Bigg Boss ಸ್ಪರ್ಧಿಗಳ ಸಮಾಗಮ; ವೀಕ್ಷಕರಿಗೆ ಗಿಲ್ಲಿ ನಟ, ಕಾವ್ಯ ಶೈವ ಶುಭ ಸುದ್ದಿ ಕೊಟ್ಟರಾ?

Published : Feb 06, 2026, 12:34 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದು, ಸ್ಪರ್ಧಿಗಳೆಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಹೀಗಿರುವಾಗ ಇವರೆಲ್ಲರೂ ಒಟ್ಟಿಗೆ ಸೇರಿರುವ ಫೋಟೋಗಳು ವೈರಲ್‌ ಆಗ್ತಿದೆ. ಹಾಗಾದರೆ ಇದರ ಹಿಂದಿನ ಕಥೆ ಏನು? 

PREV
18
ಸ್ಪರ್ಧಿಗಳ ಸಮಾಗಮ

ಹೌದು, ಬಿಗ್‌ ಬಾಸ್‌ ಸ್ಪರ್ಧಿಗಳಾದ ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ, ಕರಿಬಸಪ್ಪ, ಧನುಷ್‌ ಗೌಡ, ಅಭಿಷೇಕ್‌ ಶ್ರೀಕಾಂತ್‌, ಸ್ಪಂದನಾ ಸೋಮಣ್ಣ, ಕಾವ್ಯ ಶೈವ, ಗಿಲ್ಲಿ ನಟ, ರಘು, ಧ್ರುವಂತ್‌, ಮಲ್ಲಮ್ಮ ಅವರು ಒಂದೆಡೆ ಸೇರಿದ್ದಾರೆ.

28
ವಿಡಿಯೋ ಹಂಚಿಕೊಂಡ ಧನುಷ್

ನಟ ಧನುಷ್‌ ಗೌಡ ಅವರು ಎಲ್ಲರ ಜೊತೆಗಿರುವ ವಿಶೇಷ ವಿಡಿಯೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಅಭಿಮಾನಿಗಳು ಕೂಡ ಗಿಲ್ಲಿ ಜೊತೆ ಫೋಟೋ ತೆಗೆಸಿಕೊಂಡ ಫೋಟೋಗಳು ವೈರಲ್‌ ಆಗ್ತಿದೆ.

38
ಕಾವ್ಯ ಶೈವ ಸೀರಿಯಲ್‌ ಮಾಡ್ತಾರಾ?

ಅಂದಹಾಗೆ ಕಾವ್ಯ ಶೈವ, ಗಿಲ್ಲಿ ನಟ ಅವರ ಫೋಟೋವೊಂದು ವೈರಲ್‌ ಆಗ್ತಿದೆ. ಇವರಿಬ್ಬರು ಹೊಸದಾಗಿ ಸಿನಿಮಾ ಮಾಡ್ತಿದ್ದಾರಾ? ಸೀರಿಯಲ್‌ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

48
ಭೇಟಿಗೆ ಕಾರಣ ಏನು?

ಅಂದಹಾಗೆ ಕಲರ್ಸ್‌ ಕನ್ನಡದಲ್ಲಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವೋ ಅಥವಾ ಬಿಗ್‌ ಬಾಸ್‌ ಸ್ಪರ್ಧಿಗಳಿಗೆಂದೇ ಕಾರ್ಯಕ್ರಮ ಮಾಡುತ್ತಿದ್ದಾರೋ ಏನೋ! ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳ ಸಮಾಗಮ ಆಗಿದೆ.

58
ಮನರಂಜನೆ

ಬಹುಶಃ ಎಲ್ಲ ಕಲಾವಿದರು ಡ್ಯಾನ್ಸ್‌, ಸ್ಕಿಟ್‌ ಎಂದು ಮನರಂಜನೆ ಕಾರ್ಯಕ್ರಮ ನೀಡಿರಬಹುದು.

68
ಗಿಲ್ಲಿ ನಟ ಡ್ಯಾನ್ಸ್‌

ಬಿಗ್‌ ಬಾಸ್‌ ಸ್ಪರ್ಧಿಗಳು ಭಾಗವಹಿಸಿದ್ದು, ಗಿಲ್ಲಿ ನಟ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

78
ಅಶ್ವಿನಿ ಗೌಡ, ಜಾನ್ವಿ ಮಿಸ್

ಈ ಇವೆಂಟ್‌ನಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಮಿಸ್‌ ಆದಂತಿದೆ. 

88
ಮುಂದಿನ ಪ್ರಾಜೆಕ್ಟ್‌ ಏನು?

ಸೂರಜ್‌ ಸಿಂಗ್‌ ಅವರು ಪವಿತ್ರ ಬಂಧನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಯಾರು ಯಾರು ಯಾವ ಪ್ರಾಜೆಕ್ಟ್‌ನಲ್ಲಿ ನಟಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories