ಮಾವನಿಗೆ ಜಯದೇವ್‌ ಕಂಡರೆ ಕನಿಕರ. ಹೀಗಾಗಿ ಅವನು ದಿಯಾ ಮನೆಯಿಂದ ಹೊರಗಡೆ ಬಾ ಎಂದು ಬುದ್ಧಿ ಹೇಳಿದನು, ಪಾರ್ಥನನ್ನು ಕೂಡ ಕರೆದುಕೊಂಡು ಬಂದು ಬುದ್ಧಿ ಹೇಳಿದ್ದನು. ಆದರೂ ಕೂಡ ಅವನು ಮಾತು ಕೇಳಲೇ ಇಲ್ಲ. 

ಈಗ ಲಕ್ಷ್ಮೀಕಾಂತ್‌ ಮಾವನನ್ನು ಜಯದೇವ್‌ ಕಿಡ್ನ್ಯಾಪ್‌ ಮಾಡಿ, ಮಗುವಿನ ಬಗ್ಗೆ ಹೇಳು ಎಂದು ಹೇಳಿದ್ದಾನೆ. ಆದರೆ ಲಕ್ಷ್ಮೀಕಾಂತ್‌ ಮಾತ್ರ ಸತ್ಯ ಬಾಯಿ ಬಿಡುತ್ತಿಲ್ಲ.

35
ಮುಂದೆ ಜಯದೇವ್‌ ಏನ್‌ ಮಾಡ್ತಾನೆ?

ಮಗುವಿಗೋಸ್ಕರ ಗೌತಮ್‌ ಹುಡುಕಾಟದಲ್ಲಿದ್ದಾನೆ, ಇನ್ನೊಂದು ಕಡೆ ಮಾವ ಕಿಡ್ನ್ಯಾಪ್‌ ಆಗಿರೋ ವಿಷಯವೂ ಗೊತ್ತಿಲ್ಲ. ಮಾವ ಕಿಡ್ನ್ಯಾಪ್‌ ಆಗಿರೋ ವಿಷಯ ಈಗ ಗೌತಮ್‌ಗ ಗೊತ್ತಾಗಲೂಬಹುದು. 

ಲಕ್ಷ್ಮೀಕಾಂತ್‌ಗೆ ಮಗಳ ವಿಷಯ ಗೊತ್ತಿದೆ, ಈಗ ಗೌತಮ್‌, ಲಕ್ಷ್ಮೀಕಾಂತ್‌ನನ್ನು ಹುಡುಕಿಕೊಂಡು ಬಂದರೆ ನನಗೆ ಏನು ಬೇಕೋ ಅದು ಸಿಗುತ್ತೆ ಎಂದು ಜಯದೇವ್‌ ಪ್ಲ್ಯಾನ್‌ ಮಾಡಲೂಬಹುದು. ಈ ಘಟನೆಯಲ್ಲಿ ಗೌತಮ್‌ ಪ್ರಾಣಕ್ಕೆ ಅಪಾಯ ಆಗಲೂಬಹುದು.

45
ಗೌತಮ್‌ ಸಾಯಲ್ಲ, ಲಕ್ಷ್ಮೀಕಾಂತ್‌ ಸಾಯ್ತಾನಾ?

ಜ್ಯೋತಿಷಿ ಹೇಳಿದಂತೆ ಗೌತಮ್‌ ಜೀವಕ್ಕೆ ಅಪಾಯ ಬರಬಹುದು, ಆದರೆ ಅವನು ಸಾಯೋದಿಲ್ಲ. ಲಕ್ಷ್ಮೀಕಾಂತ್‌ ಮಾವನಿಗೆ ತೊಂದರೆ ಕೊಟ್ಟು, ಅವನ ಪ್ರಾಣಕ್ಕೆ ಸಂಚಕಾರ ತಂದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಲಕ್ಷ್ಮೀಕಾಂತ್‌ ಪ್ರಾಣಕ್ಕೆ ಅಪಾಯ ಆಗಿ, ಅವನ ಪಾತ್ರ ಮುಗಿದರೂ ಆಶ್ಚರ್ಯವಿಲ್ಲ.

55
ಪಾತ್ರಧಾರಿಗಳು

ಸೀರಿಯಲ್‌ ಕಥೆ ನೋಡಿದರೆ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಹಾಗೆ ಕಾಣುತ್ತಿದೆ. ಮಗಳ ಸತ್ಯ ಗೊತ್ತಾಗಿ, ಜಯದೇವ್‌ ಕಂಪ್ಲೀಟ್‌ ಆಗಿ ನಾಶವಾದರೆ ಅಥವಾ ಅವನು ಬದಲಾದರೆ ಈ ಧಾರಾವಾಹಿ ಅಂತ್ಯ ಆದಂತೆ.

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಲಕ್ಷ್ಮೀಕಾಂತ್-‌ ಕೃಷ್ಣಮೂರ್ತಿ ಕವತ್ತಾರ್‌

ಜಯದೇವ್-ರಾಣವ್‌ ಗೌಡ

ದಿಯಾ- ಶ್ವೇತಾ ಗೌಡ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories