ಸೊಸೆ ಮಧು ಗೌಡ ಪ್ರಗ್ನೆಂಟ್;‌ ಮಗನ ಅಫೇರ್; ಕನ್ನಡ ಯುಟ್ಯೂಬರ್‌ ನಿಖಿಲ್‌ ರವೀಂದ್ರಗೆ ಗೂಸ ಕೊಟ್ಟ ತಾಯಿ!‌ ಸತ್ಯ ಬೇರೆ ಇದೆ

Published : Jun 11, 2026, 07:53 PM IST

Youtuber Madhu Gowda: ಕನ್ನಡದ ಯುಟ್ಯೂಬರ್‌ ನಿಖಿಲ್‌, ನಿಶಾ, ಮಧು ಈ ಬಾರಿ ಜಗಳ ಆಡಿಕೊಂಡಿರೋ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ಈಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇದರ ಹಿಂದಿನ ಸತ್ಯ ಬೇರೆಯೇ ಇದೆ. 

PREV
14
ಮಧು ಈಗ ಪ್ರಗ್ನೆಂಟ್‌

ಹೌದು, ನಿಖಿಲ್‌ ರವೀಂದ್ರ ಪತ್ನಿ ಮಧು ಈಗ ಪ್ರಗ್ನೆಂಟ್‌. ಈಗ ನಿಖಿಲ್‌ ಇನ್ನೊಂದು ಹುಡುಗಿ ಜೊತೆ ಇರುವ ಫೋಟೋವನ್ನು ನಿಖಿಲ್‌ ತಾಯಿ, ಅಜ್ಜಿ ನೋಡಿದ್ದಾರೆ. ಮಧುಗೆ ಮೋಸ ಮಾಡ್ತಿದ್ದಾರೆ ಎಂದು ತಿಳಿದು ಸಿಕ್ಕಾಪಟ್ಟೆ ಬೈದಿದ್ದಾರೆ.

24
ಮುಕ್ಕಾಲು ಗಂಟೆ ಕಾಲ ಇದೇ ವಿಷಯಕ್ಕೆ ಜಗಳ

ಒಟ್ಟಿನಲ್ಲಿ ಮುಕ್ಕಾಲು ಗಂಟೆ ಕಾಲ ಇದೇ ವಿಷಯಕ್ಕೆ ಜಗಳ ನಡೆದಿದೆ. ನಿಖಿಲ್‌ ಮಾತ್ರ ಏನೂ ಮಾತನಾಡದೆ ಸುಮ್ಮನೆ ಇದ್ದಾರೆ. ಮಧು ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಹೀಗಿರುವಾಗ ನಿಖಿಲ್‌ ತನ್ನ ಸಂಸಾರವನ್ನು ಹಾಳು ಮಾಡಿಕೊಂಡ್ರು ಎಂದು ಅಜ್ಜಿ, ತಾಯಿ ಬೇಸರ ಮಾಡಿಕೊಂಡು ಬೈದಿದ್ದಾರೆ.

34
ನಿಖಿಲ್‌ ತಾಯಿ ಮಾತಿಗೆ ಮೆಚ್ಚುಗೆ

ಮಧು ಕೂಡ ಸ್ವಲ್ಪವೂ ಡೌಟ್‌ ಬರದೆ ಇರೋ ತರ ನಾಟಕ ಮಾಡಿದ್ದಾರೆ. ಇದನ್ನೆಲ್ಲ ನೋಡಿ ಕೊನೆಯಲ್ಲಿ ನಿಖಿಲ್‌ ತಾಯಿ, “ನೀನು ಯಾರನ್ನದರೂ ಮದುವೆ ಆಗು, ನಾನು ಮಧುಳನ್ನು ಚೆನ್ನಾಗಿ ನೋಡಿಕೊಳ್ತೀನಿ” ಎಂದು ಹೇಳಿದ್ದಾರೆ. ಈ ಮಾತು ಅನೇಕರಿಗೆ ಇಷ್ಟ ಆಗಿದೆ.

44
ಫ್ರಾಂಕ್‌ ವಿಡಿಯೋ

ಹೌದು, ಇದು ಫ್ರಾಂಕ್‌ ವಿಡಿಯೋ ಆಗಿತ್ತು. ಸಾಕಷ್ಟು ಜನರು ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ರೆ, ಈ ರೀತಿ ವಿಡಿಯೋ ಮಾಡೋದು ಒಳ್ಳೆಯದಲ್ಲ ಎಂದು ಬುದ್ಧಿ ಕೂಡ ಹೇಳಿದ್ದಾರೆ. ತಪ್ಪು ಮಾಡದ ಮಗನಿಗೆ ಹೊಡೆದೆ ಎಂದು ಮಧು ಗೌಡ ತಾಯಿ ಬೇಸರ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಕೆಲ ಯುಟ್ಯೂಬ್‌ ವ್ಲಾಗ್‌ ಮಾಡುವವರು ಫ್ರಾಂಕ್‌ ಮಾಡೋದನ್ನು ರೂಢಿ ಮಾಡಿಕೊಂಡಿದ್ದಾರೆ. ಒಂದೊಂದು ವಿಷಯ ಇಟ್ಟುಕೊಂಡು ಫ್ರಾಂಕ್‌ ಮಾಡುತ್ತಾರೆ. ಆಮೇಲೆ ಈ ತಮಾಷೆ ಹೋಗಿ ಅಮಾಸೆ ಆಗುತ್ತೆ ಎನ್ನೋ ತರ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories