Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

Published : Mar 10, 2026, 01:21 PM IST

'ಕರ್ಣ' ಧಾರಾವಾಹಿಯಲ್ಲಿ ರಿಯಾ ಮತ್ತು ಸಂಜಯ್ ನಡುವೆ ಹೊಸ ಪ್ರೇಮಕಥೆ ಶುರುವಾಗಿದೆ. ಈ ರಿಯಾ ಪಾತ್ರಧಾರಿ ಅಂಕಿತಾ ಜಯರಾಮ್, ಮರವೇರುವ ದೃಶ್ಯದ ಚಿತ್ರೀಕರಣದ ಹಿಂದಿನ ಕಷ್ಟವನ್ನು ಹಂಚಿಕೊಂಡಿದ್ದು, ಅವರ ನಟನಾ ಪಯಣದ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.

PREV
16
ರಿಯಾ ಮತ್ತು ಸಂಜಯ್​ ಲವ್​ಸ್ಟೋರಿ

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಒಂದೆಡೆ ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ವಿಲನ್​ ರಮೇಶ್​ ಸಕ್ಸಸ್​ ಆಗಿದ್ರೆ, ಅದೇ ಇನ್ನೊಂದೆಡೆ ರಿಯಾ ಮತ್ತು ಸಂಜಯ್​ ಲವ್​ಸ್ಟೋರಿ ಶುರುವಾಗುವಲ್ಲಿದೆ. ಎಲೆ ತೆಗೆಯಲು ಮರ ಏರುವ ರಿಯಾ ಕಾಲು ಜಾರಿ ಕೆಳಗೆ ಬಿದ್ದು ಸಂಜಯ್​ನ ತೋಳಿನಲ್ಲಿ ಬಂಧಿಯಾಗುತ್ತಾಳೆ. ಅಲ್ಲಿಂದ ಅವರಿಬ್ಬರ ಲವ್​ಸ್ಟೋರಿ ಶುರುವಾಗುತ್ತದೆ.

26
ಮರದಲ್ಲಿ ಲವ್​ಸ್ಟೋರಿ

ಆದರೆ ಇದೇ ಲವ್​ಸ್ಟೋರಿ ಶುರುವಾಗಲು ಮರ ಏರುವಾಗ ರಿಯಾ ಅರ್ಥಾತ್​ ನಟಿ ಅಂಕಿತಾ ಜಯರಾಮ್​ ಹೇಗೆಲ್ಲಾ ಕಷ್ಟಪಟ್ಟರು ಎನ್ನುವ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

36
ಇಳಿಯೋದು ಕಷ್ಟ

ಹೇಗೋ ಕಷ್ಟಪಟ್ಟು ಮರ ಏರಿಬಿಟ್ಟೆ. ಆದರೆ ಮರ ಇಳಿಯುವುದು ಮಾತ್ರ ಸಿಕ್ಕಾಪಟ್ಟೆ ಕಷ್ಟ ಆಯ್ತು ಎಂದಿದ್ದಾರೆ ನಟಿ. ಇದರ ವಿಡಿಯೋ ಅನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆ ankithajayarama ಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮರ ಏರುವಾಗ ಮತ್ತು ಇಳಿಯುವಾಗ ಮಾಡಿರುವ ಸರ್ಕಸ್​ ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

46
ಯಾರೀ ರಿಯಾ?

ಅಷ್ಟಕ್ಕೂ ರಿಯಾ ಅರ್ಥಾತ್​ ಅಂಕಿತಾ ಜಯರಾಮ್​ (Ankitha Jayarama) ಅವರು, ಇದಾಗಲೇ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದವರು. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು.

56
ಸ್ಟಾರ್​ ನಟರ ಜೊತೆ

ಅಂಕಿತಾ ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.

66
ನಾಯಕಿಯಾಗಿ ನಟನೆ

ಕಳೆದ ವರ್ಷ ಬಿಡುಗಡೆಯಾದ ‘ಕಾಗದ’ ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು. 16 ವರ್ಷ ವಯಸ್ಸಿನ ಅಂಕಿತಾ ಸದ್ಯ ಪಿಯುಸಿ ಓದುತ್ತಿದ್ದು, ಇದೀಗ ಕರ್ಣ ಧಾರಾವಾಹಿಗೆ ರಿಯಾ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories