Bigg Boss: ಜಾಹ್ನವಿ ಮುಚ್ಚಿಟ್ಟಿದ್ದ ಸೀಕ್ರೆಟ್​ ಎಲ್ಲರೆದುರೇ ರಟ್ಟು ಮಾಡಿದ ಸುದೀಪ್​- ಬೇಕಿತ್ತಾ ಹಳ್ಳ ತೋಡಿಕೊಳ್ಳೋ ಕೆಲ್ಸ?

Published : Nov 16, 2025, 06:03 PM IST

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ವಾಹಿನಿಯ protegee ಎಂದು ಆರೋಪಿಸಿದ್ದ ಜಾಹ್ನವಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ, ಜಾಹ್ನವಿ ಅವರೇ ಚಾನೆಲ್ ಬಳಿ ಅವಕಾಶಕ್ಕಾಗಿ ಅಂಗಲಾಚಿದ್ದ ಸತ್ಯವನ್ನು ಸುದೀಪ್ ಬಯಲು ಮಾಡಿದ್ದಾರೆ.

PREV
17
ಫೈನಲಿಸ್ಟ್​ ಆಗುವ ಮುನ್ಸೂಚನೆ

ಸದ್ಯ ಜಾಹ್ನವಿ ಅವರು ಬಿಗ್​ಬಾಸ್​ನಲ್ಲಿ ಫೈನಲಿಸ್ಟ್​ ಆಗುವ ಮುನ್ಸೂಚನೆ ತೋರುತ್ತಿದ್ದಾರೆ. ಜಗಳ, ಗದ್ದಲ ಎಲ್ಲವುಗಳಿಂದ ನೆಗೆಟಿವ್​ ಕಮೆಂಟ್ಸ್​ಗಳಿಂದಲೇ ಫೇಮಸ್​ ಆಗ್ತಿರೋ ಕೆಲವು ಸ್ಪರ್ಧಿಗಳ ಪೈಕಿ ಜಾಹ್ನವಿ ಕೂಡ ಒಬ್ಬರು. ಇದೇ ಕಾರಣಕ್ಕೆ ಇವರು ಇಷ್ಟು ಬೇಗ ಮನೆಯಿಂದ ಹೊರಕ್ಕೆ ಹೋಗುವ ಸೂಚನೆ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

27
ಸದ್ದು ಮಾಡ್ತಿರೋ ಸುದ್ದಿ

ಹೀಗೊಂದು ವೇಳೆ ಅವರನ್ನು ಹೊರಕ್ಕೆ ಹಾಕುವುದಿದ್ದರೆ, ಬಿಗ್​ಬಾಸ್​ಗೆ ಅವಕಾಶ ಕೊಟ್ಟ ಕಲರ್ಸ್​ ವಾಹಿನಿಯ ವಿರುದ್ಧ ಮಾತನಾಡಿದಾಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಅವರನ್ನು ಸದ್ಯ ಅಂತೂ ಹೊರಗೆ ಹಾಕುವ ಸೂಚನೆ ಇಲ್ಲ.

37
ಬಹುದೊಡ್ಡ ಸೀಕ್ರೆಟ್​

ಆದರೆ, ಇದೇ ವೇಳೆ ಜಾಹ್ನವಿ ಅವರ ಬಹುದೊಡ್ಡ ಸೀಕ್ರೆಟ್​ ಒಂದು ರಿವೀಲ್​ ಆಗಿದೆ. ಇದಕ್ಕೆ ಖುದ್ದು ಜಾಹ್ನವಿ ಅವರೇ ಕಾರಣ ಆಗಿದ್ದಾರೆ. ಸುದೀಪ್​​ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ಮೂಲಕ ಜಾಹ್ನವಿ ತಮ್ಮ ಹಳ್ಳವನ್ನು ತಾವೇ ತೋಡಿಕೊಂಡಿದ್ದಾರೆ!

47
ಸ್ಪಂದನಾ ಉದ್ದೇಶಿಸಿ ಮಾತು

ಕೆಲ ದಿನಗಳ ಹಿಂದೆ ಜಾಹ್ನವಿ ಅವರು, ಸ್ಪಂದನಾ ಅವರನ್ನು ಉದ್ದೇಶಿಸಿ, ಇವರು ವಾಹಿನಿ ಕಡೆಯಿಂದ ಬಂದವರಾಗಿರುವ ಕಾರಣ, ಅವರನ್ನು ಹೊರಕ್ಕೆ ಕಳುಹಿಸುವುದಿಲ್ಲ. ಅವರನ್ನು ಪ್ರೊಟೆಕ್ಟ್​ ಮಾಡಲಾಗುತ್ತಿದೆ. ಅವರು ಚೆನ್ನಾಗಿ ಆಡದಿದ್ದರೂ ಮನೆಯಲ್ಲಿಯೇ ಉಳಿಸಿಕೊಳ್ಳಲಾಗುತ್ತಿದೆ ಎಂದಿದ್ದರು.

57
ಮಾತನ್ನು ಸಮರ್ಥಿಸಿಕೊಂಡ ಜಾಹ್ನವಿ

ಈ ಬಗ್ಗೆ ಸುದೀಪ್​ ಚೆನ್ನಾಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಹೇಳಿದ್ದರು. ಅದೇ ರೀತಿ ಸುದೀಪ್​​ ಈ ವಿಷಯವಾಗಿ ಮಾತನಾಡಿದರು ಕೂಡ. ಆಗಲೂ ಜಾಹ್ನವಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು. ಫ್ಯಾನ್ ಫಾಲೋವಿಂಗ್ ಮ್ಯಾಟರ್ ಆಗುತ್ತೆ ಅಂತ ನಾನು ಹೇಳಿದ್ದೀನಿ. ನನ್ನ ಹೇಳಿಕೆಗೆ ಬದ್ಧವಾಗಿದ್ದೀನಿ ಎಂದರು.

67
ಗುಟ್ಟು ರಿವೀಲ್​

ಈ ಸಮಯದಲ್ಲಿ ಸುದೀಪ್​ ಒಂದು ಗುಟ್ಟನ್ನು ರಿವೀಲ್​ ಮಾಡಿದ್ರು. ನಿಮ್ಮ ಮಾತಿಗೆ ಗೌರವ ಕೊಟ್ಟೇ ಒಂದು ಪ್ರಶ್ನೆ ಕೇಳುತ್ತೇನೆ. ಇಷ್ಟೆಲ್ಲಾ ತಿಳಿವಳಿಕೆ ನಿಮಗೆ ಇದೆ ಎನ್ನೋದಾದ್ರೆ, ನೀವೂ ಕೂಡ ಚಾನೆಲ್​ ಕಡೆಯವರೇ ಅಲ್ವಾ ಎಂದು ಪ್ರಶ್ನಿಸಿದರು.

77
ನೀವೇ ತಾನೇ?

ನೀವೇ ತಾನೇ ಚಾನೆಲ್‌ ಹತ್ತಿರ ರಿಕ್ವೆಸ್ಟ್ ಮಾಡಿ ಮಾಡಿ ಮಾಡಿ ಬಿಗ್​ಬಾಸ್​​ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರೋದು? ಈ ಸತ್ಯ ನಿಮಗೆ ಅನಿಸಿದರೆ ಯಾಕೆ ಇಷ್ಟೆಲ್ಲಾ ರಿಕ್ವೆಸ್ಟ್​ ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸುವ ಮೂಲಕ, ಜಾಹ್ನವಿ ಅವರೇ ಚಾನೆಲ್​ ಬಳಿ ಹೋಗಿ ಅಂಗಲಾಚಿರುವ ವಿಷಯವನ್ನು ರಿವೀಲ್​ ಮಾಡಿದ್ರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories