ಯಜಮಾನ ಧಾರಾವಾಹಿಯಲ್ಲಿ 1 ಕೋಟಿ ರೂಪಾಯಿಗೆ ಒಂದು ತಿಂಗಳ ಅವಧಿಗೆ ಪುರುಷರನ್ನು ದ್ವೇಷ ಮಾಡುವ ಶ್ರೀಮಂತ ಕುಟುಂಬದ ಯುವತಿ ಝಾನ್ಸಿಯನ್ನು ಮದುವೆ ಮಾಡಿಕೊಂಡಿರುವ ರಾಘವೇಂದ್ರ ಇದೀಗ ತನ್ನ ತಂಗಿಗಾಗಿ ಭಾಮೈದನ ತಂಗಿ ವಿಶೃಷ ಚೇತನಳಾಗಿರುವ ಅನಿತಾಳನ್ನು 2ನೇ ಮದುವೆ ಮಾಡಿಕೊಂಡಿದ್ದಾನೆ.
ಯಜಮಾನ ಧಾರಾವಾಹಿಯಲ್ಲಿ ಅಂಗವಿಕಲ ಪಾತ್ರ ಮಾಡಿರುವ ಅನಿತಾ ನಟಿ ವರ್ಷಿತಾ ರಾಮ್ ಅವರು ಧಾರಾವಾಹಿ ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿವೆ. ಇದರಲ್ಲಿ ಎಲ್ಲ ಧಾರಾವಾಹಿ ನಟರೊಂದಿಗೆ ಪೋಸ್ ಕೊಟ್ಟಿದ್ದಾಳೆ.
ತಂದೆ-ತಾಯಿ ಇಲ್ಲದ ರಾಘವೇಂದ್ರ ಅವರ ಚಿಕ್ಕಮ್ಮನ ಮನೆಯಲ್ಲಿದ್ದು, ಅವರು ತನ್ನನ್ನು ಕುಟುಂಬ ಸದಸ್ಯನಾಗಿ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಭಾರೀ ಕಷ್ಟಪಡುತ್ತಿದ್ದಾನೆ. ಇದೇ ವೇಳೆ ಒಂದು ತಿಂಗಳಿಕೆ 1 ಕೋಟಿ ಹಣಕ್ಕೆ ಕಾಂಟ್ರಾಕ್ಟ್ ಮದುವೆಯಾಗಿ ತಂಗಿಯ ಮದುವೆಗೆ ಬಂದ ಹಣವನ್ನು ಖರ್ಚು ಮಾಡಿದ್ದಾನೆ.
ಇದೀಗ ತಂಗಿ ಪಲ್ಲವಿಯನ್ನು ಮಿಥುನ್‌ಗೆ ಮದುವೆ ಮಾಡಿಕೊಟ್ಟರೂ, ಮಿಥುನ್‌ನ ತಂಗಿ ಅನಿತಾಳನ್ನು ಮದುವೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಝಾನ್ಸಿ ಜೊತೆಗೆ ರಾಘವೇಂದ್ರ ಜೀವನ ಮಾಡಬೇಕು ಎಂಬುದು ಬಹುತೇಕ ವೀಕ್ಷಕರ ಅಭಿಲಾಷೆಯಾಗಿದೆ.
ರಾಘವೇಂದ್ರ ಕಾಂಟ್ರ್ಯಾಕ್ಟ್ ಮದುವೆ ಮುಗಿದ ತಕ್ಷಣ ಅನಿತಾಳನ್ನು ಮದುವೆಯಾಗಿ ತಂಗಿಗೆ ಉತ್ತಮ ಜೀವನ ರೂಪಿಸಿಕೊಡಬೇಕು ಎಂದು ಭಾರೀ ಕಷ್ಟಪಡುತ್ತಿದ್ದಾನೆ. ಅದರಂತೆ ಇದೀಗ ರಾಘವೇಂದ್ರ ಮಾತು ಕೊಟ್ಟಂತೆ ಅನಿತಾಳನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಮುಂದೇನಾಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ರಾಘವೇಂದ್ರ-ಅನಿತಾ ಮದುವೆಗೂ ಮುನ್ನವೇ ಅವರ ಮದುವೆ ಆಗಿಯೇ ಹೋಯ್ತು ಎನ್ನುವಂತಹ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದರೆ, ಈ ಫೋಟೋಗಳು ಪಲ್ಲವಿ ಮತ್ತು ಮಿಥುನ್ ಮದುವೆಯ ಸಮಯದ ಫೋಟೋಗಳಾಗಿವೆ. ಕಳೆದೊಂದು ದಿನದ ಹಿಂದೆ ಈ ಫೋಟೋ ಹಂಚಿಕೊಂಡಿದ್ದು ವೈರಲ್ ಆಗಿವೆ.
ರಾಘವೇಂದ್ರ ಕಾಂಟ್ರ್ಯಾಕ್ಟ್ ಮದುವೆ ಮಾಡಿಕೊಂಡಿರುವ ಝಾನ್ಸಿಯೊಂದಿಗೆ ಅನಿತಾ ಪೋಸ್ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ರಾಘವೇಂದ್ರನಿಗೆ ನೀವಿಬ್ಬರೂ ಸೂಪರ್ ಜೋಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಘವೇಂದ್ರನಿಗೆ ನೀವೇ ಸೂಪರ್ ಜೋಡಿ:
ಧಾರಾವಾಹಿಯಲ್ಲಿ ವಿಶೇಷ ಚೇತನಳಾಗಿ ಕಾಣಿಸಿಕೊಂಡಿರುವ ಅನಿತಾ ಅಲಿಯಾಸ್ ವರ್ಷಿತಾ ಮುತ್ತಂಥ ಜೋಡಿ ನಮ್ಮದು ಎಂಬ ಹಾಡಿಗೆ ರೀಲ್ಸ್ ಕೂಡ ಮಾಡಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಹಾಗೂ ಫೋಟೋಗೆ ನಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು 'ಝಾನ್ಸಿ ಆನ್ ದಿ ವೇ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಾಘವೇಂದ್ರ ಝಾನ್ಸಿಗೆ ಸೂಪರ್ ಜೋಡಿ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಮತ್ತೊಬ್ಬರು ವರ್ಷಿತಾನೇ ಧಾರಾವಾಹಿಗೆ ಹೀರೋಯಿನ್ ಆಗಬೇಕಿತ್ತು. ಮಧುಶ್ರೀ ಬೈರಪ್ಪ (ಝಾನ್ಸಿ) ಹೀರೋಯಿನ್ ಆಗಬಾರದಿತ್ತು ಎಂದು ಕಾಮೆಂಟ್ ಮಾಡಿ, ಅನಿತಾಗೆ ಸಪೋರ್ಟ್ ಮಾಡಿದ್ದಾರೆ. ಆದರೆ, ಅನಿತಾಗೆ ಅಂಗವಿಕಲ ಪಾತ್ರದಿಂದ ಮುಕ್ತಿ ಸಿಗುವ ಅವಕಾಶವನ್ನು ನಿರ್ದೇಶಕರು ಕೊಟ್ಟರೂ ಆಶ್ಚರ್ಯಪಡಬೇಕಿಲ್ಲ.