ಗೌರಿಪುತ್ರ ಸೀರಿಯಲ್ ಮೊದಲ ಸಂಚಿಕೆ ಹೇಗಿತ್ತು? ಅಮ್ಮನ ತವರಿನ ರಹಸ್ಯ ಬೆನ್ನತ್ತಿದ ಮಗ

Published : Nov 16, 2026, 07:35 PM IST

ಜೀ ಕನ್ನಡದಲ್ಲಿ 'ಗೌರಿ ಪುತ್ರ' ಧಾರಾವಾಹಿಯ ಮೊದಲ ಸಂಚಿಕೆ ಪ್ರಸಾರವಾಗಿದೆ. ಧೈರ್ಯಶಾಲಿ ತಾಯಿ ಗೌರಿ ಹಾಗೂ ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗ ಕಾರ್ತಿಕ್ ಕಥೆ ಇದಾಗಿದೆ. ಮದುವೆ ವಾರ್ಷಿಕೋತ್ಸವದಲ್ಲಿ ಗೌರಿಯ ತವರು ಮನೆಯ ವಿಚಾರದ ಮೂಲಕ ಹೊಸ ಕುತೂಹಲ ಮೂಡಿದೆ.

PREV
15
ಜೀ ಕನ್ನಡದ ಬಹುನಿರೀಕ್ಷಿತ ಧಾರಾವಾಹಿ 'ಗೌರಿ ಪುತ್ರ'

ಜೀ ಕನ್ನಡದ ಬಹುನಿರೀಕ್ಷಿತ ಧಾರಾವಾಹಿ 'ಗೌರಿ ಪುತ್ರ' ಇಂದು ಪ್ರಸಾರವಾಗಿದೆ. ಮೊದಲ ಸಂಚಿಕೆಯಲ್ಲಿ ಗೌರಿ (ಅನು ಪ್ರಭಾಕರ್) ಯಾರು? ಗೌರಿ ಹೇಗೆ ಎಂಬದನ್ನು ತೋರಿಸಲಾಗಿದೆ. ಕೂಡು ಕುಟುಂಬದ ಸೊಸೆಯಾಗಿರುವ ಗೌರಿ, ಇಡೀ ಮನೆಗೆ ಬೆಳಗ್ಗೆ ಯೋಗ ಟೀಚರ್. ನಂತರ ಕಿಚನ್ ಸೇರಿಕೊಂಡು ಮನೆಯವರೆಲ್ಲರಿಗೂ ಬೇಕಾದ ಅಡುಗೆ ತಯಾರಿಸೋ ಅಮ್ಮ. ಇಲ್ಲಿಂದ ಗೌರಿ ನೇರವಾಗಿ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಾಳೆ.

25
ನೀಚರ ವಿರುದ್ಧ ಗೌರಿ ಸಮರ

ತನ್ನ ಎದುರಾಳಿಯಿದ್ದಲೇ ಹೋಗಿ ಚಾಲೆಂಜ್ ಹಾಕುವಷ್ಟು ಧೈರ್ಯವಂತೆ ಈ ಗೌರಿ. ತಮ್ಮ ಜಾಗ ಒತ್ತುವರಿ ಮಾಡಿಕೊಂಡ ನೀಚರ ವಿರುದ್ಧ ಗೌರಿ ಮೊದಲ ಸಂಚಿಕೆಯಲ್ಲಿ ಸಮರ ಸಾರಿದ್ದಾಳೆ. ಮೊದಲ ದಿನ ಗೌರಿ ಅಂದ್ರೆ ಬೆಂಕಿ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಇನ್ನು ಅಮ್ಮನ ತಂಟೆಗೆ ಬಂದ್ರೆ ಯಾವುದನ್ನೂ ನೋಡದೇ ಹೊಡೆದಾಕುವ ಮಗನೇ ಈ ಗೌರಿ ಪುತ್ರ.

