'ಸುದೀಪ್​ ಬಗ್ಗೆ ತಪ್ಪು ತಿಳಿದುಕೊಂಡ್ರಾ Bigg Boss ವೀಕ್ಷಕರು! ಸೋಷಿಯಲ್ ಮೀಡಿಯಾದಲ್ಲಿ ಶುರವಾಯ್ತು ಚರ್ಚೆ

Published : Nov 16, 2025, 04:21 PM ISTUpdated : Nov 17, 2025, 01:14 PM IST

ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ನಡೆ ಬಗ್ಗೆ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಪರ ವಿರೋಧ ಚರ್ಚೆಗಳು ಶುರುವಾಗಿವೆ. ರಕ್ಷಿತಾ ಅವರಂತಹ ಸ್ಪರ್ಧಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವ ಸುದೀಪ್, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವಿಷಯದಲ್ಲಿ ಮೃದು ಧೋರಣೆ ತೋರುತ್ತಿದ್ದಾರಾ? 

PREV
18
ವೀಕ್ಷಕರಿಗೆ ಶಾಕ್​ ಕೊಟ್ಟಿದ್ದ ಸುದೀಪ್​

ಸುದೀಪ್​ ಅವರು ಸಿನಿಮಾಕ್ಕಿಂತಲೂ ಹೆಚ್ಚು ಮಿಂಚುತ್ತಿರೋದು ಬಿಗ್​ಬಾಸ್​ ಮೂಲಕ. ಕಳೆದ ಹಲವು ಸೀಸನ್​ಗಳನ್ನು ನಡೆಸಿಕೊಟ್ಟ ಸುದೀಪ್​ ಅವರು ಕಳೆದ ಸೀಸನ್​ ಅಂತ್ಯದಿಂದ ಮುಂದಿನ ಸೀಸನ್​ನಿಂದ ನಾನು ಬರುವುದಿಲ್ಲ ಎಂದು ಏಕಾಏಕಿ ಘೋಷಿಸಿದಾಗ ಅಕ್ಷರಶಃ ಕಣ್ಣೀರಾದವರು ಹಲವರು. ಎಷ್ಟೋ ಮಂದಿ ಸೋಷಿಯಲ್​ ಮೀಡಿಯಾದಲ್ಲಿ ಈ ನಿರ್ಧಾರದ ಬಗ್ಗೆ ಭಾರಿ ಅಸಮಾಧಾನ ಹೊರಹಾಕಿದ್ದರು. ಈ ಷೋಗೆ ನಿಮ್ಮನ್ನು ಬಿಟ್ಟರೆ ಯಾರನ್ನೂ ಕಲ್ಪಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದರು. ಸುದೀಪ್​ ಅವರು ತಮ್ಮ ಈ ನಿರ್ಧಾರಕ್ಕೆ ಹಲವಾರು ರೀತಿಯಲ್ಲಿ ಸಮಜಾಯಿಷಿ ಕೊಟ್ಟಿದ್ದರು.

28
ಬಿಗ್​ಬಾಸ್​ ಜೊತೆ ಒಪ್ಪಂದ

ಕೊನೆಗೆ ಅಷ್ಟೇ ವೇಗದಲ್ಲಿ ತಮ್ಮ ತೀರ್ಮಾನ ಬದಲಿಸಿ ನಾಲ್ಕು ವರ್ಷ ಬಿಗ್​ಬಾಸ್​ ಜೊತೆ ಒಪ್ಪಂದ ಮಾಡಿಕೊಂಡು ಅಭಿಮಾನಿಗಳನ್ನು ಫುಲ್​ ಖುಷ್​ ಮಾಡಿದರು. ತೀರ್ಮಾನ ಬದಲಿಸಿರುವುದಕ್ಕೂ ತಮ್ಮದೇ ಆದ ಕಾರಣಗಳನ್ನು ನೀಡಿದರು. ಕೊನೆಗೆ ಹೊಸ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸಿದರು.

38
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಮೊದಲ ಬಾರಿಗೆ ಕಿಚ್ಚ ಸುದೀಪ್​ (Kicchaa Sudeep) ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚಚ್ರೆಗಳು ಶುರುವಾಗಿವೆ.  ಕೆಲವು ಸ್ಪರ್ಧಿಗಳನ್ನು ಕಿಚ್ಚ ರಕ್ಷಿಸುತ್ತಿದ್ದಾರೆಂದು ಹೇಳಿದರೂ, ಇಲ್ಲ ಹಾಗೇನೂ ಇಲ್ಲವೆಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

48
ರಕ್ಷಣೆ ಮಾಡ್ತಿದ್ದಾರಾ?

ಕೆಲವು ಸ್ಪರ್ಧಿಗಳ ಪರ ಕಿಚ್ಚ ಸುದೀಪ್ ಮಾಡುತ್ತಿದ್ದಾರೆಂದು ಕೆಲವು ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಬಿರುಸಾಗಿ ಚರ್ಚಿಗಳಾಗುತ್ತಿವೆ. ಆದರೆ, ಹಾಗೇನೂ ಇಲ್ಲಪ್ಪಾ. ಅವರು ಸರಿಯಾಗಿ ನಿರ್ವಹಿಸುತ್ತಿದ್ದಾರೆಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇಂಥ ರಿಯಾಲಿಟಿ ಶೋನಲ್ಲಿ ಹತ್ತಾರು ಮಂದಿ ಪಾರ್ಟಿಸಿಪೇಟ್ ಮಾಡುತ್ತಾರೆ. ಒಬ್ಬೊಬ್ಬರ ಗುಣಗಳು ಒಂದೊಂದು ರೀತಿ ಇರುತ್ತೆ. ಈ ರೀತಿಯ ಪರ ವಿರೋಧ ಚರ್ಚೆಗಳು ನಡೆಯೋದು ಸಹಜ.

58
ರಕ್ಷಿತಾ ವಿರುದ್ಧ ಗರಂ

ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್​ ಅವರು, ರಕ್ಷಿತಾರನ್ನು ಕುರಿತು ನಿಮ್ಮ ಸ್ವಂತ ಟೀಮ್​ ಅನ್ನು ನೀವ್ಯಾಕೆ ಇರಿಟೇಟ್​ ಮಾಡಿದ್ದು ಎಂದು ಸುದೀಪ್​​ ಪ್ರಶ್ನಿಸಿದ್ದರು. ಅದಕ್ಕೆ ರಕ್ಷಿತಾ, ನಿಮಗೆ ಯಾವಾಗ ಅನ್ನಿಸ್ತು ನಾನು ಇರಿಟೇಟ್​ ಮಾಡಿದ್ದೇನೆ ಎಂದು ಮರು ಪ್ರಶ್ನೆ ಹಾಕಿದ್ದರು. ಇದರಿಂದ ಸುದೀಪ್​ ತುಸು ಗರಂ ಆದಂತೆ ಕಂಡಿದ್ದರು.

68
ಒಬ್ಬೊಬ್ಬರದ್ದು ಒಂದೊಂದ ನಡೆ

ಕೆಲ ತಿಂಗಳ ಕಾಲ ಹೊರ ಪ್ರಪಂಚದೊಂದಿಗೆ ಸಂಬಂಧವೇ ಇಲ್ಲದೇ ನಾಲ್ಕು ಗೋಡೆಗಳ ಮಧ್ಯೆ ಇರುವ ಸ್ಪರ್ಧಿಗಳ ನಡವಳಿಕೆ ಒಮ್ಮೊಮ್ಮೆ ಒಂದೊಂದು ರೀತಿ ಇರೋದು ಸಹಜ. ಎಲ್ಲರೂ ಎಲ್ಲರಿಗೂ ಇಷ್ಟವಾಗುವಂತೆ ಇರೋದು ಅಸಾಧ್ಯ. 

78
ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾ ಪೇಜಸ್

ಯಾರು ಯಾರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಆಗುತ್ತಾರೋ, ಅವರೆಲ್ಲರ ಫ್ಯಾನ್ಸ್ ಪೇಜ್ ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಇರುತ್ತವೆ. ಅಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಸದಾ ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೀಗೆ ನಡೆಯುವಾಗ ಕಿಚ್ಚ ನಡೆದುಕೊಂಡ ರೀತಿ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. 

88
ಲಿಂಕ್​ ಇಲ್ಲಿದೆ ನೋಡಿ!

ಈ ಕೆಳಗಿನ ಲಿಂಕ್​ನಲ್ಲಿ ಸುದೀಪ್​  ವಾರದ ಪಂಚಾಯತಿ ಬಗ್ಗೆ ಜನರು ಏನು ಕಮೆಂಟ್ ಮಾಡುತ್ತಿದ್ದಾರೆಂದು ಇಲ್ಲಿ ನೋಡಬಹುದು.

Bigg Boss: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ? ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

Read more Photos on
click me!

Recommended Stories