Muddu Sose: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಇದೀಗ ಭದ್ರನ ತಂಗಿಯಾಗಿ ಬಿರುಗಾಳಿಯಂತೆ ಹೊಸ ನಟಿಯ ಎಂಟ್ರಿಯಾಗಿದೆ. ಯಾರು ಈ ನಟಿ? ಧಾರಾವಾಹಿಯಲ್ಲಿ ಅವರ ಪಾತ್ರ ಏನು? ಇಲ್ಲಿವರೆಗೆ ಯಾವ ಧಾರಾವಾಹಿಯಲ್ಲಿ ನಟಿಸಿದ್ದರು ಇಲ್ಲಿದೆ ಮಾಹಿತಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಮುದ್ದು ಸೊಸೆ’. ಇದೀಗ ಸೀರಿಯಲ್ ನಲ್ಲಿ ಟ್ವಿಸ್ಟ್ ಎಂಬಂತೆ, ಬಿರುಗಾಳಿಯಂತೆ ಪಾತ್ರವೊಂದರ ಎಂಟ್ರಿಯಾಗಿದೆ. ಯಾರು ಈ ಹೊಸ ನಟಿ? ಇವರ ಹಿನ್ನೆಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
26
ಸಿಂಧು ಸುರೇಶ್
ಮುದ್ದು ಸೊಸೆ ಧಾರಾವಾಹಿಯಲ್ಲಿ ಭದ್ರನ ತಂಗಿಯಾಗಿ ಸಿಂಧು ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಈಕೆಯದ್ದು ಮಾತಿನಲ್ಲಿ ಬಿರುಗಾಳಿ, ಯಾರಿಗೂ ಬಗ್ಗದ ಹುಡುಗಿ, ಮನೆಗೆ ಬರುತ್ತಿದ್ದಂತೆ, ಕೋಲಾಹಲ ಸೃಷ್ಟಿಸಿದೆ ಸಿಂಧು ಸುರೇಶ್ ಅವರ ಕಣ್ಮಣಿ ಪಾತ್ರ.
36
ಬಂದ ತಕ್ಷಣ ಮನೆ ಮಂದಿ ಜೊತೆ ಕಿರಿಕ್
ಮನೆಗೆ ಕಾಲಿಡುತ್ತಿದ್ದಂತೆ, ಪಾಟ್ ಗಳನ್ನ ಒಡೆದು ಹಾಕಿದ ಕಣ್ಮಣಿ, ತನ್ನನ್ನು ಪಿಕ್ ಅಪ್ ಮಾಡೋದಕ್ಕೆ ಅಣ್ಣ ಅಪ್ಪ, ಚಿಕ್ಕಪ್ಪ ಯಾರೂ ಬಂದಿಲ್ಲ ಎಂದು ಕಿಡಿ ಕಾರಿದ್ದಾಳೆ. ಅಷ್ಟೇ ಅಲ್ಲ ಮತ್ತೆ ಮನೆಗೆ ಎಂಟ್ರಿ ಕೊಡುತ್ತಿರುವ ಅತ್ತಿಗೆ ಮೇಲೂ ದರ್ಪ ಮೆರೆದಿದ್ದಾಳೆ.
ಇನ್ನೊಂದು ಕಡೆ ಮನೆಯಲ್ಲಿದ್ದ ತೊಟ್ಟಿಲನ್ನು ಮನೆಯಿಂದ ಹೊರ ಹಾಕುತ್ತಾ ಇಲ್ಲಿ, ಯಾವುದೂ ಕೂಡ ಇರಬಾರದು ಎನ್ನುವ ಕಣ್ಮಣಿಗೆ, ವಿದ್ಯಾ ತಿರುಗೇಟು ನೀಡಿ, ಕೋರ್ಟ್ ಮತ್ತೆ ಭದ್ರನ ಜೊತೆ ಆರು ತಿಂಗಳ ಕಾಲ ಇರುವಂತೆ ಅನುವು ಮಾಡಿಕೊಟ್ಟಿದೆ ಎನ್ನುತ್ತಾ, ಸವಾಲು ಹಾಕಿದವರಿಗೆ ಮತ್ತೆ ತಿರುಗಿ ಸವಾಲು ಹಾಕುತ್ತಾ ಮನೆಯೊಳಗೆ ಕಾಲಿಟ್ಟಿದ್ದಾಳೆ ವಿದ್ಯಾ.
56
ಯಾವ ಧಾರಾವಾಹಿಯಲ್ಲಿ ನಟಿಸಿದ್ರು ಸಿಂಧು?
ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಮಿಂಚುತ್ತಿರುವ ನಟಿ ಸಿಂಧು. ಇವರು ಮಾಡೆಲ್ ಕೂಡ ಹೌದು, ಮುದ್ದು ಸೊಸೆ ಇವರು ನಟಿಸುತ್ತಿರುವ ಮೊದಲ ಧಾರಾವಾಹಿ ಅಲ್ಲ. ಇದಕ್ಕೂ ಮುನ್ನ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ ಸಿಂಧು.
66
ಪೋಷಕ ಪಾತ್ರಗಳಲ್ಲಿ ಮಿಂಚಿಂಗ್
ಅಂದ ಹಾಗೆ ಸಿಂಧು ಸುರೇಶ್ ಉದಯ ಟಿವಿಯ ಮೈನಾ ಧಾರಾವಾಹಿ, ಶ್ರೀಗೌರಿ, ಹಾಗೂ ಸ್ಟಾರ್ ಸುವರ್ಣದ ಜೇನು ಗೂಡು ಧಾರಾವಾಹಿಯಲ್ಲಿ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಇದೀಗ ಮುದ್ದು ಸೊಸೆಯಲ್ಲಿ ಕಣ್ಮಣಿಯಾಗಿ ಮಿಂಚಲು ರೆಡಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.