ಕನ್ನಡ ಕಿರುತೆರೆಯ ಜೋಡಿಗಳಾದ ನಿರಂಜನ್ ದೇಶಪಾಂಡೆ- ಯಶಸ್ವಿನಿ, ಶಿಶಿರ್ ಶಾಸ್ತ್ರೀ ಮತ್ತು ಐಶ್ವರ್ಯ ಸಿಂಧೋಗಿ ಎಲ್ಲಾ ಜೋಡಿಗಳು ಸೇರಿ ಥೈಲ್ಯಾಂಡ್ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿನ ಸುಂದರ ಪ್ರದೇಶಗಳಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳು, ಸದ್ಯ ಸೀರಿಯಲ್, ನಿರೂಪಣೆ, ನಟನೆ ಎಲ್ಲದರಿಂದ ಬ್ರೇಕ್ ತೆಗೆದುಕೊಂಡು ದೂರದ ಥೈಲ್ಯಾಂಡ್’ಗೆ ತೆರಳಿ ಎಂಜಾಯ್ ಮಾಡ್ತಿದ್ದಾರೆ. ಬೀಚ್, ಕಾರ್ನಿವಲ್ ಎನ್ನುತ್ತಾ ಊರು ಸುತ್ತುತ್ತಾ ಸಮಯ ಕಳೆಯುತ್ತಿದ್ದಾರೆ.
27
ನಿರಂಜನ್-ಯಶಸ್ವಿನಿ ಮತ್ತು ಐಶ್ವರ್ಯ-ಶಿಶಿರ್
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ಹಾಗೂ ಬಿಗ್ ಬಾಸ್ ನ ಮುದ್ದಾದ ಜೋಡಿಗಳಾದ ಐಶ್ವರ್ಯ ಮತ್ತು ಶಿಶಿರ್ ಶಾಸ್ತ್ರೀ ಜೊತೆಯಾಗಿ ಥೈಲ್ಯಾಂಡ್ ಗೆ ತೆರಳಿದ್ದು, ಅಲ್ಲಿ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.
37
ಫುಕೆಟ್ ನಲ್ಲಿ ಜೋಡಿಗಳು
ಜೋಡಿಗಳು ಫುಕೆಟ್ ಗೆ ತೆರಳಿದ್ದು, ಅಲ್ಲಿ ಸಮುದ್ರದಲ್ಲಿ ಬೋಟಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಶಿಶಿರ್ ಮತ್ತು ಐಶ್ವರ್ಯ ಮೈ ಚಳಿ ಬಿಟ್ಟು ನೀರಿಗಿಳಿದು, ಸಖತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದರು.
ಇಷ್ಟೇ ಅಲ್ಲದೇ ಅವರೆಲ್ಲಾ ಜೊತೆಯಾಗಿ ಥೈಲ್ಯಾಂಡ್ ಕಾರ್ನಿವಲ್ ಗೂ ಕೂಡ ತೆರಳಿದ್ದು, ಅಲ್ಲಿ ಐಸ್ ಕ್ರೀಮ್ ತಿನ್ನುತ್ತಾ, ಫನ್ ಗೇಮ್ ಆಡುತ್ತಾ ಎಂಜಾಯ್ ಮಾಡಿದ್ದಾರೆ, ಐಶ್ವರ್ಯ, ಶಿಶಿರ್ ಅಲ್ಲಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
57
ಐಶ್ವರ್ಯ -ಶಿಶಿರ್ ನಡುವೆ ಸಂಥಿಂಗ್ ಸಂಥಿಂಗ್
ಬಿಗ್ ಬಾಸ್ ಜೋಡಿಗಳಾದ ಐಶ್ವರ್ಯ ಮತ್ತು ಶಿಶಿರ್ ಅಲ್ಲಿಂದ ಹೊರ ಬಂದ ಮೇಲೂ ಸಹ ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಯಾಗಿ ಟ್ರಾವೆಲ್ ಕೂಡ ಮಾಡುತ್ತಿದ್ದಾರೆ. ಇವರ ನಡುವೆ ಏನೋ ಇದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ, ಆದರೆ ಇವರು ತಾವು ಫ್ರೆಂಡ್ಸ್ ಎನ್ನುತ್ತಿದ್ದಾರೆ.
67
ಶಿಶಿರ್ ಶಾಸ್ತ್ರೀ ಧಾರಾವಾಹಿಯಲ್ಲಿ ಬ್ಯುಸಿ
ಶಿಶಿರ್ ಶಾಸ್ತ್ರೀ ಕಲರ್ಸ್ ಕನ್ನಡದ ‘ಗಂಧದಗುಡಿ’ ಧಾರಾವಾಹಿಯಲ್ಲಿ ಮುತ್ತುರಾಜನಾಗಿ ನಟಿಸುತ್ತಿದ್ದಾರೆ. ಈ ಪಾತ್ರದಲ್ಲಿ ಶಿಶಿರ್ ತುಂಬನೆ ಮುಗ್ಧನಾಗಿ ನಟಿಸಿದ್ದಾರೆ. ಐಶ್ವರ್ಯ ಕೆಲವೊಂದು ಧಾರಾವಾಹಿಗಳಲ್ಲಿ ಗೆಸ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
77
ನಿರಂಜನ್ ಏನ್ ಮಾಡ್ತಿದ್ದಾರೆ?
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕರಾಗಿರುವ ನಿರಂಜನ್ ದೇಶಪಾಂಡೆ, ಸದ್ಯ ಯಾವುದೇ ಕಾರ್ಯಕ್ರಮ ನಿರೂಪಣೆ ಮಾಡ್ತಿಲ್ಲ. ಕೊನೆಯದಾಗಿ ಕಾಮಿಡಿ ಕಿಲಾಡಿಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ಪತ್ನಿ ಯಶಸ್ವಿನಿ, ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.