Dileep Raj Death: ಪತ್ನಿಗೆ ಆ ಟ್ಯಾಲೆಂಟ್‌ ಇರೋದಿಕ್ಕೆ ಸೀರಿಯಲ್‌ ನಿರ್ಮಾಣ ಮಾಡ್ತಿದ್ದೀವಿ ಎಂದಿದ್ದ ದಿಲೀಪ್‌ ರಾಜ್

Published : May 13, 2026, 08:50 AM IST

Actor Dileep Raj: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಈಗ ಇವರು ಧಾರಾವಾಹಿಗಳ ನಿರ್ಮಾಣದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಲವ್‌ ಮಾಕ್ಟೇಲ್‌ ಸಿನಿಮಾದಲ್ಲಿ ನಟಿಸಿದ್ದರು. ಪತ್ನಿಯ ಪ್ರತಿಭೆ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

PREV
14
ದಿಲೀಪ್‌ ರಾಜ್‌ಗೆ ಏನಾಯ್ತು?

ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಇವತ್ತು ಬೆಳಗ್ಗಿನ ಜಾವ ದಿಲೀಪ್‌ ರಾಜ್‌ಗೆ ಎದೆನೋವು ಕಾಣಿಸಿಕೊಂಡಿದೆ, ಆಮೇಲೆ ಕುಟುಂಬಸ್ಥರು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಥಮ ಚಿಕಿತ್ಸೆ ಕೊಡಿಸಿದರೂ ಕೂಡ, ಪ್ರಯೋಜನವಾಗದೆ ನಿಧನರಾಗಿದ್ದಾರೆ.

24
ಎರಡು ಸೀರಿಯಲ್ ಪ್ರಸಾರ ಆಗ್ತಿವೆ

48ನೇ ವಯಸ್ಸಿಗೆ ದಿಲೀಪ್‌ ರಾಜ್‌ ಅವರು ನಿಧನರಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿದ್ದ ದಿಲೀಪ್‌ ರಾಜ್‌ ಅವರು, ಆ ಬಳಿಕ ಸೀರಿಯಲ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಿದ್ದರು. ಸದ್ಯ ಇವರ ನಿರ್ಮಾಣದ ಎರಡು ಧಾರಾವಾಹಿಗಳು ಪ್ರಸಾರ ಆಗ್ತಿದೆ.

34
ಪತ್ನಿ ವಿದ್ಯಾ ಯಾರು?

ದಿಲೀಪ್‌ ರಾಜ್‌ ಅವರ ಪತ್ನಿ ವಿದ್ಯಾ ಕೂಡ ನಿರ್ಮಾಪಕಿ. ಇವರ ಸಹಾಯದಿಂದಲೇ ಪ್ರೊಡಕ್ಷನ್‌ ಹೌಸ್‌ ನಡೆಸೋಕೆ ಆಗ್ತಿದೆ ಎಂದು ದಿಲೀಪ್‌ ಅವರು ತಿಂಗಳುಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ದಿಲೀಪ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳು.

44
ಪತ್ನಿಯನ್ನು ಹೊಗಳಿದ್ದ ನಟ

ವಿದ್ಯಾ ಕೆಲಸ ಮಾಡುವ ರೀತಿ ಎಲ್ಲರಿಗೂ ಮಾದರಿ. ಕಾರ್ಪೋರೇಟ್‌ ಜಗತ್ತಿನಲ್ಲಿ 16 ವರ್ಷ ಎಚ್‌ಆರ್‌ ಆಗಿ ಕೆಲಸ ಮಾಡಿ, ಈಗ ಸಿನಿಮಾ ರಂಗದಲ್ಲಿ, ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡೋದು ಸುಲಭ ಇಲ್ಲ. ಎಲ್ಲರೂ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡೋಕೆ ಆಗೋದಿಲ್ಲ. ಯಾರನ್ನು ಹೇಗೆ ಹ್ಯಾಂಡಲ್‌ ಮಾಡೋದು ಎನ್ನೋದು ಅವಳಿಗೆ ಗೊತ್ತಿದೆ. ಯಾವಾಗ ಯಾರನ್ನು ಬಿಡಬೇಕು, ಹಿಡಿದುಕೊಳ್ಳಬೇಕು ಎಂದು ಅವಳಿಗೆ ಗೊತ್ತಿದೆ. ಆ ಪ್ರತಿಭೆ ನನಗೆ ಇಲ್ಲ ಎಂದು ದಿಲೀಪ್‌ ರಾಜ್‌ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories