ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿಯು, ಜೈಲಿನಲ್ಲಿರುವ ತಾಯಿಯಿಂದ ಬೇರ್ಪಟ್ಟ ಮಗುವಿನ ಕಣ್ಣೀರಿನ ಕಥೆಯಾಗಿದೆ. ಆರು ವರ್ಷಗಳ ನಂತರ ಜೈಲಿನಿಂದ ಹೊರಬಂದ ರಾಣಿಯ ಒಂಟಿ ಪಯಣ ಮತ್ತು ಅವಳ ತಂದೆಯೇ ಖಳನಾಯಕನಾಗಿರುವ ಈ ಕಥೆಯು ತೆಲುಗಿನ 'ಚಿನ್ನಿ' ಧಾರಾವಾಹಿಯ ರಿಮೇಕ್ ಆಗಿದೆ.
ಸದ್ಯ ಜೀ ಕನ್ನಡದಲ್ಲಿ ಸೀರಿಯಲ್ ವೀಕ್ಷಕರ ಕಣ್ಣುಗಳನ್ನು ಒದ್ದೆ ಮಾಡುತ್ತಿರುವ ಪುಟಾಣಿ ರಾಣಿ. ಜೈಲಿನಲ್ಲಿ ಇರುವ ಅಮ್ಮನ ಜೊತೆ ಪುಟಾಣಿ ರಾಣಿ ಅಲ್ಲಿಯ ಮುದ್ದಿನ ಮಗಳಾಗಿದ್ದಳು. ಆದರೆ ಆರು ವರ್ಷ ಆದ ಮೇಲೆ ಮಗುವಿಗೆ ಅಮ್ಮನ ಜೊತೆ ಜೈಲಿನಲ್ಲಿ ಇರಲು ಕಾನೂನಿನಲ್ಲಿ ಅವಕಾಶವಿಲ್ಲ. ಅದೇ ರೀತಿ ರಾಣಿಯನ್ನೂ ಹೊರಕ್ಕೆ ಕಳುಹಿಸಲಾಗಿದೆ.
26
ಕಣ್ಣೀರಾದ ವೀಕ್ಷಕರು
ಒಂಟಿಯಾಗಿರೋ ರಾಣಿ ಅಮ್ಮನಿಗಾಗಿ ಹಂಬಲಿಸಿದರೆ, ಅತ್ತ ಕಂದಮ್ಮನನ್ನು ಒಂಟಿಯಾಗಿ ಬಿಟ್ಟು ಜೈಲಿನಲ್ಲಿ ಕಣ್ಣೀರಾಗಿರುವ ಅಮ್ಮನ ಕಣ್ಣೀರಿನ ಸ್ಟೋರಿ ರಾಣಿ. ಇದರ ಪ್ರೊಮೋ ನೋಡಿಯೇ ಅದೆಷ್ಟೋ ಮಂದಿ ಕಣ್ಣೀರಾಗಿದ್ದು ಇದೆ. ತೆಲುಗು ಸೀರಿಯಲ್ ಚಿನ್ನಿಯ ರೀಮೇಕ್ ಆಗಿರೋ ರಾಣಿ ನಿನ್ನೆ ಸೋಮವಾರದಿಂದ ಪ್ರಸಾರ ಆಗ್ತಿದೆ.
36
ಬಿಗ್ಬಾಸ್ ವಿನ್ನರ್ ಗಿಲ್ಲಿ
ಇದೀಗ ರಾಣಿ ಸೀರಿಯಲ್ ಪ್ರಮೋಷನ್ಗೆ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟನನ್ನು ಬಳಸಿಕೊಳ್ಳಲಾಗಿದೆ. ಗಿಲ್ಲಿ ಅಂಕಲ್ ನನಗೆ ಯಾರೂ ಇಲ್ಲ ರಾಣಿ ಕಣ್ಣೀರು ಹಾಕುತ್ತಾ ಬರುತ್ತಾಳೆ.
ಆಗ ಗಿಲ್ಲಿ ನಟ, ನಿನ್ನ ಜೊತೆ ನಾವೆಲ್ಲಾ ಇದ್ದೇವೆ. ನನ್ನ ಜೊತೆ ಇಡೀ ಕರ್ನಾಟಕದ ಮಂದಿ ಇದ್ದರು. ನಿನ್ನ ಜೊತೆಯೂ ಅವರೆಲ್ಲರೂ ಇರುತ್ತಾರೆ. ನಿನ್ನ ಕಾಳಜಿ ಮಾಡುತ್ತಾರೆ ಎನ್ನುವ ಮೂಲಕ ಗಿಲ್ಲಿ ನಟ (Bigg Boss Gilli Nata) ಈ ಸೀರಿಯಲ್ ನೋಡುವಂತೆ, ಸೀರಿಯಲ್ ಪರ ನಿಲ್ಲುವಂತೆ ಪರೋಕ್ಷವಾಗಿ ಪ್ರಚಾರ ಮಾಡಿದ್ದಾರೆ.
56
ನಟರು ಇವರೇ
ರಾಣಿಯಾಗಿ ಬಾಲಕಿ ಧನ್ವಿ, ಅಮ್ಮನಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಅಪ್ಪ ಅರ್ಜುನ್ ಆಗಿ ನಟಿಸುತ್ತಿರುವವರು ಆರವ್ ಸೂರ್ಯ. ಸದ್ಯ ಜೈಲಿನಿಂದ ಸ್ಟೋರಿ ಶುರುವಾಗುವ ಕಾರಣ, ಅಪ್ಪನ ರೋಲ್ ಬರಲು ಒಂದಷ್ಟು ದಿನ ಬೇಕಾಗುತ್ತದೆ.
66
ರಾಣಿಯ ಅಪ್ಪನಾಗಿ
ಅಷ್ಟಕ್ಕೂ, ರಾಣಿ ಸೀರಿಯಲ್ ತೆಲುಗುವಿನ ಚಿನ್ನಿ ಸ್ಟೋರಿ ರೀಮೇಕ್ ಆಗಿದೆ. ಇದರಲ್ಲಿ ಅಪ್ಪನೇ ವಿಲನ್. ಆ ಪಾತ್ರ ಮಾಡುತ್ತಿರುವವರು ನಟ ಆರವ್ ಸೂರ್ಯ (Arav Surya). ಸ್ಟಾರ್ ಸುವರ್ಣ ವಾಹಿನಿಯ ಜೇನುಗೂಡು’ ಸೀರಿಯಲ್ನಲ್ಲಿ ನಾಯಕನಾಗಿ ನಟಿಸಿದ್ದ ಇವರು ಇದೀಗ ಇದರಲ್ಲಿ ರಾಣಿಯ ಅಪ್ಪ ಆಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.