35
ಗೌರಿ ಪುತ್ರನ ಮಾಸ್ ಎಂಟ್ರಿ

ಗೌರಿ ಪುತ್ರ ಕಾರ್ತಿಕ್ (ರಿತ್ವಿಕ್) ಎಂಟ್ರಿ ಮಾಸ್ ಆಗಿ ತೋರಿಸಲಾಗಿದೆ. ತಾಯಿಯನ್ನು ಅವಮಾನಿಸಿದ ಕಿಡಿಗೇಡಿಗಳು ಪುಡಿ ಪುಡಿ ಮಾಡಿ, ಎಲ್ಲರಿಗೂ ವಾರ್ನಿಂಗ್ ಮಾಡಿದ್ದಾನೆ ಕಾರ್ತಿಕ್. ಈ ಮೂಲಕ ಕಾರ್ತಿಕ್‌ಗೆ ಅಮ್ಮ ಅಂದ್ರೆ ಎಷ್ಟು ಪ್ರೀತಿ ಮತ್ತು ಗೌರವ ಎಂಬುದನ್ನು ತೋರಿಸಲಾಗಿದೆ. ನಂತರ ಇಲ್ಲಿಂದ ಅಮ್ಮ-ಮಗನ ನಡುವಿನ ಬಾಂಧವ್ಯದ ದೃಶ್ಯಗಳು ಪ್ರಸಾರವಾಗುತ್ತದೆ.

45
28ನೇ ಮದುವೆ ವಾರ್ಷಿಕೋತ್ಸವ

ದೇವರ ಮೆರವಣಿಗೆ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಅನ್ನೋ ಅಮ್ಮನ ಆಸೆಯನ್ನು ಕಾರ್ತಿಕ್ ಈಡೇರಿಸುತ್ತಾನೆ. ಪ್ರತಿದಿನ ಪ್ರತಿಕ್ಷಣ ಅಮ್ಮನ ಮುಖದಲ್ಲಿ ನೋಡಬೇಕು ಅನ್ನೋದೇ ಕಾರ್ತಿಕ್ ಆಸೆ. ಮೊದಲ ಸಂಚಿಕೆಯಲ್ಲಿ ಗೌರಿಯ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನು ತೆಗೆದುಕೊಂಡು ಬರಲಾಗಿದೆ. ಇನ್ನುಳಿದಂತೆ ಎಲ್ಲಾ ಪಾತ್ರಗಳ ಸಣ್ಣ ಪರಿಚಯವನ್ನು ಮಾಡಿಸಲಾಗಿದೆ. ಗೌರಿ ಮತ್ತು ರಾಘವೇಂದ್ರ ಜೋಡಿಯ 28ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಕುಟುಂಬಸ್ಥರೆಲ್ಲರೂ ವಿವಾಹವನ್ನು ಮರುಸೃಷ್ಟಿಸಲಾಗಿದೆ.

55
ಅಮ್ಮನ ತವರು

ತಂದೆ-ತಾಯಿ ಮದುವೆಯಲ್ಲಿ ಮಗ ಕಾರ್ತಿಕ್ ಡೊಳ್ಳು ಬಾರಿಸುತ್ತಾ ಇಬ್ಬರನ್ನು ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ. ಮಡಿಲುಶಾಸ್ತ್ರಕ್ಕೆ ಹೆಣ್ಣಿನ ತವರಿನವರನ್ನು ಶಾಸ್ತ್ರಿಗಳು ಆಹ್ವಾನಿಸುತ್ತಾರೆ. ಇದರಿಂದ ಭಾವುಕರಾದ ಗೌರಿ, ನನಗೆ ತವರು ಇಲ್ಲ ಎಂದು ಮಂಟಪದಿಂದ ಹೊರ ನಡೆಯುತ್ತಾಳೆ. ಈ ವೇಳೆ ತಂದೆಗೆ ಅಮ್ಮನ ತವರಿನ ಬಗ್ಗೆ ಕಾರ್ತಿಕ್ ಕೇಳುತ್ತಾನೆ. ಮೊದಲ ಸಂಚಿಕೆಯಾಗಿದ್ದರಿಂದ ಯಾವುದೇ ಜಾಹೀರಾತು ಇಲ್ಲದೇ ಪ್ರಸಾರ ಮಾಡಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories