ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ? ಗುರುತೇ ಸಿಗದಂತೆ ಬದಲಾದ ಕನ್ನಡದ ಎಲ್ಲಾ ಸೂಪರ್‌ ಸ್ಟಾರ್‌ ಜೊತೆ ನಟಿಸಿದ್ದ ಹೀರೋಯಿನ್‌!

Published : Jun 11, 2026, 08:22 PM IST

ಏಳು ವರ್ಷಗಳಲ್ಲಿ ಕನ್ನಡದ ಬಹುತೇಕ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿ, 2011ರ ನಂತರ ಚಿತ್ರರಂಗದಿಂದ ದೂರವಾದ ನಟಿ ಈಕೆ. ಇದೀಗ ಅವರು ಮಾಡೆಲ್ ಹಾಗೂ ಇನ್‌ಫ್ಲುಯೆನ್ಸರ್ ಆಗಿ ಸಂಪೂರ್ಣ ಬದಲಾದ ಜೀವನಶೈಲಿಯನ್ನು ನಡೆಸುತ್ತಿದ್ದಾರೆ.

PREV
16
ಏಳೇ ವರ್ಷ ಸ್ಯಾಂಡಲ್‌ವುಡ್‌ನಲ್ಲಿದ್ದ ನಟಿ

ಆಕೆ ಅಂತಿಂಥ ಹೀರೋಯಿನ್‌ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಏಳೇ ವರ್ಷ. ಆದರೆ, ಈ ಏಳು ವರ್ಷಗಳಲ್ಲಿ ಆಕೆ ಕನ್ನಡದ ಎಲ್ಲಾ ಸೂಪರ್‌ಸ್ಟಾರ್‌ ನಟರೊಂದಿಗೆ ಆಕೆ ನಟಿಸಿದ್ದರು. ಪುನೀತ್‌ ರಾಜ್‌ಕುಮಾರ್‌ ಬಿಟ್ಟು ಆಕೆ ಆ ಕಾಲದ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ನಟನೆ ಮಾಡಿದ್ದರು.

26
2011ರಲ್ಲಿ ಕೊನೆಯ ಕನ್ನಡ ಸಿನಿಮಾ

ವಿಷ್ಣುವರ್ಧನ್‌, ಶಿವರಾಜ್‌ಕುಮಾರ್‌, ರವಿಚಂದ್ರನ್‌, ವಿಜಯ್‌ ರಾಘವೇಂದ್ರ, ಉಪೇಂದ್ರ, ರಮೇಶ್‌, ಆದಿತ್ಯ, ಜಗ್ಗೇಶ್‌, ಅನಂತ್‌ನಾಗ್‌, ಪ್ರೇಮ್‌, ದಿಗಂತ್‌, ದರ್ಶನ್‌ ಹಾಗೂ ಕಿಶೋರ್‌ ಎಲ್ಲರೊಂದಿಗೂ ಈಕೆ ನಟಿಸಿದ್ದರು. ಇಷ್ಟೆಲ್ಲಾ ನಟರೊಂದಿಗೆ ಆಕೆ ನಟಿಸಿದ್ದು ಕೇವಲ ಏಳೇ ವರ್ಷಗಳಲ್ಲಿ ಆ ಬಳಿಕ ಅವರು ಎಲ್ಲಿ ನಾಪತ್ತೆಯಾಗಿ ಹೋದರು ಅನ್ನೋದು ಇಂದಿಗೂ ಗೊತ್ತಾಗಿಲ್ಲ. 2011ರಲ್ಲಿ ಅವರು ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.

36
ಫುಲ್‌ ಬದಲಾದ ಜೆನ್ನಿಫರ್‌ ಕೊತ್ವಾಲ್‌

ಬಹುಶಃ ಇಷ್ಟೆಲ್ಲಾ ಹೇಳಿದರೂ ಆಕೆ ಯಾರು ಅನ್ನೋದು ನಿಮಗೆ ಅಂದಾಜಾಗಲು ಸಾಧ್ಯವಿಲ್ಲ. ಆಕೆ ನಟಿಸಿದ ಮೊಟ್ಟಮೊದಲ ಸಿನಿಮಾ ಕನ್ನಡ ಅದ್ವಿತೀಯ ಬ್ಲಾಕ್‌ಬಸ್ಟರ್‌ ಎನಿಸಿಕೊಂಡಿತ್ತು. ಹೌದು, ಜೆನ್ನಿಫರ್‌ ಕೊತ್ವಾಲ್‌. ಜೋಗಿ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಜೊತೆಯಲ್ಲಿ ನಿವೇದಿತಾ ಪಾತ್ರದಲ್ಲಿ ನಟಿಸಿದ್ದ ಜೆನಿಫರ್‌ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ.

46
ಇಂದು ಇನ್ಸ್‌ಟಾಗ್ರಾಮ್‌ನಲ್ಲೇ ಜನಪ್ರಿಯ

ಇಂದು ಮಾಡೆಲ್‌, ಇನ್‌ಫ್ಲುಯೆನ್ಸರ್‌ ಆಗಿಯೇ ಹೆಚ್ಚಾಗಿ ಜನಪ್ರಿಯರಾಗಿರುವ ಜೆನ್ನಿಫರ್‌ ಕೊತ್ವಾಲ್‌ ಸಂಪೂರ್ಣವಾಗಿ ಬದಲಾಗಿದ್ದಾರೆ. ಹಿಂದೊಮ್ಮೆ ಇವರು ಕನ್ನಡದ ಸ್ಟಾರ್‌ ನಟಿಯಾಗಿದ್ದರು ಎನ್ನುವಂಥ ಯಾವ ಕುರುಹುಗಳೂ ಅವರೊಂದಿಗಿಲ್ಲ. ಅವರ ಮುಖ ಸಂಪೂರ್ಣ ಬದಲಾಗಿದ್ದು, ಅಭಿಮಾನಿಗಳು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.

56
ಫಾರಿನ್‌ ಟ್ರಿಪ್‌ಗಳ ಫೋಟೋ

ಇನ್ನು ಮದುವೆಯಂಥ ಖಾಸಗಿ ವಿಚಾರಗಳು ಆಕೆಯ ಜೀವನದಲ್ಲಿ ಆಗಿದ್ಯಾ ಅನ್ನೋದರ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ. ಅವರು ಪ್ಯಾರಿಸ್, ಮೊನಾಕೊ ಮತ್ತು ದುಬೈನಂತಹ ಸ್ಥಳಗಳಿಗೆ ತಮ್ಮ ಪ್ರಯಾಣದ ಕುರಿತು ಆಗಾಗ್ಗೆ ಅಪ್‌ಡೇಟ್‌ಗಳನ್ನೂ ಪೋಸ್ಟ್ ಮಾಡುತ್ತಾರೆ ಮತ್ತು ಉನ್ನತ ಮಟ್ಟದ ಫ್ಯಾಷನ್ ಇವೆಂಟ್‌ಗಳಲ್ಲಿ ಕಡ್ಡಾಯವಾಗಿ ಹಾಜರಾಗುತ್ತಾರೆ.

66
ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಹೊಸ ಲುಕ್‌

ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಆಕೆ ನಿಯಮಿತವಾಗಿ "ಗೆಟ್ ರೆಡಿ ವಿತ್ ಮಿ" (GRWM) ವೀಡಿಯೊಗಳು, ಫ್ಯಾಷನ್ ಶೈಲಿಯ ಗೈಡ್ಸ್‌ಗಳು ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳ ಸ್ಟಾರ್ ಹೀರೋಯಿನ್‌ ಆಗಿದ್ದ ಈಕೆಯ ಲೈಫ್‌ಸ್ಟೈಲ್‌ ಇಷ್ಟು ಬದಲಾಗಿದ್ದು ಕಂಡು ಸ್ಯಾಂಡಲ್‌ವುಡ್‌ನ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories