Bhagyalakshmi Serial​ ಮುಕ್ತಾಯ? ಭಾಗ್ಯನ ಒಲವು ಯಾರ ಕಡೆ? ಧಾರಾವಾಹಿ ತಂಡದ ವಿಡಿಯೋ

Published : Feb 06, 2026, 01:34 PM IST

ಮೂರೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತಿಮ ಘಟ್ಟ ತಲುಪಿದೆ. ಆದಿಯ ಪ್ರೀತಿಯನ್ನು ಒಪ್ಪಿಕೊಂಡಿರುವ ಭಾಗ್ಯಳ ಮುಂದೆ, ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳಿದ್ದಾನೆ. ಭಾಗ್ಯ ಯಾರನ್ನು ಆಯ್ಕೆ ಮಾಡುತ್ತಾಳೆ ಮತ್ತು ಧಾರಾವಾಹಿ ಮುಕ್ತಾಯವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

PREV
16
ಮೂರೂವರೆ ವರ್ಷಗಳ ಪಯಣ

ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಆರಂಭಗೊಂಡು ಮೂರೂವರೆ ವರ್ಷಗಳಾಗುತ್ತಾ ಬಂದಿದೆ. ಅಕ್ಟೋಬರ್ 10, 2022ರಲ್ಲಿ ಈ ಸೀರಿಯಲ್​ ಆರಂಭವಾಗಿತ್ತು. ಇದಾಗಲೇ  ಸಾವಿರಕ್ಕೂ ಅಧಿಕ ಎಪಿಸೋಡ್​ಗಳನ್ನು ಸೀರಿಯಲ್​ ಕಂಡಿದೆ.

26
ಬದಲಾಗದ ಲೀಡ್​ ರೋಲ್​ಗಳು

ಒಂದು ಸೀರಿಯಲ್​ ಮೂರ್ನಾಲ್ಕು ವರ್ಷಗಳವರೆಗೆ ನಡೆಯುವುದು ಎಂದರೆ ಸುಲಭದ ಮಾತಲ್ಲ. ಎಷ್ಟೋ ಸೀರಿಯಲ್​ಗಳಲ್ಲಿ ಲೀಡ್​ ಪಾತ್ರಗಳೇ ಬದಲಾಗುವುದು ಉಂಟು. ಆದರೆ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಮುಖ್ಯ ಪಾತ್ರಧಾರಿಗಳು ಇಷ್ಟೂ ವರ್ಷ ಅವರೇ ಮುಂದುವರೆದಿರುವುದು ವಿಶೇಷ.

36
ಸೀರಿಯಲ್​ ಅಂತಿಮ ಹಂತ

ಇದೀಗ ಸೀರಿಯಲ್​ ಅಂತಿಮ ಹಂತಕ್ಕೆ ಬಂದಂತಿದೆ. ಇದಾಗಲೇ ಭಾಗ್ಯ ತನಗೆ ಆದಿಯ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದಾಳೆ. ಆದಿ ದೇಶ ಬಿಟ್ಟು ಹೋಗದಂತೆ ತಡೆದಿದ್ದಾಳೆ. ಗಂಡ ಎಂಥವನಾದರೂ ಪರವಾಗಿಲ್ಲ, ಎಷ್ಟೇ ಕಟುಕನಾದರೂ ಓಕೆ, ಅವನ ಜೊತೆಯಲ್ಲಿಯೇ ಸಂಸಾರ ಮಾಡಬೇಕು ಎನ್ನುವ ಅಮ್ಮ ಸುನಂದಾ ಮಾತನ್ನು ಧಿಕ್ಕರಿಸಿರುವ ಭಾಗ್ಯ ಆದಿಯ ಕಡೆ ಒಲಿದಿದ್ದಾಳೆ.

46
ಕಾಲಿಗೆ ಬಿದ್ದ ತಾಂಡವ್​

ಆದರೆ, ಇದೇ ವೇಳೆ ಟ್ವಿಸ್ಟ್​ ಕೂಡ ಎದುರಾಗಿದೆ. ಇನ್ನೇನು ಆದಿ-ಭಾಗ್ಯ ಒಂದಾಗಬೇಕು ಎನ್ನುವಷ್ಟರಲ್ಲಿಯೇ ತನ್ನ ತಪ್ಪಿನ ಅರಿವಾಗಿರುವ ತಾಂಡವ್​ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.

56
ಅಂತ್ಯ ಏನು?

ಭಾಗ್ಯ ಮೊದಲಿನಂತೆಯೇ ಅತಿ ಒಳ್ಳೆಯ ಗೃಹಿಣಿಯಾಗಿ ಅಮ್ಮನ ಮಾತಿನಂತೆ ತಾಂಡವ್​ನ ಬಳಿ ಹೋಗ್ತಾಳಾ ಅಥವಾ ತನ್ನ ಪಾಲಿಗೆ ದೇವರಾಗಿರೋ ಆದಿಯ ಬಳಿ ಹೋಗ್ತಾಳಾ ಎನ್ನುವ ಕುತೂಹಲ ಬಾಕಿ ಇದೆ. ಸದ್ಯದ ಸ್ಥಿತಿ ನೋಡಿದರೆ, ಆದಿಯನ್ನು ಆಕೆ ಮದುವೆಯಾಗುತ್ತಾಳೆ. ಶ್ರೇಷ್ಠಾಗೆ ಬುದ್ಧಿ ಕಲಿಸಿ ತಾಂಡವ್​ ಜೊತೆ ಸಂಸಾರ ಮಾಡುವಂತೆ ಮಾಡುತ್ತಾಳೆ ಎಂದೇ ಅನ್ನಿಸುತ್ತಿದೆ.

66
ಸೀರಿಯಲ್​ ಮುಕ್ತಾಯ?

ಒಟ್ಟಿನಲ್ಲಿ, ಭಾಗ್ಯಲಕ್ಷ್ಮಿ ಸೀರಿಯಲ್​ ಮುಗಿಯುವ ಹಂತದಲ್ಲಿ ಇದೆ ಎನ್ನುವಂತೆ ಇದೀಗ ವಿಡಿಯೋ ಒಂದು ಶೇರ್​ ಆಗಿದೆ. mallesh_makeup_studio ಈ ವಿಡಿಯೋ ಶೇರ್​ ಮಾಡಿದೆ. ಒಂದು ಸಾವಿರದ ಎಪಿಸೋಡ್​ ಆದ ಸಂದರ್ಭದಲ್ಲಿ ಅದರ ಖುಷಿಗಾಗಿ ತೆಗೆದ ವಿಡಿಯೋ ಇದಾಗಿದೆ. ಆದರೆ  ಸೀರಿಯಲ್​ ಮುಕ್ತಾಯ ಹಂತದಲ್ಲಿ ಇರುವ ರೀತಿಯಲ್ಲಿ ಈ ವಿಡಿಯೋ ಕಾಣಿಸುತ್ತಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories