ಹೊಸ ಜೀವನಕ್ಕೆ‌‌ ಕಾಲಿಡಲು ರೆಡಿಯಾದ ಹಿಟ್ಲರ್ ಕಲ್ಯಾಣ ನಟ ಶೌರ್ಯ

Published : May 03, 2025, 05:21 PM ISTUpdated : May 05, 2025, 11:55 AM IST

ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟ ಹಾಗೂ ಮಾಡೆಲ್ ಆಗಿರುವ ಶೌರ್ಯ ಶಶಾಂಕ್ ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.   

PREV
17
ಹೊಸ ಜೀವನಕ್ಕೆ‌‌ ಕಾಲಿಡಲು ರೆಡಿಯಾದ ಹಿಟ್ಲರ್ ಕಲ್ಯಾಣ ನಟ ಶೌರ್ಯ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಹಿಟ್ಲರ್ ಕಲ್ಯಾಣದಲ್ಲಿ (Hitler Kalyana) ಪೋಲೀಸ್ ಇನ್ಸ್ಪೆಕ್ಟರ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದ ನಟ ಶೌರ್ಯ ನೆನಪಿದ್ದಾರ? ಖಂಡಿತಾ ನೆನಪಿರಬೆಕು ಅಲ್ವಾ? ತಮ್ಮ ಖಡಕ್ ವಿಲನ್ ಪಾತ್ರದ ಮೂಲಕ ಸದ್ದು ಮಾಡಿದ ನಟ. 
 

27

ದೇವ್ ಪಾತ್ರದ ಮೂಲಕ ಖ್ಯಾತಿ ಪಡೆದ ನಟ ಹಾಗೂ ಮಾಡೆಲ್ ಆಗಿರುವ ಶೌರ್ಯ ಶಶಾಂಕ್ (Shourya Shashank) ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. 

37

ಶೌರ್ಯ ಶಶಾಂಕ್ ಮಾಡೆಲ್ ಆಗಿದ್ದು, ಇದರ ಜೊತೆಗೆ ಶೌರ್ಯ ಫೋಟೋಗ್ರಾಫಿ (Photography) ಎನ್ನುವ ತಮ್ಮದ್ದೇ ಸ್ಟುಡಿಯೋ ಕೂಡ ಇಟ್ಟುಕೊಂಡಿದ್ದರು, ವೆಡ್ಡಿಂಗ್ ಫೋಟೊಗ್ರಾಫಿಗಳನ್ನು ಸಹ ಇವರು ಮಾಡುತ್ತಿದ್ದರು. 
 

47

ಶೌರ್ಯ ಶಶಾಂಕ್ ನಿಶ್ಚಿತಾರ್ಥ ಫೋಟೊಗಳು (engagement photos) ಉಂಗುರ ತೊಡಿಸುವ ಫೋಟೊಗಳು, ಕೇಕ್ ಕತ್ತರಿಸುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇವರು ಬೆಂಗಳೂರಿನ ಹುಡುಗಿ ದಿಶಾ ಜಾದವ್ ಅವರ ಕೈ ಹಿಡಿದಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. 
 

57

ಶೌರ್ಯ ಹಾಗೂ ದಿಶಾ ಅವರ ಗುಣಗಳು ಮ್ಯಾಚ್ ಆಗಿರೋದ್ರಿಂದ ಇಬ್ಬರೂ ಮದುವೆಗೆ ಓಕೆ ಎಂದಿದ್ದು, ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ (marriage) ಕಾಲಿಡಲಿದ್ದಾರೆ ಎನ್ನಲಾಗಿದೆ. ಆದರೆ ಮದುವೆ ಯಾವಾಗ? ಎಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. 
 

67

ಶೌರ್ಯ ಹಿಟ್ಲರ್ ಕಲ್ಯಾಣ ಅಲ್ಲದ್ದೇ, ಪುಟ್ಟ ಗೌರಿಯ ಮದುವೆ, ಹರಹರ ಮಹಾದೇವ್ (Harahara Mahadeva) ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಇನ್ನು ತಮಿಳು ಸೀರಿಯಲ್ ನಲ್ಲೂ ನಟಿಸಿರುವ ಶೌರ್ಯ ‘ವಿಕ್ಟಿಮ್ ಎಕ್ಸ್’ ಎನ್ನುವ ಶಾರ್ಟ್ ಮೂವಿಗೂ ಬಣ್ಣ ಹಚ್ಚಿದ್ದಾರೆ. 
 

77

ಸದ್ಯ ನಟನೆಯಿಂದ ದೂರ ಇದ್ದು, ಫೋಟೊಗ್ರಾಫಿ ಕಡೆ ಹೆಚ್ಚು ಗಮನ ಹರಿಸಿದ್ದಾರೆ ಶೌರ್ಯ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಖತ್ ಸ್ಟೈಲಿಶ್ ಆಗಿರುವ ಫೋಟೊಗಳನ್ನು ಸಹ ಶೇರ್ ಮಾಡುತ್ತಲೇ ಇರುತ್ತಾರೆ. 
 

Read more Photos on
click me!

Recommended Stories