ಆಟದ ವೇಳೆ ಕುಸಿದು ಬಿದ್ದ Bigg Boss Mallamma- ಆಸ್ಪತ್ರೆಗೆ ಶಿಫ್ಟ್​? ಏನಿದು ಶಾಕಿಂಗ್​ ವೈರಲ್ ವಿಡಿಯೋ ಅಸಲಿಯತ್ತು?

Published : Oct 31, 2025, 02:07 PM ISTUpdated : Oct 31, 2025, 02:16 PM IST

ಬಿಗ್​ಬಾಸ್ ಮನೆಯಲ್ಲಿ ಆಟವಾಡುವಾಗ ಸ್ಪರ್ಧಿ ಮಲ್ಲಮ್ಮ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್​ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಏನು?

PREV
17
ಕುಸಿದು ಬಿದ್ದ ಮಲ್ಲಮ್ಮ?

ಬಿಗ್​ಬಾಸ್​ (Bigg Boss) ಮನೆಯಿಂದ ಶಾಕಿಂಗ್​ ವರದಿಯೊಂದು ಹೊರಬಂದಿದೆ. ಅದೇನೆಂದರೆ ಆಟವಾಡುವ ಸಮಯದಲ್ಲಿ ಸ್ಪರ್ಧಿ ಮಲ್ಲಮ್ಮ ಅವರು ಕುಸಿದು ಬಿದ್ದಿರುವುದಾಗಿ ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ ಎನ್ನಲಾಗುತ್ತಿದೆ.

27
ಶಾಕಿಂಗ್​ ವಿಡಿಯೋ ವೈರಲ್​

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಇದನ್ನು ನೋಡಬಹುದಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್​ನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿರುವ ಸ್ಪರ್ಧಿಗಳೆಲ್ಲಾ ಶಾಕ್​ ಆಗಿ ನೋಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

37
ಹೊರಕ್ಕೆ ಬಂದಿದ್ದರು ಎನ್ನೋ ಸುದ್ದಿ

ಎರಡು ದಿನಗಳ ಹಿಂದೆ ಮಲ್ಲಮ್ಮ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದರು ಎಂದು ಸುದ್ದಿಯಾಗಿತ್ತು. ಸೊಸೆ ಡೆಲವರಿ ಆದ ಕಾರಣ ಬಂದಿರುವುದಾಗಿ ಕೆಲವರು ಹೇಳಿದ್ದರು. ಆದರೆ, ಅವರು ಹೊರಕ್ಕೆ ಬಂದಿಲ್ಲ ಎಂದು ಅವರ ಅಧಿಕೃತ ಇನ್​ಸ್ಟಾ ಖಾತೆಯಿಂದಲೇ ವಿವರಣೆ ಬಂದಿತ್ತು.

47
ಗಾಳಿ ಸುದ್ದಿ ಅಲ್ಲವಾಗಿತ್ತಾ?

ವಾಹಿನಿಯಾಗಲೀ ಅಥವಾ ಯಾವುದೇ ಅಧಿಕೃತ ಮಾಹಿತಿ ಈ ಬಗ್ಗೆ ಬಹಿರಂಗಗೊಂಡಿರಲಿಲ್ಲ. ಅವರು ಎಲಿಮಿನೇಟ್​ ಆಗುವ ಸಾಧ್ಯತೆ ಸದ್ಯಕ್ಕಂತಲೂ ಇಲ್ಲದ ಹಿನ್ನೆಲೆಯಲ್ಲಿ, ಇದು ಊಹಾಪೋಹದ ಗಾಳಿ ಸುದ್ದಿ ಎಂದೇ ಹೇಳಲಾಗಿತ್ತು.

57
ಅಧಿಕೃತ ಮಾಹಿತಿ ಇಲ್ಲ

 ಇದರ ಬೆನ್ನಲ್ಲೇ ಇಂಥದ್ದೊಂದು ವಿಡಿಯೋ ಹರಿದಾಡುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಏನು ಎನ್ನುವುದು ಅಧಿಕೃತವಾಗಿ ಹೊರಬಂದಿಲ್ಲ. ಈ ವಿಡಿಯೋ ಹೇಗೆ ಔಟ್​ ಆಗಿದೆ ಎನ್ನುವ ಮಾಹಿತಿಯನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿಲ್ಲ.  

67
ಶೀಘ್ರ ಚೇತರಿಸಿಕೊಳ್ಳಲಿ

ಒಟ್ಟಿನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿ ಎನ್ನಿಸಿಕೊಂಡಿರುವ ಮಲ್ಲಮ್ಮನವರಿಗೆ ಈ ರೀತಿ ಆಗಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. 

77
ಇದರ ಅಸಲಿಯತ್ತೇನು?

ಆದರೆ ಇದು ನಿಜವಾದ ವಿಡಿಯೋ ಅಲ್ಲ, ಬದಲಿಗೆ ಬಿಗ್​ಬಾಸ್​​ ಮನೆಯಲ್ಲಿ ಮಾಡಿರುವ ಸ್ಕಿಟ್​ ಎಂದು ಹೇಳಲಾಗುತ್ತಿದೆ. ಇದನ್ನೇ ಅಸಲಿ ವಿಷಯ ಎನ್ನುವ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದೂ ಹೇಳಲಾಗ್ತಿದೆ. ಆದರೆ ಅಸಲಿಯತ್ತು ಏನೆಂದು ಇನ್ನಷ್ಟೇ ತಿಳಿಯಬೇಕಿದೆ.

Read more Photos on
click me!

Recommended Stories