ಬಿಗ್ಬಾಸ್ 12 ಮನೆಯಲ್ಲಿ ನಡೆಯುತ್ತಿರುವ ಫೆಸ್ಟಿವಲ್ನಲ್ಲಿ, ಸೂರಜ್ ಜೊತೆ ಕಾವ್ಯಾ ಡಾನ್ಸ್ ಮಾಡಿದ ನಂತರ ಇದೀಗ ಗಿಲ್ಲಿ ನಟನ ಜೊತೆಗೂ ಕಾವ್ಯಾ ಹೆಜ್ಜೆ ಹಾಕಿದ್ದಾರೆ. ಈ ಹೊಸ ಜೋಡಿಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸೂರಜ್-ರಾಶಿಕಾ ಲವ್ಸ್ಟೋರಿ ಬಗ್ಗೆ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಬಿಗ್ಬಾಸ್ 12 (Bigg Boss 12) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಶೈವ ಹವಾ ಜೋರಾಗಿ ನಡೆಯುತ್ತಿರುವ ನಡುವೆಯೇ, ಬಿಗ್ಬಾಸ್ ಫೆಸ್ಟಿವಲ್ ಶುರುವಾಗಿದೆ. ಇದರಲ್ಲಿ ಸ್ಪರ್ಧಿಗಳು ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.
26
ಪ್ರೀತಿಯಲ್ಲಿ ಇರೋ ಸುಖ ಹಾಡಿಗೆ ಸ್ಟೆಪ್
ಇದಾಗಲೇ ಕಾವ್ಯಾ ಶೈವ ಮತ್ತು ಸೂರಜ್ ಸಿಂಗ್ (Bigg Boss Suraj Singh) ಪ್ರೀತಿಯಲ್ಲಿ ಇರೋ ಸುಖ ಹಾಡಿಗೆ ಸ್ಟೆಪ್ ಹಾಕಿದ್ರು. ಅತ್ತ ಸೂರಜ್ ಕಾವ್ಯಾ ಜೊತೆ ರೊಮಾನ್ಸ್ ಮಾಡ್ತಿರೋದನ್ನು ಸೂರಜ್ ಮೇಲೆ ಪ್ರಾಣ ಇಟ್ಟುಕೊಂಡಿರೋ ರಾಶಿಕಾ ಮುಖ ನೋಡಲು ಆಗ್ತಿರಲಿಲ್ಲ. ಅದೇ ವೇಳೆ ಕಾವ್ಯಾಳನ್ನು ನೋಡಿ ಗಿಲ್ಲಿ ನಟ ಕೂಡ ಸಪ್ಪಗಾದ ಹಾಗೆ ತೋರಿಸಲಾಗಿತ್ತು.
36
ಗಿಲ್ಲಿ-ಕಾವ್ಯಾ ರೊಮಾನ್ಸ್
ಇದೀಗ ಗಿಲ್ಲಿ ನಟನಿಗೆ ಬೇಸರ ಮಾಡಬಾರದು ಎನ್ನುವ ಕಾರಣಕ್ಕೆ ಇದೇ ಹಾಡಿಗೆ ಗಿಲ್ಲಿ ನಟನಿಗೂ ಕಾವ್ಯಾ ಜೊತೆ ಸ್ಟೆಪ್ ಹಾಕಲು ಬಿಗ್ಬಾಸ್ ಅವಕಾಶ ಕಲ್ಪಿಸಿದೆ.
ಬಿಗ್ಬಾಸ್ ಫೆಸ್ಟ್ನಲ್ಲಿ (Bigg Boss Fest) ಭಾಗ್ಯಲಕ್ಷ್ಮಿಯ ಭಾಗ್ಯ ಅರ್ಥಾತ್ ಸುಷ್ಮಾ ಕೆ. ರಾವ್ ಮತ್ತು ನಟಿ ಅದಿತಿ ಆಚಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿರುವ ಸ್ಪರ್ಧಿಗಳಿಗೆ ಅವರು ಜಡ್ಜ್ ಮಾಡುತ್ತಿದ್ದಾರೆ.
56
ರಾಶಿಕಾ ರಿಲ್ಯಾಕ್ಸ್
ಇನ್ನು ಗಿಲ್ಲಿ ಮತ್ತು ಕಾವ್ಯಾಳ ಜೋಡಿಯನ್ನು ನೋಡಿ ರಾಶಿಕಾ ಕೂಡ ಸ್ವಲ್ಪ ರಿಲ್ಯಾಕ್ಸ್ ಆದ ಹಾಗಿದೆ. ನಿನ್ನೆ ಇಂಗು ತಿಂದ ಮಂಗನಂತಾಗಿತ್ತು ಮುಖ ಎಂದು ಹಲವರು ರಾಶಿಕಾ ಕಾಲೆಳೆದಿದ್ದರು. ಇವತ್ತು ಇವರಿಬ್ಬರ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
66
ಸೂರಜ್-ರಾಶಿಕಾ ಲವ್ಸ್ಟೋರಿ
ಅಷ್ಟಕ್ಕೂ ಸೂರಜ್ ಮತ್ತು ರಾಶಿಕಾ ಲವ್ಸ್ಟೋರಿ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಸೂರಜ್ ಅವರು ರಾಶಿಕಾ ಶೆಟ್ಟಿ ಜೊತೆ ಸೇರಿ ಆಟವನ್ನು ಹಾಳು ಮಾಡಿಕೊಂಡರು ಎಂದು ವೀಕ್ಷಕರು ಹೇಳುತ್ತಿದ್ದಾರೆ. ರಾಶಿಕಾ ಆಟದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ.