Amruthadhaare ಜೈದೇವ್​ಗಾಗಿ ನಾನ್​ವೆಜ್​ ಮಾಡೋದ ಕಲಿತೆ: ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?

Published : Mar 26, 2026, 07:26 PM IST

'ಅಮೃತಧಾರೆ' ಸೀರಿಯಲ್ ಖ್ಯಾತಿಯ ರಾಣವ್ ಗೌಡ ಮತ್ತು 'ಭಾರ್ಗವಿ ಎಲ್ಎಲ್​ಬಿ' ನಟಿ ರಾಧಾ ಭಗವತಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸೀರಿಯಲ್ ಸೆಟ್‌ನಲ್ಲಿ ಪ್ರೀತಿಸಿ, ಕುಟುಂಬದ ಒಪ್ಪಿಗೆಯೊಂದಿಗೆ ಒಂದಾಗುತ್ತಿರುವ ಈ ಜೋಡಿಯ ವಿಶೇಷವೆಂದರೆ, ಪತಿ ರಾಣವ್‌ಗಾಗಿ ರಾಧಾ ಅವರು ನಾನ್‌ವೆಜ್ ಅಡುಗೆ ಕಲಿಯುತ್ತಿದ್ದಾರೆ

PREV
15
ಭಾರ್ಗವಿ- ಜೈದೇವ್​ ಮದ್ವೆ

ಭಾರ್ಗವಿ ಎಲ್​​ಎಲ್​ಬಿ ನಟಿ ರಾಧಾ ಭಗವತಿ ಅವರು ಅಮೃತಧಾರೆ ಸೀರಿಯಲ್​ ಜೈದೇವ್​ ರಾಣವ್​ ಗೌಡ ಅವರ ಜೊತೆ ಮದುವೆಯಾಗ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಶೀಘ್ರದಲ್ಲಿಯೇ ಇವರ ಮದುವೆ ನೆರವೇರಲಿದ್ದು, ಡೇಟ್​ ಇನ್ನೂ ಫಿಕ್ಸ್​ ಆಗಬೇಕಿದೆ.

25
ಅಮೃತಧಾರೆ ಸೀರಿಯಲ್​ ವೇಳೆ ಲವ್​

ಅಮೃತಧಾರೆ ಸೀರಿಯಲ್​ನಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದ ವೇಳೆ ವಿಲನ್​​ ಜೈದೇವ್​ ಜೊತೆ ಪ್ರೇಮಾಂಕುರವಾಗಿತ್ತು ಮಲ್ಲಿಗೆ. ಸೀರಿಯಲ್​ನಲ್ಲಿ ಅಲ್ಲದೇ ರಿಯಲ್​ ಆಗಿಯೂ ಲವ್ ಮಾಡೋಕೆ ಶುರು ಮಾಡಿದ್ರು. ಅದೇ ರೀತಿ, ರಾಧಾ ಅವರ ಒಳ್ಳೆಯತನ ರಾಣವ್​ಗೂ ಇಷ್ಟವಾಗಿತ್ತು.

35
ಅಮ್ಮನಿಂದ ನೇರ ಕಾಲ್​

ಪರಸ್ಪರ ಬಾಯಿ ಬಿಟ್ಟಿರಲಿಲ್ಲ ಇಬ್ಬರೂ. ಆದರೆ ರಾಣವ್​ ಪ್ರೀತಿಯ ವಿಷಯವನ್ನು ಅವರ ಅಮ್ಮನಬಳಿ ಹೇಳಿ, ಅವರ ಅಮ್ಮನೇ ರಾಧಾ ಅವರ ಜಾತಕ ನೋಡಿ ಮ್ಯಾಚ್​ ಆದ ಬಳಿಕ ನೇರವಾಗಿ ಕಾಲ್​​ ಮಾಡಿ ಮದುವೆಯಾಗ್ತಿಯಾ ಎಂದು ಕೇಳಿರುವುದಾಗಿ ಸಂದರ್ಶನದಲ್ಲಿ ರಾಧಾ ಹೇಳಿಕೊಂಡಿದ್ದರು.

45
ನಾನ್​ವೆಜ್​ ಕಲಿತೆ

ಇದೀಗ ಭಾವಿ ಪತಿ ರಾಣವ್​ಗಾಗಿ ತಾವು ಚಿಕನ್​ ರೆಸಿಪಿ ಕಲಿತಿರುವುದಾಗಿ ರಾಧಾ ಹೇಳಿದ್ದಾರೆ. ನಾನು ವೆಜ್ಜು. ಆದರೆ, ನಾನ್​ವೆಜ್​ ತಿಂತೀನಿ. ಆದರೆ ಮಾಡಲು ಬರ್ತಿರಲಿಲ್ಲ. ರಾಣವ್​ ಅವರಿಗೆ ನಾನ್​ವೆಜ್​ ಇಷ್ಟ ಎಂದು ಎರಡು ಅಡುಗೆ ಕಲಿತಿದ್ದೇನೆ ಎಂದಿದ್ದಾರೆ.

55
ನಾನು ಏನು ಮಾಡಿದ್ರೂ ಇಷ್ಟ

ಅವರಿಗೆ ನಾನು ಏನು ಮಾಡಿದ್ರೂ ಇಷ್ಟವಾಗುತ್ತೆ ಎನ್ನುವುದು ಗೊತ್ತಿದೆ. ಸದ್ಯ ಎರಡೇ ನಾನ್​ವೆಜ್​ ರೆಸಿಪಿ ಕಲಿತಿದ್ದೇನೆ. ವೆಜ್​ ಅಡುಗೆ ಎಲ್ಲಾ ಚೆನ್ನಾಗಿ ಮಾಡ್ತೇನೆ. ನಾನ್​ವೆಜ್​ ಇನ್ನೂ ಹೆಚ್ಚಿನದ್ದು ಕಲಿಯುತ್ತೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories