Bigg boss ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ, ಗಿಲ್ಲಿಗೆ ಸೊಂಟನೇ ಇಲ್ಲ ಎಂದ ಜಾಹ್ನವಿ: ಸುದೀಪ್​ ಕಕ್ಕಾಬಿಕ್ಕಿ!

Published : Nov 16, 2025, 05:00 PM IST

ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಹೊರಹೋಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ, ಮನೆಯಲ್ಲಿ ಪುರುಷ ಸ್ಪರ್ಧಿಗಳಿಗಿಂತ ಮಹಿಳೆಯರೇ ಸ್ಟ್ರಾಂಗ್ ಎಂಬ ಚರ್ಚೆಯ ವೇಳೆ ಜಾಹ್ನವಿ ನೀಡಿದ ಹೇಳಿಕೆಯೊಂದು ಸುದೀಪ್ ಅವರನ್ನೇ ಕಕ್ಕಾಬಿಕ್ಕಿಯಾಗಿಸಿದೆ.

PREV
16
ಮನೆಯಿಂದ ಯಾರು ಹೊರಕ್ಕೆ?

ಬಿಗ್​ಬಾಸ್​ (Bigg boss) ಮನೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬರು ಮನೆಯಿಂದ ಹೊರಕ್ಕೆ ಹೋಗುತ್ತಿದ್ದಾರೆ. ರಿಷಾ, ರಘು, ಕಾಕ್ರೋಚ್‌ ಸುಧಿ ಹಾಗೂ ಜಾಹ್ನವಿ ಇವರಲ್ಲಿ ಒಬ್ಬರು ಹೋಗಲಿದ್ದಾರೆ ಎನ್ನುವ ಪ್ರೊಮೋ ವಾಹಿನಿ ಇದಾಗಲೇ ಹಂಚಿಕೊಂಡಿದೆ. ರಘು ಕ್ಯಾಪ್ಟನ್​ ಆಗಿದ್ದಾರೆ, ಜಾಹ್ನವಿ ಕೂಡ ಹೋಗುವ ಹಾಗೆ ಕಾಣಿಸುವುದಿಲ್ಲ. ಇನ್ನು ಇರುವುದು ರಿಷಾ ಮತ್ತು ಸುಧಿ ಅಷ್ಟೇ.

26
ಮಹಿಳೆಯರೇ ಸ್ಟ್ರಾಂಗ್​

ಇದರ ನಡುವೆಯೇ ಸುದೀಪ್​ ಅವರು ವೀಕೆಂಡ್​ನಲ್ಲಿ ಕಾಣಿಸಿಕೊಂಡು ಬಿಗ್​ಬಾಸ್​​ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್​ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾರೆ.

36
ಜಾಹ್ನವಿ ಶಾಕಿಂಗ್​ ಹೇಳಿಕೆ

ಅದಕ್ಕೆ ಜಾಹ್ನವಿ ಅವರು ಶಾಕಿಂಗ್​ ಎನ್ನುವಂಥ ಸ್ಟೇಟ್​ಮೆಂಟ್​ ಕೊಟ್ಟಿದ್ದು, ಇದನ್ನು ಕೇಳಿ ಸುದೀಪ್​ ಕಕ್ಕಾಬಿಕ್ಕಿಯಾಗಿದ್ದಾರೆ. ಏನ್ರೀ ಹೀಗೆ ಹೇಳ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ.

46
ಸುದೀಪ್​ ಕಕ್ಕಾಬಿಕ್ಕಿ

ಜಾಹ್ನವಿ ಅವರು, ನೀವು ಹೇಳ್ತಿರೋದು ನಿಜ ಸರ್​. ಇಲ್ಲಿ ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್​ ಶಾಕ್​ ಆದರು. ಇದ್ಯಾವ ರೀತಿ ಸ್ಟೇಟ್​ಮೆಂಟ್ರಿ ಎಂದು ಪ್ರಶ್ನಿಸಿದ್ರು.

56
ಖಡಕ್​ ಇಲ್ಲ ಸರ್​

ಅಂದ್ರೆ ಯಾರೂ ಖಡಕ್​ ಇಲ್ಲ ಸರ್​ ಎಂದು ಜಾಹ್ನವಿ ಹೇಳಿದ್ರು. ಅಂದ್ರೆ ಸರ್​ ಅವರೆಲ್ಲಾ ಸತ್ತ ಹೆಣದ ಥರ ಇರ್ತಾರೆ. ಈಗ ಸೂರಜ್​ ತೆಗೆದುಕೊಳ್ಳಿ, ಎನರ್ಜಿನೇ ಇರಲ್ಲ. ಎಲ್ಲವನ್ನೂ ಹಾಂ ಹೀ ಎಂದು ಮಾತನಾಡುತ್ತಾರೆ ಎಂದಿದ್ದಾರೆ.

66
ಗಿಲ್ಲಿಗೆ ಸೊಂಟ ಇಲ್ಲ!

ಹಾಗಿದ್ರೆ ಗಿಲ್ಲಿ ನಟ ಎಂದು ಪ್ರಶ್ನಿಸಿದ್ದಾರೆ ಸುದೀಪ್​. ಅದಕ್ಕೆ ಜಾಹ್ನವಿ ಅವನಿಗೆ ಸೊಂಟನೇ ಇಲ್ಲ ಸರ್​ ಎಂದಾಗ, ಸುದೀಪ್​ ಕುಳಿತುಬಿಟ್ಟರು. ಗಿಲ್ಲಿ ಶಾಕ್​ ಆಗಿ ನೋಡಿದ್ರು!

Read more Photos on
click me!

Recommended Stories