ಶೀಘ್ರದಲ್ಲಿ ಅಂತ್ಯ ಕಾಣಲಿದೆ ಕಲರ್ಸ್ ಕನ್ನಡದ ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮೀ ಬಾರಮ್ಮ'…!

Published : Mar 26, 2025, 10:57 AM ISTUpdated : Mar 26, 2025, 11:38 AM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಶೀಘ್ರದಲ್ಲೇ ಮುಕ್ತಾಯ ಕಾಣಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೀರಿಯಲ್ ತಂಡದಿಂದ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. 

PREV
18
ಶೀಘ್ರದಲ್ಲಿ ಅಂತ್ಯ ಕಾಣಲಿದೆ ಕಲರ್ಸ್ ಕನ್ನಡದ ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮೀ ಬಾರಮ್ಮ'…!

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾದ ಅಕ್ಕ ತಂಗಿಯರ ಕಥೆ ಭಾಗ್ಯ ಲಕ್ಷ್ಮಿ. ಆದರೆ ಇಬ್ಬರೂ ಅಕ್ಕ ತಂಗಿಯರ ಕಥೆ ವಿಭಿನ್ನವಾಗಿರೋದರಿಂದ ನಿರ್ದೇಶಕರು, ಒಂದೇ ಕಥೆಯನ್ನು ಎರಡು ಭಾಗ ಮಾಡಿ, ಎರಡು ಧಾರಾವಾಹಿಗಳಾಗಿ ಮಾಡುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. 
 

28

ಅಕ್ಕನ ಕಥೆ ಭಾಗ್ಯ ಲಕ್ಷ್ಮೀ (Bhagyalakshmi) ಹೆಸರಲ್ಲಿ ಪ್ರಸಾರವಾದರೆ, ತಂಗಿಯ ಕಥೆ ಲಕ್ಷ್ಮೀ ಬಾರಮ್ಮ (Lakshmi Baramma) ಹೆಸರಿನಲ್ಲಿ ಪ್ರಸಾರ ಕಾಣುತ್ತಿತ್ತು. ಲಕ್ಷ್ಮೀ ಬಾರಮ್ಮ ಧಾರಾವಾಹಿ, ವಿಭಿನ್ನ ತಿರುವುಗಳ ಮೂಲಕ ಜನರನ್ನು ಆಕರ್ಷಿಸುವಲ್ಲಿ ಗೆದ್ದಿತ್ತು, ಅಷ್ಟೇ ಅಲ್ಲ, ಇವತ್ತಿಗೂ ಕೂಡ ಪ್ರತಿ ಎಪಿಸೋಡ್ ಗಳಲ್ಲೂ ಒಂದೊಂದು ತಿರುವು ಕಾಣಿಸುತ್ತಿದೆ. 
 

38

ಮಗನ ಮೇಲಿನ ಹುಚ್ಚು ಪ್ರೀತಿಯಿಂದ ತಾಯಿಯಾಗಿರುವ ಕಾವೇರಿ, ವೈಷ್ಣವ್ ಜೀವನದಲ್ಲಿ ಏನೆಲ್ಲಾ ಆಟ ಆಡಿಸುತ್ತಾಳೆ. ವೈಷ್ಣವ್ ಜೀವನಕ್ಕೆ ಬಂದ ಹುಡುಗಿಯರ ಕಥೆ ಏನಾಗುತ್ತದೆ ಅನ್ನೋದು ಕಥೆಯ ಹೈಲೈಟ್. ತನ್ನ ಮಗನನ್ನು ತನ್ನ ಕಂಟ್ರೋಲ್ ನಲ್ಲಿ ಇಡಲು ಯಾರನ್ನು ಕೊಲ್ಲೋದಕ್ಕೂ ಹೆದರದಂತಹ ಖತರ್ನಾಕ್ ವಿಲನ್ ಕಾವೇರಿ. 
 

48

ಕೀರ್ತಿಯನ್ನು ದೂರ ಮಾಡಲು ಲಕ್ಷ್ಮೀಯನ್ನು ಮದುವೆ ಮಾಡಿಸಿ, ಮಗ ಲಕ್ಷ್ಮೀ ಮಾತಿಗೆ ಮರುಳಾಗಲು ಆರಂಭಿಸಿದಾಗ, ಲಕ್ಷ್ಮೀಯನ್ನೇ ಮನೆಯಿಂದ ದೂರ ಮಾಡಿ, ಮತ್ತೆ ಕೀರ್ತಿಯನ್ನು ಮದುವೆ ಮಾಡಿಸಲು ಪ್ಲ್ಯಾನ್ ಮಾಡಿ, ಕೊನೆಗೆ ಕೀರ್ತಿಗೆ ಕಾವೇರಿಯ ಸತ್ಯ ಗೊತ್ತಾದಾಗ, ಆಕೆಯನ್ನೇ ಬೆಟ್ಟದ ಮೇಲಿಂದ ನೂಕಿ ಕೊಲ್ಲಲು ಪ್ರಯತ್ನಿಸಿದ್ದಳು ಕಾವೇರಿ. 

58

ಅಷ್ಟೇ ಅಲ್ಲ ಲಕ್ಷ್ಮೀಗೆ ಹುಚ್ಚಿಯ ಪಟ್ಟ ಕಟ್ಟಿ ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ, ಅಲ್ಲಿ ಅವಳು ಸಾಯುವಂತೆ ಮಾಡಿದ್ದಳು ಕಾವೇರಿ. ಕೊನೆಗೆ ಲಕ್ಷ್ಮೀ ಆಸ್ಪತ್ರೆಯಿಂದ ಬಂದು, ಕಾವೇರಿಗೆ ಶಿಕ್ಷೆ ಆಗುವಂತೆ ಮಾಡಿದ್ದಳು. ಜೈಲಿನಿಂದ ಹೊರ ಬಂದ ಕಾವೇರಿ ಲಕ್ಷ್ಮೀಯನ್ನೆ ಮನೆಯಿಂದ ಹೊರ ಹಾಕಿ ಇದೀಗ ಮಗನಿಗೆ ಬೇರೊಂದು ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. 
 

68

ಸದ್ಯ ವೈಷ್ಣವ್ ಮದುವೆಗಯಾಗಲು ಹುಡುಗಿ ಬಂದಿರುವ ಪ್ರೊಮೋ ಪ್ರಸಾರವಾಗಿದೆ. ಇದಿಷ್ಟು ನಡೆಯುತ್ತಿರುವ ಹೊತ್ತಿಗೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ಶೀಘ್ರದಲ್ಲೇ ಮುಗಿಯಲಿದೆ  (Lakshmi Baramma ending soon) ಎನ್ನುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಕುರಿತು ಸೀರಿಯಲ್ ತಂಡದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ. 
 

78

ಇತ್ತೀಚೆಗೆ ಸೀರಿಯಲ್ ತಂಡದವರೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಂತಿಮ ಹಂತದ ಶೂಟಿಂಗ್ ಎನ್ನುತ್ತಾ, ಸೀರಿಯಲ್ ತಂಡದ ಫೋಟೊವನ್ನು ಸಹ ಶೇರ್ ಮಾಡಿದ್ದು, ಕೆಲವೇ ಕ್ಷಣದಲ್ಲಿ ಫೋಟೊ ಡಿಲಿಟ್ ಆಗಿದೆ. ಇದು ಕೂಡ ಸೀರಿಯಲ್ ಮುಗಿಯಲಿದೆಯೇ ಎನ್ನುವ ಅನುಮಾನ ಮೂಡಿಸಿದೆ. 
 

88

ಸೀರಿಯಲ್ ತಂಡ ಸೀರಿಯಲ್ ಮುಗಿಯುವ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಅಂದ್ರೆ, ಲಕ್ಷ್ಮೀ ಬಾರಮ್ಮ ಮತ್ತೆ, ಮೊದಲಿನಂತೆ ಭಾಗ್ಯ ಲಕ್ಷ್ಮೀ ಸೀರಿಯಲ್ ಜೊತೆಗೆ ಒಂದಾಗಲಿದ್ಯಾ ಎನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ಕಾದು ನೋಡಬೇಕು. 
 

Read more Photos on
click me!

Recommended Stories