Published : May 13, 2026, 09:51 AM ISTUpdated : May 13, 2026, 09:52 AM IST
ನಟನೆ, ನಿರ್ಮಾಣ ಸೇರಿದಂತೆ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟ ದಿಲೀಪ್ ರಾಜ್ ನಿಧನಕ್ಕೆ ಕನ್ನಡಿಗರು ಬೆಚ್ಚಿ ಬಿದ್ದಿದ್ದಾರೆ. ಹಿಟ್ಲರ್ ಕಲ್ಯಾಣ ಮೂಲಕ ಮನೆ ಮಾತಾಗಿದ್ದ ದಿಲೀಪ್ ಕೊನೆಯ ಪೋಸ್ಟ್ ವೈರಲ್ ಆಗಿದೆ.
ನಟ ದಿಲೀಪ್ ರಾಜ್ ಇಂದು ಮುಂಜಾನೆ ಗಹೃದಯಾಘಾತಕ್ಕೆ ನಿಧನರಾಗಿದ್ದಾರೆ. ಇಂದು ಬೆಳಕ್ಕೆ ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡ ದಿಲೀಪ್ ರಾಜ್ ಅವರನ್ನು ತಕ್ಷಣವೇ ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. 47ರ ಹರೆಯದ ದಿಲೀಪ್ ರಾಜ್ ನಿಧನರಾಗಿದ್ದಾರೆ.
25
ದಿಲೀಪ್ ರಾಜ್ ಕೊನೆ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪ್ರತಿಕ್ರಿಯೆ
ದಿಲೀಪ್ ರಾಜ್ ನಿಧನದ ಬೆನ್ನಲ್ಲೇ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಕೊನೆಯ ಪೋಸ್ಟ್ ಇದೀಗ ವೈರಲ್ ಆಗಿದೆ. ಕೊನೆಯ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾವಿನ ಸುದ್ದಿ ಬೆನ್ನಲ್ಲೇ ಅಭಿಮಾನಿಗಳು ದಿಲೀಪ್ ರಾಜ್ ಕೊನಯೆ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಆಘಾತ ವ್ಯಕ್ತಪಡಿಸಿದ್ದಾರೆ.
35
ದಿಲೀಪ್ ರಾಜ್ ಕೊನೆಯ ಪೋಸ್ಟ್ ಏನು
ದಿಲೀಪ್ ರಾಜ್ ಇನ್‌ಸ್ಟಾಗ್ರಾಂಲ್ಲಿ ಹಾಕಿದ ಕೊನೆಯ ಪೋಸ್ಟ್, ಅವರ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ ಪ್ರಮೋಶನ್ ಕುರಿತು ಪೋಸ್ಟರ್ ಹಾಕಿದ್ದರು. ಆದರೆ ಇನ್‌ಸ್ಟಾಗ್ರಾಂ ಸಕ್ರಿಯವಾಗಿಲ್ಲ. ಜನವರಿ 9, 2025ರಲ್ಲಿ ಕೊನೆಯ ಪೋಸ್ಟ್ ಹಾಕಿದ್ದಾರೆ. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.
ದಿಲೀಪ್ ರಾಜ್ ಹಲವು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಹಿಟ್ಲರ್ ಕಲ್ಯಾಣ ಧಾರವಾಹಿ ಮೂಲಕ ಮನೆ ಮಾತಾಗಿದ್ದಾರೆ. ಹಿಟ್ಲರ್ ಕಲ್ಯಾಣ ಸೀರಿಯಲ್ ದಿಲೀಪ್ ರಾಜ್ ಕರಿಯರ್‌ನಲ್ಲೇ ಅತಿ ಯಶಸ್ಸಿನ ಧಾರವಾಹಿಯಾಗಿದೆ. ಪ್ರತಿ ಮನೆ ಮನಗಳಲ್ಲಿ ದಿಲೀಪ್ ರಾಜ್ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದರು.
55
ಪುನೀತ್ ರಾಜ್ ಕುಮಾರ್ ಮಿಲನ ಸಿನಿಮಾದಲ್ಲಿ ದಿಲೀಪ್ ರಾಜ್ ಖಳನಾಯಕ
ಪುನೀತ್ ರಾಜ್‌ಕುಮಾರ್ ಅಭಿನಯದ ಮಿಲನ ಸಿನಿಮಾದಲ್ಲಿ ದಿಲೀಪ್ ರಾಜ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಅಂಬರೀಷ್ ಕೊನೆಯ ಸಿನಿಮಾ ಅಂಬಿ ನಿನ್ಗೆ ವಯಸ್ಸಾಯ್ತೋ ಸಿನಿಮಾದಲ್ಲೂ ನಟಿಸಿದ್ದರು.
ಪುನೀತ್ ರಾಜ್ ಕುಮಾರ್ ಮಿಲನ ಸಿನಿಮಾದಲ್ಲಿ ದಿಲೀಪ್ ರಾಜ್ ಖಳನಾಯಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.